ನಾಗರಮಡವು ಗ್ರಾಮದಲ್ಲಿ ಪ್ರತಿಭಾ ಪುರಸ್ಕಾರ ಜೂ. 9ರಂದು

SRT sanmana
Published on

ಶಿರಹಟ್ಟಿ: ಎಸ್ಸೆಸ್ಸೆಲ್ಸಿ, ಪಿಯುಸಿ ಪರೀಕ್ಷೆಯಲ್ಲಿ ಶೇ. 75ಕ್ಕಿಂತ ಹೆಚ್ಚು ಅಂಕ ಪಡೆದ ತಾಲೂಕಿನ ಕುರುಬ ಸಮಾಜದ ವಿದ್ಯಾರ್ಥಿಗಳಿಗೆ ಕರ್ನಾಟಕ ಕುರುಬರ ಸಂಘದಿಂದ ಜೂ. 9ರಂದು ನಾಗರಮಡವು ಗ್ರಾಮದಲ್ಲಿ ಪ್ರತಿಭಾ ಪುರಸ್ಕಾರ ಸಮಾರಂಭ ಏರ್ಪಡಿಸಲಾಗಿದೆ ಎಂದು ಸಂಘದ ತಾಲೂಕು ಅಧ್ಯಕ್ಷ ಹೊನ್ನೇಶ ಕೋಟಿ ಹೇಳಿದರು.

ಪಟ್ಟಣದ ಬೀರೇಶ್ವರ ದೇವಸ್ಥಾನದಲ್ಲಿ ಭಾನುವಾರ ಏರ್ಪಡಿಸಿದ್ದ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು.
ಪಪಂ ಸದಸ್ಯ ಮಂಜುನಾಥ ಘಂಟಿ ಮಾತನಾಡಿ, ಕಾರ್ಯಕ್ರಮಕ್ಕೆ ರಾಜ್ಯ ಮಟ್ಟದ ಕುರುಬ ಸಮಾಜದ ನಾಯಕರು ಆಗಮಿಸಲಿದ್ದಾರೆ. ಕಾರ್ಯಕ್ರಮದ ಖರ್ಚುವೆಚ್ಚವನ್ನು ಗ್ರಾಪಂ ಅಧ್ಯಕ್ಷ ಮೈಲಾರೆಪ್ಪ ಹಾದಿಮನಿ ವಹಿಸಿಕೊಂಡಿದ್ದು ಪ್ರತಿವರ್ಷ ತಾಲೂಕಿನ ಬೇರೆ ಬೇರೆ ಗ್ರಾಮಗಳಲ್ಲಿ ಆಯೋಜಿಸಲಾಗುತ್ತಿದೆ ಎಂದರು. ಪದವಿ ವಿದ್ಯಾರ್ಥಿಗಳಿಗೆ ರಾಜ್ಯ ಮಟ್ಟದಲ್ಲಿ ಐಎಎಸ್, ಐಪಿಎಸ್, ಕೆಎಎಸ್, ಪಿಎಸ್‌ಐ ತರಬೇತಿ ನೀಡಲು ರಾಜ್ಯ ಮಟ್ಟದ ನಾಯಕರು ಚಿಂತನೆ ನಡೆಸಿದ್ದು, ಇದು ಪ್ರತಿಭಾವಂತ ಬಡಮಕ್ಕಳಿಗೆ ಅತ್ಯುಪಯುಕ್ತ ಕಾರ್ಯವಾಗಲಿದೆ ಎಂದರು.

ಅರ್ಹ ವಿದ್ಯಾರ್ಥಿಗಳು ಅಂಕಪಟ್ಟಿ, ಭಾವಚಿತ್ರ ಹಾಗೂ ದಾಖಲೆಗಳೊಂದಿಗೆ ಜೂ.5ರೊಳಗೆ ಹೊನ್ನೇಶ ಕೋಟಿ, ಆನಂದ ಮಾಳೇಕೊಪ್ಪ ಅವರನ್ನು ಸಂಪರ್ಕಿಸಲು ಕೋರಲಾಗಿದೆ. ಸಭೆಯಲ್ಲಿ ರಾಮಣ್ಣ ಕಂಬಳಿ, ದೇವಪ್ಪ ಬಟ್ಟೂರ, ಗ್ರಾಪಂ ಅಧ್ಯಕ್ಷ ಮೈಲಾರೆಪ್ಪ ಮೇಟಿ, ವೆಂಕನಗೌಡ ಪಾಟೀಲ, ಪ್ರಕಾಶ ಹೋರಿ, ಬಿ.ವಿ. ಚನ್ನಮ್ಮನವರ, ಹನುಮಂತ ಗೊಜನೂರ, ಪ್ರಕಾಶ ಆನೆಪ್ಪನವರ, ದೇವಪ್ಪ ಕುದರಿ, ಸಿದ್ದಪ್ಪ ನೆರ್ತಿ, ಶಿವಪ್ಪ ಹರ್ತಾಳ, ಮಂಜು ಹಮ್ಮಿಗಿ, ಮಹೇಶ ಹುರಕಣ್ಣವರ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net