ತಾಳೆ ಬೆಳೆಗೆ ವಿಫುಲ ಅವಕಾಶ

3107 hbd 01
Published on

ಹುಮನಾಬಾದ್​: ತಾಳೆ ಬೆಳೆ ಬೆಳೆಯಲು ವಿಫುಲವಾದ ಅವಕಾಶವಿದ್ದು, ಈ ಬೆಳೆ ಸಹ ಬೆಳೆಯುವ ಮೂಲಕ ರೈತರು ಆರ್ಥಿಕ ಸಬಲತೆ ಹೊಂದಬೇಕೆಂದು ಶಾಸಕ ಡಾ.ಸಿದ್ದಲಿಂಗಪ್ಪ ಪಾಟೀಲ್​ ಕರೆ ನೀಡಿದರು. ತಾಲೂಕಿನ ಮೊಳಕೇರಾ ಗ್ರಾಮದ ರೈತರ ಜಮೀನಿನಲ್ಲಿ ಸೋಮವಾರ ಜಿಲ್ಲಾ ಪಂಚಾಯಿತಿ, ತೋಟಗಾರಿಕೆ ಇಲಾಖೆ ಆಶ್ರಯದಲ್ಲಿ ತಾಳೆ ಬೆಳೆ ಅಭಿವೃದ್ಧಿ ಯೋಜನೆ ಅಡಿಯಲ್ಲಿ ನೂತನ ತಾಳೆ ಬೆಳೆ (3ಎಫ್ ಆಯಿಲ್ ಪಾಮ್ ) ಸಸಿ ನೆಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ, ಕ್ಷೇತ್ರದಲ್ಲಿ ಹೊಸ ಹೊಸ ತೋಟಗಾರಿಕೆ ಬೆಳೆಗಳನ್ನು ಬೆಳೆಯಲು ಸಾಕಷ್ಟು ಅವಕಾಶಗಳಿವೆ. ಹಿಗಾಗಿ ರೈತರು ವಿವಿಧ ಬೆಳೆಗಳ ಜತೆ ಜತೆಗೆ ತೋಟಗಾರಿಕೆ ಬೆಳೆಗಳನ್ನು ಬೆಳೆಯಲು ಮುಂದಾಗಬೇಕೆಂದು ಹೇಳಿದರು.

ನೂತನ ತಾಳೆ ಬೆಳೆಯ ಬಗ್ಗೆ ಕ್ಷೇತ್ರದ ರೈತರಲ್ಲಿ ಜಾಗೃತಿ ಮೂಡಿಸಲು ತೋಟಗಾರಿಕೆ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದ ಅವರು, ಈ ಭಾಗದ ರೈತರು ಈ ತಾಳೆ ಬೆಳೆಯ ಸದುಪಯೋಗ ಪಡೆದುಕೊಳ್ಳಲು ತಿಳಿಸಿದರು.

ಇಲ್ಲಿನ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕ ಮಾರುತಿ ಜಾಬಾನೋರ ಪ್ರಸ್ತಾವಿಕವಾಗಿ ಮಾತನಾಡಿ, ತಾಳೆ ಬೆಳೆ ತೋಟಗಾರಿಕೆ ಬೆಳೆಯಾಗಿದ್ದು, ನಮ್ಮ ಭಾಗದಲ್ಲಿ ಇದನ್ನು ಬೆಳೆಯಬಹುದಾಗಿದೆ ಎಂದರು. ಬೆಳೆಯ ಕುರಿತಿ ಸಮಗ್ರ ಮಾಹಿತಿ ನೀಡಿದರು.  ಮುಖಂಡರಾದ ಗಿರೀಶ ತುಂಬಾ , ನಾಗಭೂಷಣ ಸಂಗಮ , ಶ್ರೀನಾಥ ದೇವಣಿ , ಸುನೀಲ ಪತ್ರಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net