ಮಕ್ಕಳಿಗೆ ಪ್ರತಿಭಾ ಪುರಸ್ಕಾರ

ಚಿತ್ರ 02ಎಸ್ ಡಿ ಪಿ 01
Published on


ಮಡಿಕೇರಿ: ದೇಶದ ಅಭಿವೃದ್ಧಿ ಹಾಗೂ ಮುನ್ನಡೆಸುವ ಜವಾಬ್ದಾರಿ ಭವಿಷ್ಯದ ಮಕ್ಕಳಲ್ಲಿ ಅಡಗಿದೆ ಎಂದು ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ವಿಜು ಸುಬ್ರಮಣಿ ತಿಳಿಸಿದರು.


ಸಿದ್ದಾಪುರದ ಪಾಲಿಬೆಟ್ಟ ಸರ್ಕಾರಿ ಪ್ರೌಢಶಾಲೆಯ ಸಭಾಂಗಣದಲ್ಲಿ ಇತ್ತೀಚೆಗೆ ಆಯೋಜಿಸಿದ್ದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ವಿದ್ಯಾರ್ಥಿಗಳ ಭವಿಷ್ಯವನ್ನು ಜವಾಬ್ದಾರಿಯುತವಾಗಿ ರೂಪಿಸಬೇಕು. ವಿದ್ಯಾರ್ಥಿಗಳು ಕೂಡ ಹೊಂದಾಣಿಕೆಯಾಗಿ ಸಮಾಜ ಕಟ್ಟುವಂತಹ ಪ್ರಯತ್ನ ಮಾಡಬೇಕು. ವಿದ್ಯೆಗೆ ಒತ್ತು ಕೊಡುವುದರೊಂದಿಗೆ ತಮ್ಮ ಗುರಿಯನ್ನು ಮುಟ್ಟಬೇಕು ಎಂದು ಕಿವಿಮಾತು ಹೇಳಿದರು.


ಕಳೆದ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ, ಗೌರವಿಸಲಾಯಿತು. ಶೇ. 100ರಷ್ಟು ಫಲಿತಾಂಶ ಬರಲು ಕಾರಣಕರ್ತರಾದ ಶಿಕ್ಷಕಿ ದಿವ್ಯ ಮದನ್ ಅವರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಶಾಲಾ ಅಭಿವೃದ್ಧಿ ಸಮಿತಿ ಅಧ್ಯಕ್ಷ ಅಯ್ಯಪ್ಪ, ಮುಖ್ಯಶಿಕ್ಷಕ ಯು.ಕೆ. ಅಶ್ರಫ್, ಎಸ್‌ಡಿಎಂಸಿ ಸದಸ್ಯರಾದ ವೈದೇಹಿ, ವಿನೋದ್, ಶಿಕ್ಷಕರಾದ ಮಮತಾ ಕಾಮತ್, ನಯನಕುಮಾರಿ, ಆರತಿ, ರಮ್ಯ, ಸವಿತಾ ಮತ್ತಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net