ಮಡಿವಾಳ ಸಮಾಜದಿಂದ ಪ್ರತಿಭಾ ಪುರಸ್ಕಾರ

G.VENKTESH
G.VENKTESH
Published on

ರಾಯಚೂರು ಮಡಿವಾಳ ಸಮಾಜದ ಯುವ ಘಟಕದಿಂದ ಪ್ರತಿವರ್ಷದಂತೆ ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿಯಲ್ಲಿ ಶೇ.80 ಅಂಕ ಪಡೆದು ತೇರ್ಗಡೆಯಾದ ಸಮಾಜದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಗುತ್ತದೆ ಎಂದು ಯುವ ಘಟಕದ ಅಧ್ಯಕ್ಷ ಜಿ.ವೆಂಕಟೇಶ ಮಡಿವಾಳ ಹೇಳಿದರು.

ನಗರದ ಪತ್ರಿಕಾ ಭವನದಲ್ಲಿ ಶುಕ್ರವಾರ ಮಾತನಾಡಿ, ಶೇ.80 ಅಂಕ ಪಡೆದ ವಿದ್ಯಾರ್ಥಿಗಳು ಎಸ್‌ಎಸ್‌ಎಲ್‌ಸಿ, ಪಿಯುಸಿ ಅಂಕಪಟ್ಟಿ, ಜಾತಿ ಪ್ರಮಾಣ ಪತ್ರ, ಒಂದು ಭಾವಚಿತ್ರದೊಂದಿಗೆ ಜೂ.1 ರೊಳಗೆ ಸ್ವಾತಿ ಆಪ್ಟಿಕಲ್ಸ್ ನ ಯು.ಆಂಜಿನಯ್ಯ ರಾಯಚೂರು(9448219195), ಬಜಾರಪ್ಪ (9448221143, ದಂಡಿನ ಶಿವುಕುಮಾರ (9845337840) ಅವರಿಗೆ ನೊಂದಾಯಿಸಿಕೊಳ್ಳಬೇಕು. ಜೂ.15 ರೊಳ ೆಕಾರ್ಯಕ್ರಮ ನಿಗಧಿಗೊಳಿಸಲಾಗುತ್ತದೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಶಿವುಕುಮಾರ, ಆಶೋಕ, ಜಿ.ವೀರೇಶ, ಜಿ.ಗುರುಸ್ವಾಮಿ, ವೀರೇಶ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net