ಹುಬ್ಬಳ್ಳಿ: ನಗರದ ಸವಾಯಿ ಗಂಧರ್ವ ಸಭಾಭವನದಲ್ಲಿ ಆ. 9ರಂದು ಸಂಜೆ 4.30ಕ್ಕೆ ಹುಬ್ಬಳ್ಳಿ ಜಂಗಮ ಅಭಿವೃದ್ಧಿ ಸಂಘ ಹಾಗೂ ದೀಕ್ಷಾ ಚಾರಿಟಬಲ್ ಫೌಂಡೇಷನ್ ವತಿಯಿಂದ ಪ್ರತಿಭಾ ಪುರಸ್ಕಾರ ಹಾಗೂ ಸಾಧಕರಿಗೆ ಸನ್ಮಾನ ಕಾರ್ಯಕ್ರಮ ಆಯೋಜಿಸಲಾಗಿದೆ.
ಸೂಡಿ ಜುಕ್ತಿ ಹಿರೇಮಠದ ಶ್ರೀ ಕೊಟ್ಟೂರು ಬಸವೇಶ್ವರ ಶಿವಾಚಾರ್ಯ ಸ್ವಾಮೀಜಿ ಸಾನ್ನಿಧ್ಯ ವಹಿಸುವರು. ಸಂಘದ ಕಾರ್ಯಾಧ್ಯಕ್ಷ ಜಗದೀಶ ಕೂಡಲಮಠ ಅಧ್ಯಕ್ಷತೆ ವಹಿಸುವರು. ಉದ್ಯಮಿ ಜಗದೀಶ ಹಿರೇಮಠ ಉದ್ಘಾಟಿಸುವರು. ಗಣ್ಯ ವ್ಯಾಪಾರಸ್ಥ ಜಿ.ಎಂ. ಚಿಕ್ಕಮಠ, ಫೌಂಡೇಷನ್ ಗೌರವಾಧ್ಯಕ್ಷ ಎನ್.ಎ. ಚರಂತಿಮಠ, ಸಂಘದ ಗೌರವಾಧ್ಯಕ್ಷ ಆರ್.ಎಂ. ಹಿರೇಮಠ, ಕೆಎಲ್ಇ ತಾಂತ್ರಿಕ ವಿವಿ ಸಹಾಯಕ ಪ್ರಾಧ್ಯಾಪಕ ಜಿ.ಎಂ. ಹಿರೇಮಠ ಅತಿಥಿಗಳಾಗಿ ಪಾಲ್ಗೊಳ್ಳುವರು.