

ಹಗರಿಬೊಮ್ಮನಹಳ್ಳಿ: ವೀರಶೈವ ಲಿಂಗಾಯತ ಪಂಚಮಸಾಲಿ ಸಮಾಜದಿಂದ ಜೂ.1ರಂದು ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಪಂಚಮಸಾಲಿ ಸಮಾಜದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಗುರುಬಸವರಾಜ ಸೊನ್ನದ್ ತಿಳಿಸಿದರು.
ಇದನ್ನೂ ಓದಿ:ಪ್ರತಿಭಾ ಪುರಸ್ಕಾರಕ್ಕೆ ಅರ್ಜಿ ಆಹ್ವಾನ
ನಗರದ ಹರ ದೇಗುಲದ ಸಮುದಾಯ ಭವನದಲ್ಲಿ ಇತ್ತೀಚೆಗೆ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು. 2024-25ನೇ ಸಾಲಿನ ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿಯಲ್ಲಿ ಶೇ.85 ಕ್ಕೂ ಹೆಚ್ಚು ಅಂಕ ಪಡೆದ ತಾಲೂಕಿನ ಪಂಚಮಸಾಲಿ ಸಮುದಾಯದ ವಿದ್ಯಾರ್ಥಿಗಳಿಗೆ ಪುರಸ್ಕಾರ ಹಾಗೂ ಸಮುದಾಯದ ನಿವೃತ್ತ ನೌಕರರಿಗೆ ಸನ್ಮಾನ ಮಾಡಲಾಗುವುದು. ಅರ್ಹ ವಿದ್ಯಾರ್ಥಿಗಳು ಮೇ 26ರೊಳಗೆ ಪಂಚಮಸಾಲಿ ಭವನದ ಕಚೇರಿಗೆ ಅರ್ಜಿ ತಲುಪಿಸುವಂತೆ ತಿಳಿಸಿದರು.
ಅರ್ಜಿ ಜತೆ ಅಂಕಪಟ್ಟಿ, ಆಧಾರ್ ಕಾರ್ಡ್, ಜಾತಿ ಪ್ರಮಾಣಪತ್ರದ ಪ್ರತಿ, 2 ಪಾಸ್‌ಪೋರ್ಟ್ ಫೋಟೋ ಸಲ್ಲಿಸಬೇಕು. ನಿವೃತ್ತ ನೌಕರರು ಹೆಸರು, ವಾಸಸ್ಥಳ ದೃಢೀಕರಣ ಪತ್ರದೊಂದಿಗೆ ಪಂಚಮಸಾಲಿ ಭವನದ ಕಚೇರಿಗೆ ಮಾಹಿತಿ ತಲುಪಿಸಬೇಕು ಎಂದು ಗುರುಬಸವರಾಜ ಸೊನ್ನದ್ ಹೇಳಿದರು.
ನಿವೃತ್ತ ಶಿಕ್ಷಕರಾದ ಬಾವಿ ರವೀಂದ್ರ, ಮಾಗಳ ನೀಲಪ್ಪ, ಪ್ರಮುಖರಾದ ಹನಸಿ ಸಿದ್ದೇಶ, ವೈ.ಮಲ್ಲಿಕಾರ್ಜುನ, ಶಿವಶಂಕರಗೌಡ, ಪೋಟೋ ವೀರೇಶ, ಎಂ.ಗುರುಬಸವರಾಜ, ಬಾದಾಮಿ ನಟರಾಜ, ಹುಳಿಮಜ್ಗಿ ಸುರೇಶ, ಎಸ್.ಎ.ಸಂತೋಷ, ಸೌಮ್ಯಾ ಅಯ್ಯನಗೌಡ್ರು, ಮಂಜುಳಾ ಬಳಿಗಾರ ಇತರರಿದ್ದರು.