ಸಮಾಜಮುಖಿ ಸಾಹಿತಿಗಳ ಗುರುತಿಸುವಂತಾಗಲಿ: ಅಪರ ಜಿಲ್ಲಾಧಿಕಾರಿ ಡಾ.ಎಚ್.ಎಲ್.ನಾಗರಾಜು ಸಲಹೆ

Talent Award Ceremony Mandya
Published on

ಮಂಡ್ಯ: ಸಮಾಜಕ್ಕೆ ಪೂರಕವಾಗಿ ಕೆಲಸ ಮಾಡುತ್ತಿರುವ ಸಾಹಿತಿ ಮತ್ತು ಕವಿಗಳನ್ನು ಗುರುತಿಸುವ ಕೆಲಸ ಆಗಬೇಕು ಎಂದು ಅಪರ ಜಿಲ್ಲಾಧಿಕಾರಿ ಡಾ.ಎಚ್.ಎಲ್.ನಾಗರಾಜು ಸಲಹೆ ನೀಡಿದರು.

ನಗರದ ಪಿಇಎಸ್ ಕಾಲೇಜಿನ ಸ್ವಾಮಿ ವಿವೇಕಾನಂದ ರಂಗಮಂದಿರದಲ್ಲಿ ಕನ್ನಿಕಾಶಿಲ್ಪ ನವೋದಯ ಎಜುಕೇಷನ್ ಟ್ರಸ್ಟ್‌ನಿಂದ ಆಯೋಜಿಸಿದ್ದ ಸಾಧಕರ ಸನ್ಮಾನ, ಪ್ರತಿಭಾ ಪುರಸ್ಕಾರ ಹಾಗೂ ಕೃತಿ ಬಿಡುಗಡೆ ಸಮಾರಂಭ ಉದ್ಘಾಟಿಸಿ ಮಾತನಾಡಿದರು. ಜಿಲ್ಲೆಗೆ ಪ್ರತಿಭಾವಂತ ವಿದ್ಯಾರ್ಥಿಗಳನ್ನು ನೀಡುತ್ತಿರುವ ಕನ್ನಿಕಾ ಶಿಲ್ಪ ನವೋದಯ ಎಜುಕೇಷನ್ ಟ್ರಸ್ಟ್ ಕೆಲಸ ಮತ್ತಷ್ಟು ಹೆಚ್ಚಾಗಬೇಕು. ಈ ಸಂಸ್ಥೆಯಲ್ಲಿ ಯಾವುದೇ ಲಾಭವಿಲ್ಲದೆ ವಿದ್ಯಾರ್ಥಿಗಳಿಗೆ ವಿದ್ಯೆಯನ್ನು ದಾರಿ ಎರೆಯುತ್ತಿರುವ ಕನ್ನಿಕಾ ಅವರ ಸಾಧನೆ ಮೆಚ್ಚುವಂತದ್ದಾಗಿದೆ. ಇದನ್ನು ಗ್ರಾಮೀಣ ಭಾಗದ ವಿದ್ಯಾರ್ಥಿಗಳ ಸಾಧನೆಗೆ ಪೂರಕವಾಗಿರುವುದು ಶ್ಲಾಘನೀಯ ಎಂದರು.

ಶಿಕ್ಷಣ ಎನ್ನುವುದು ನಮ್ಮ ಜೀವನದ ಒಂದು ದೈವಿಕ ಸಂಗತಿ, ಯಾರಿಗೆ ಶಿಕ್ಷಣ ಸಿಗುತ್ತದೋ ಅವರು ಹೇಗೆ ಬೇಕಾದರೂ ತಮ್ಮ ಜೀವನ ರೂಪಿಸಿಕೊಂಡು ಸಮಾಜದ ಪರವಾಗಿ ಕೆಲಸ ಮಾಡಬಹುದು, ಉನ್ನತ ಮಟ್ಟದ ಅಧಿಕಾರಿಗಳು ಆದರೆ ತಮಗೆ ಲಾಭ ಎನ್ನುವುದನ್ನು ಬಿಟ್ಟು, ಸಮಾಜಕ್ಕೆ ದುಡಿಯುವ ಮನಸ್ಸುಗಳು ಬೇಕು ಎಂದು ಸಲಹೆ ನೀಡಿದರು.

ಕೃತಿ ಕರ್ತೃ ಕನ್ನಿಕಾ ಅವರ ಈ ಜಗವು ನಮದು ಕುರಿತು ಪ್ರಾಧ್ಯಾಪಕ ಎಂ.ಮಂಚಶೆಟ್ಟಿ ಕಡಿಲುವಾಗಿಲು ಮಾತನಾಡಿದರು. ಕೃಷಿಕ್ ಫೌಂಡೇಷನ್ ಅಧ್ಯಕ್ಷ ಟಿ.ತಿಮ್ಮೇಗೌಡ, ಆದಿಚುಂಚನಗಿರಿ ಕೊಮ್ಮೇರಹಳ್ಳಿ ಶಾಖಾ ಮಠದ ಮುಖ್ಯಸ್ಥ ಶ್ರೀ ಪುರುಷೋತ್ತಮಾನಂದನಾಥ ಸ್ವಾಮೀಜಿ, ಇಂಜಿನಿಯರ್ ಸಂಘಧ ಅಧ್ಯಕ್ಷ ದೇವರಾಜು, ಮಹಿಳಾಪರ ಹೋರಾಟಗಾರ್ತಿ ಪ್ರೊ.ಉಷಾರಾಣಿ, ಶಿಕ್ಷಕ ಶಿವಣ್ಣ ಮಂಗಲ, ನವೋದಯ ತರಬೇತಿ ಪ್ರಾಂಶುಪಾಲೆ ಎಚ್.ಆರ್.ಕನ್ನಿಕಾ ಇತರರಿದ್ದರು. ಇದೇ ವೇಳೆ ಎಸ್‌ಎಸ್‌ಎಲ್‌ಸಿ, ದ್ವಿತೀಯ ಪಿಯುಸಿಯಲ್ಲಿ ಹೆಚ್ಚು ಅಂಕ ಪಡೆದ ಮತ್ತು ನವೋದಯ ಶಾಲೆಗೆ ಆಯ್ಕೆಯಾದ ವಿದ್ಯಾರ್ಥಿಗಳು ಹಾಗೂ ವಿವಿಧ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿರುವವವರನ್ನು ಸನ್ಮಾನಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net