ಪುತ್ತಿಲ ಪರಿವಾರದ ಕಛೇರಿ ಬಳಿ ದಾಳಿಗೆ ಯತ್ನ?

20231110_143715
Published on

ಪುತ್ತೂರು: ಪುತ್ತಿಲ ಪರಿವಾರದ ಕಛೇರಿಗೆ ಬಳಿ ಯುವಕನ ಮೇಲೆ ತಲುವಾರು ಜಳಪಿಸಿ ದಾಳಿಗೆ ಯತ್ನಿಸಿದ ಹಿನ್ನಲೆ ಹಿಂದು ಸಂಘಟನೆಯ ಯುವಕ ಹಾಗೂ ಸಹಚರನನ್ನು ವಶಕ್ಕೆ ಪಡೆದಿದ್ದಾರೆ.

ಹಿಂದೂ ಜಾಗರಣದ ಪುತ್ತೂರಿನ ಮುಖಂಡ ದಿನೇಶ್ ಪಂಜಿಗ ತಲವಾರು ಬೀಸಿದವನಾಗಿದ್ದಾನೆಂದು ಹೇಳಲಾಗಿದೆ. ಪುತ್ತಿಲ ಪರಿವಾರದ ಮುಖಂಡ ಮನೀಶ್ ಕುಲಾಲ್ ಬನ್ನೂರು ಮೇಲೆ ದಾಳಿ ನಡೆದಿದೆ ಎಂಬ ಹೇಳಲಾಗಿದೆ.ಸಾಮಾಜಿಕ ಜಾಲತಾಣದಲ್ಲಿ ಆಗಿರುವ ಚರ್ಚೆಯ ವಿಚಾರವಾಗಿ ಯುವಕ ಹತ್ತಕ್ಕೂ ಅಧಿಕ ಮಂದಿಯ ಜತೆಗೆ ಮಾರಕಾಯುಧ ಸಹಿತ ಮುಕ್ರಂಪಾಡಿಯ ಪುತ್ತಿಲ ಪರಿವಾರದ ಕಛೇಯ ಬಂದು ಕಛೇರಿಗೆ ಬರಲು ಹೇಳಿದೆಯಲ್ಲ ಎಂದು ಹೇಳಿಕೊಂಡು ಮನೀಶ್ ಕುಲಾಲ್ ಗಾಗಿ ಹುಡುಕಾಡಿದ್ದಾರೆ. ಆದರೆ ಆತ ಅಲ್ಲಿರಲಿಲ್ಲ, ಕೃಷ್ಣ ಪ್ರಾಸ್ ಶೆಟ್ಟಿ, ಅನಿಲ್ ತೆಕಿಲ ಹಾಗೂ ವಿಜೇತ್ ಜತೆಗಿದ್ದರು.

ಕಳೆದ ವಿಧಾನ ಸಭಾ ಚುನಾವಣೆಯ ಸಂದರ್ಭ ಬಿಜೆಯ ಜತೆಗೆ ಗುರುತಿಸಿಕೊಂಡಿದ್ದರು. ಈಮೂಲಕ ಪುತ್ತೂರಿನ ತಲುವಾರು ಮತ್ತೆ ಸದ್ದು ಮಾಡಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net