ಅನ್ಯಾಯವನ್ನು ಸವಾಲಾಗಿ ಸ್ವೀಕರಿಸುವ ಗುಣ: ಉಳಿಯ ಶ್ರೀ ಧರ್ಮರಸು ಕ್ಷೇತ್ರದ ಅಂತು ಗುರಿಕಾರ ಆಶಯ

uliya
ಕುತ್ತಾರಿನಲ್ಲಿ ಭಾನುವಾರ ಗಾಳದ ಕೊಂಕಣಿ ಅಭ್ಯುದಯ ಸಂಘದ ವಾರ್ಷಿಕ ಮಹಾಸಭೆ, ಪ್ರತಿಭಾ ಪುರಸ್ಕಾರ, ಸನ್ಮಾನ, ವಿದ್ಯಾರ್ಥಿಗಳಿಗೆ ಪುಸ್ತಕ ವಿತರಣಾ ಕಾರ್ಯಕ್ರಮ ನಡೆಯಿತು. ಉಳಿಯ ಶ್ರೀ ಧರ್ಮರಸು ಕ್ಷೇತ್ರದ ಅಂತು ಗುರಿಕಾರ, ಶ್ರೀ ಕ್ಷೇತ್ರ ಸೋಮನಾಥ ಉಳಿಯ ಆಡಳಿತ ಸಮಿತಿ ಮಾಜಿ ಅಧ್ಯಕ್ಷ ಜೆ.ರವೀಂದ್ರ ನಾಯಕ್, ಗಾಳದ ಕೊಂಕಣಿ ಅಭ್ಯುದಯ ಸಂಘದ ಅಧ್ಯಕ್ಷ ನರಸಿಂಹ ನಾಯಕ್ ಹರೇಕಳ ಮೊದಲಾದವರಿದ್ದರು.
Published on

ವಿಜಯವಾಣಿ ಸುದ್ದಿಜಾಲ ಉಳ್ಳಾಲ

ಸಮಾಜಕ್ಕೆ ಆಗುವ ಅನ್ಯಾಯವನ್ನು ಸವಾಲಾಗಿ ಸ್ವೀಕರಿಸಬೇಕು. ಅದನ್ನು ಎದುರಿಸುವ ಮನೋಭಾವ ಬೆಳೆಸಿಕೊಳ್ಳುವುದು ಅತೀ ಅಗತ್ಯ ಎಂದು ಉಳ್ಳಾಲ ಉಳಿಯ ಶ್ರೀ ಧರ್ಮರಸು ಕ್ಷೇತ್ರದ ಅಂತು ಗುರಿಕಾರ ಹೇಳಿದರು.

ಕುತ್ತಾರಿನಲ್ಲಿ ಭಾನುವಾರ ಗಾಳದ ಕೊಂಕಣಿ ಅಭ್ಯುದಯ ಸಂಘದ ವಾರ್ಷಿಕ ಮಹಾಸಭೆ, ಪ್ರತಿಭಾ ಪುರಸ್ಕಾರ, ಸನ್ಮಾನ, ವಿದ್ಯಾರ್ಥಿಗಳಿಗೆ ಉಚಿತ ಪುಸ್ತಕ ವಿತರಣಾ ಕಾರ್ಯಕ್ರಮದಲ್ಲಿ ಮಾತನಾಡಿದರು.

ಎಸ್ಸೆಸ್ಸೆಲ್ಸಿ ಮತ್ತು ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ಸಮುದಾಯದ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು. ವಕೀಲ ಜೆ.ರವೀಂದ್ರ ನಾಯಕ್ ಪಾಂಡೇಶ್ವರ, ಹಿರಿಯರಾದ ವೇದಾವತಿ ಎಸ್.ನಾಯಕ್ ಕೊಂಚಾಡಿ ಅವರನ್ನು ಸನ್ಮಾನಿಸಲಾಯಿತು. ಕ್ರೀಡಾಕೂಟ, ವಿವಿಧ ಸ್ಪರ್ಧೆಗಳ ವಿಜೇತರಿಗೆ ಬಹುಮಾನ ಹಾಗೂ ಐವರು ಅಂಗವಿಕಲರಿಗೆ ಧನಸಹಾಯ ವಿತರಿಸಲಾಯಿತು.

ಶ್ರೀ ಕ್ಷೇತ್ರ ಸೋಮನಾಥ ಉಳಿಯ ಆಡಳಿತ ಸಮಿತಿ ಮಾಜಿ ಅಧ್ಯಕ್ಷ ಜೆ.ರವೀಂದ್ರ ನಾಯಕ್ ಉದ್ಘಾಟಿಸಿದರು. ಗಾಳದ ಕೊಂಕಣಿ ಅಭ್ಯುದಯ ಸಂಘದ ಅಧ್ಯಕ್ಷ ನರಸಿಂಹ ನಾಯಕ್ ಹರೇಕಳ ಅಧ್ಯಕ್ಷತೆ ವಹಿಸಿದ್ದರು. ಶ್ರೀ ಕ್ಷೇತ್ರದ ಅಧ್ಯಕ್ಷ ಉಮಾನಾಥ ನಾಯಕ್ ಉಳ್ಳಾಲ್, ಗೌರವಾಧ್ಯಕ್ಷ ಯು.ದಯಾನಂದ ನಾಯಕ್ ಕುಲಶೇಖರ, ಶ್ರೀ ಸೋಮೇಶ್ವರೀ ಮಹಿಳಾ ಮಂಡಲದ ಅಧ್ಯಕ್ಷೆ ಜಯಶೀಲಾ ಯು.ನಾಯಕ್, ಸಂಘದ ಉಪಾಧ್ಯಕ್ಷ ಯೋಗೀಶ್ ನಾಯಕ್ ಪಂಪ್‌ವೆಲ್ ಉಪಸ್ಥಿತರಿದ್ದರು.

ಸಂಘದ ಉಪಾಧ್ಯಕ್ಷೆ ಆಶಾ ನಾಯಕ್ ಗೋರಿಗುಡ್ಡೆ ಸ್ವಾಗತಿಸಿದರು. ಕೋಶಾಧಿಕಾರಿ ಡಾ.ಧನಲಕ್ಷ್ಮೀ ಎಂ.ನಾಯಕ್ ವರದಿ ವಾಚಿಸಿದರು. ಪ್ರಧಾನ ಕಾರ್ಯದರ್ಶಿ ಮುರಳೀಧರ್ ನಾಯಕ್ ಬಬ್ಬುಕಟ್ಟೆ ಲೆಕ್ಕಪತ್ರ ಮಂಡಿಸಿದರು. ಕಾರ್ಯದರ್ಶಿ ವೆಂಕಟೇಶ್ ಬಂಟ್ವಾಳ ಕಾರ್ಯಕ್ರಮ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net