ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ

14kkr2( 12-24 marenali lokes
ಕಿಕ್ಕೇರಿ ಹೋಬಳಿಯ ಸಾಸಲು ಶಂಭುಲಿಂಗೇಶ್ವರ ಮಕ್ಕಳಿಗೆ ಅತ್ತಿಗುಪ್ಪೆ ಸಾಹಿತ್ಯ ಬಳಗದಿಂದ ಶುಕ್ರವಾರ ಪುಸ್ತಕ ವಿತರಿಸಿದರು. ಮಾರೇನಹಳ್ಳಿ ಲೋಕೇಶ್, ಶಾಂತಪ್ಪಾಜಿ, ವಿ.ಜಿ. ಮಲ್ಲಿಕಾರ್ಜುನಸ್ವಾಮಿ, ತ್ರಿವೇಣಿ, ಪಾಪಣ್ಣ, ಮಧು ಮತ್ತಿತರರಿದ್ದರು.
Published on

ಕಿಕ್ಕೇರಿ: ಸಾಹಿತ್ಯ ತಿಳಿದು ಸ್ಥಳೀಯ ಘಟನಾವಳಿ, ಪ್ರಮುಖ ಮಾಹಿತಿಗಳನ್ನು ತಿಳಿಯಲು ಮುಂದಾಗಬೇಕು ಎಂದು ಅತ್ತಿಗುಪ್ಪೆ ಸಾಹಿತ್ಯ ಬಳಗ ಅಧ್ಯಕ್ಷ ಮಾರೇನಹಳ್ಳಿ ಲೋಕೇಶ್ ತಿಳಿಸಿದರು.

ಹೋಬಳಿಯ ಸಾಸಲು ಗ್ರಾಮದಲ್ಲಿ ಅತ್ತಿಗುಪ್ಪೆ ಸಾಹಿತ್ಯ ಬಳಗದಿಂದ ಶುಕ್ರವಾರ ಶಂಭುಲಿಂಗೇಶ್ವರ ಪ್ರೌಢಶಾಲೆಯಲ್ಲಿ ಹಮ್ಮಿಕೊಳ್ಳಲಾಗಿದ್ದ ಸುವರ್ಣ ಕರ್ನಾಟಕ ಸಂಭ್ರಮ ಕಾರ್ಯಕ್ರಮದಲ್ಲಿ ಮಾತನಾಡುತ್ತ, ಕನ್ನಡ ಭಾಷೆಗೆ 2 ಸಾವಿರ ವರ್ಷಗಳ ಇತಿಹಾಸವಿದೆ. ಕೆ.ಆರ್.ಪೇಟೆ ತಾಲೂಕಿನಲ್ಲಿರುವ ಸಾಹಿತಿಗಳ ಪರಿಚಯ ಮಾಡಿಕೊಳ್ಳಿ. ಪುಸ್ತಕ ಓದುವ ಜತೆಗೆ ಕಥೆ, ಕವನ, ಲೇಖನ ಬರೆಯುವ, ಓದುವ ಕೌಶಲ ರೂಢಿಸಿಕೊಳ್ಳಿ ಎಂದರು.

ಜಿಲ್ಲೆಯಲ್ಲಿ ನಡೆಯಲಿರುವ ವಿಶ್ವ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಕಡ್ಡಾಯವಾಗಿ ವಿದ್ಯಾರ್ಥಿಗಳು ಪಾಲಕರೊಂದಿಗೆ ಭಾಗವಹಿಸಿ ಕನ್ನಡತನವನ್ನು ಮೆರೆಯಬೇಕು ಎಂದು ವಿನಂತಿಸಿದರು. ಉತ್ತಮವಾಗಿ ಪ್ರತಿಭಾ ಪ್ರದರ್ಶನ ನೀಡಿದ ಹಾಗೂ ಉತ್ತಮ ಕಲಿಕಾ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಪುಸ್ತಕ ಬಹುಮಾನ ನೀಡಿ ಪ್ರೋತ್ಸಾಹಿಸಲಾಯಿತು.ಮುಖ್ಯಶಿಕ್ಷಕ ಶಾಂತಪ್ಪಾಜಿ, ಶಿಕ್ಷಕ ವಿ.ಜಿ. ಮಲ್ಲಿಕಾರ್ಜುನಸ್ವಾಮಿ, ತ್ರಿವೇಣಿ, ಪಾಪಣ್ಣ, ಮಧು ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net