ಶಿಕ್ಷಣವೇ ಮಕ್ಕಳಿಗೆ ನೀಡುವ ಆಸ್ತಿ

arundati
Published on

ವಿಜಯವಾಣಿ ಸುದ್ದಿಜಾಲ ಬೆಂಗಳೂರು ಗ್ರಾಮಾಂತರ

ಇಂದಿನ ಮಕ್ಕಳೆ ಮುಂದಿನ ಪ್ರಜೆಗಳು ಮಕ್ಕಳು ಉತ್ತಮ ಶಿಕ್ಷಣವನ್ನು ಪಡೆದು ಸಮಾಜದಲ್ಲಿ ಉನ್ನತ ಹುದ್ದೆಗಳನ್ನು ಅಲಂಕರಿಸುವಂತಾಗಬೇಕು ಇದಕ್ಕೆ ಪಾಲಕರು ಬೆನ್ನೆಲುಬಾಗಿರಬೇಕು ಶಿಕ್ಷಣವೇ ಮಕ್ಕಳಿಗೆ ಪಾಲಕರು ನೀಡಬಹುದಾದ ಅಮೂಲ್ಯ ಆಸ್ತಿ ಎಂದು ಬೆಂಗಳೂರು ಗ್ರಾಮಾಂತರ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಚ್.ಮುನಿಯಪ್ಪ ಹೇಳಿದರು.

ದೇವನಹಳ್ಳಿ ಅಂಬೇಡ್ಕರ್ ಭವನದಲ್ಲಿ ಹಮ್ಮಿಕೊಂಡಿದ್ದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಮಾತನಾಡಿದರು. ಮಕ್ಕಳಿಗೆ ಉನ್ನತ ವಿದ್ಯಾಭ್ಯಾಸ ಕಲ್ಪಿಸುವ ಕಡೆ ಪಾಲಕರು ಗಮನಹರಿಸಬೇಕು ಇದರಿಂದ ಮುಂದೆ ಮಕ್ಕಳ ಭವಿಷ್ಯ ಉಜ್ವಲವಾಗಲಿದೆ ಎಂದರು. ದೇವನಹಳ್ಳಿ ತಾಲೂಕಿನ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸುವ ಸಲುವಾಗಿ ಹಮ್ಮಿಕೊಂಡಿರುವ ಕಾರ್ಯಕ್ರಮ ಶ್ಲಾಘನೀಯವಾಗಿದೆ. ಇಂಥ ಕಾರ್ಯಕ್ರಮಗಳಿಂದ ಮಕ್ಕಳಲ್ಲಿ ಮತ್ತಷ್ಟು ಓದುವ ಉತ್ಸಾಹ ಮೂಡುತ್ತದೆ ಇನ್ನಿತರ ಮಕ್ಕಳಿಗೆ ಇದು ಪ್ರೇರಣೆಯಾಗುತ್ತದೆ ಎಂದರು.

ನಾನು ಇದೇ ಮೊದಲು ಇಷ್ಟು ವಿಧ್ಯಾರ್ಥಿಗಳಿಗೆ ಅಭಿನಂದನೆ ಸಲ್ಲಿಸುತ್ತಿರುವುದು ಎಂದರು.

ಸಮಾಜದಲ್ಲಿ ನಾಗರಿಕರು ಗಲಾಟೆಗಳನ್ನು ಮಾಡಿಕೊಳ್ಳುವುದರಿಂದ ಏನು ಗಳಿಸಲು ಸಾಧ್ಯವಿಲ್ಲ ಅದೇ ಪ್ರೀತಿ ವಿಶ್ವಾಸದಿಂದ ಹೋದಾಗ ಹೆಚ್ಚಿನ ಲಾಭ ಪಡೆಯಲು ಸಹಕಾರಿಯಾಗುತ್ತದೆ ಎಂದು ಕಿವಿಮಾತು ಹೇಳಿದರು.

ಸುಖಾಸುಮ್ಮನೆ ವಿವಾದ ಬೇಡ:

ತಾವು ವಿನಾಕಾರಣ ಜಮೀನುಗಳಿಂದಾಗಿ ಪ್ರಕರಣಗಳನ್ನು ದಾಖಲಿಸುವುದರಿಂದ ಯಾವುದೇ ಪ್ರಯೋಜನವಿಲ್ಲ ಪ್ರೀತಿ ವಾತ್ಸಲ್ಯ ದಿಂದ ಅಣ್ಣ ತಮ್ಮಂದಿರ ರೀತಿ ಜೀವನ ಸಾಗಿಸಬೇಕು ಎಂದು ಸಾರ್ವಜನಿಕರಿಗೆ ಕರೆ ನೀಡಿದ ಸಚಿವರು ನಿಮ್ಮ ವರ್ತನೆಯನ್ನೇ ನಿಮ್ಮ ಮಕ್ಕಳು ಅನುಸರಿಸುತ್ತಾರೆ ಆದ್ದರಿಂದ ಪಾಲಕರು ಉತ್ತಮ ಮಾರ್ಗದಲ್ಲಿ ನಡೆಯುವ ಮೂಲಕ ಮಕ್ಕಳಿಗೆ ದಾರಿದೀಪವಾಗಬೇಕು ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net