

ಮಂಜೇಶ್ವರ: ಸಮುದಾಯದ ಅಭಿವೃದ್ಧ್ದಿಗಾಗಿ ಎಲ್ಲರೂ ಒಗ್ಗಟ್ಟಿನಿಂದ ಕೆಲಸ ನಿರ್ವಹಿಸಬೇಕು. ವಿದ್ಯಾರ್ಥಿಗಳು ನಮ್ಮ ಸಂಸ್ಕೃತಿಯತ್ತ ಒಲವು ತೋರಿಸಬೇಕಾದ ಅನಿವಾರ್ಯತೆ ಇದೆ ಎಂದು ಬಾಕುಡ ಸಮುದಾಯದ ನಾಗಬ್ರಹ್ಮ ಹದಿನೆಂಟು ದೈವಸ್ಥಾನಗಳ ಸಮಿತಿಯ ಅಧ್ಯಕ್ಷ ಶಂಕರ ಅಡ್ಕ ಹೇಳಿದರು.
ಬಾಕುಡ ಸಮಾಜ ಕೇಂದ್ರ ಸಮಿತಿಯ ವತಿಯಿಂದ ಸಮುದಾಯದ ವಿದ್ಯಾರ್ಥಿಗಳಿಗೆ ಪುಸ್ತಕ ವಿತರಣೆ ಹಾಗೂ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ಬಾಕುಡ ಸಮಾಜ ಕೇಂದ್ರ ಸಮಿತಿಯ ಅಧ್ಯಕ್ಷೆ ಸುಜಾತ ಎಸ್. ಮಂಜೇಶ್ವರ ಅಧ್ಯಕ್ಷತೆ ವಹಿಸಿದ್ದರು. ಹಿರಿಯ ಮುಂದಾಳು ವಿಜಯಕುಮಾರ್ ಆಂಬಲ ಮೊಗಾರು, ಬಾಕುಡ ಸಮಾಜ ಕೇಂದ್ರ ಸಮಿತಿಯ ಗೌರವಾಧ್ಯಕ್ಷ ವಿಜಯ ಪಂಡಿತ್ ಮಂಗಲ್ಪಾಡಿ, ಪ್ರವೀಣ್ ಕೊಡೆಂಚೀರ್, ಹಿರಿಯರಾದ ಭಾಸ್ಕರ ಪಚ್ಲಂಪಾರೆ, ಪ್ರವೀಣ್ ಮಂಜೇಶ್ವರ, ಬಾಕುಡ ಸಮಾಜ ಕೇಂದ್ರ ಸಮಿತಿಯ ಮಾಜಿ ಅಧ್ಯಕ್ಷ ಶಿವಾನಂದ ಮಂಗಲ್ಪಾಡಿ, ಬಾಕುಡ ಸಮಾಜ ಕೇಂದ್ರ ಸಮಿತಿಯ ಕೋಶಾಧಿಕಾರಿ ಮಂಜುನಾಥ ಕಾರ್ಲೆ, ಬಾಕುಡ ಸಮಾಜ ಮಹಿಳಾ ಸಮಿತಿಯ ಅಧ್ಯಕ್ಷೆ ಸುಮಂಗಲ ಪೊಸೋಟು ಉಪಸ್ಥಿತರಿದ್ದರು. ಬಾಕುಡ ಸಮಾಜ ಕೇಂದ್ರ ಸಮಿತಿಯ ಪ್ರಧಾನ ಕಾರ್ಯದರ್ಶಿ ತುಳಸಿದಾಸ್ ಸ್ವಾಗತಿಸಿದರು. ಜಯಪ್ರಕಾಶ್ ಮಂಜೇಶ್ವರ ವಂದಿಸಿದರು. ಸುರೇಶ್ ಕುಮಾರ್ ಮಂಗಲ್ಪಾಡಿ ಕಾರ್ಯಕ್ರಮ ನಿರೂಪಿಸಿದರು.