ತಲಾಷ್ ನಾಟಕದ ಪೋಸ್ಟರ್ ಬಿಡುಗಡೆ

h7-santosh laad
Published on

ಹುಬ್ಬಳ್ಳಿ: ಸಂತೋಷ ಲಾಡ್ ಫೌಂಡೇಷನ್ ಅರ್ಪಿಸುವ ತಲಾಷ್ ನಾಟಕದ ಪೋಸ್ಟರ್ ಮತ್ತು ಟೀಸರ್ ಅನ್ನು ಕಾರ್ಮಿಕ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ನಗರದ ಖಾಸಗಿ ಹೊಟೆಲ್‌ನಲ್ಲಿ ಇತ್ತೀಚೆಗೆ ಬಿಡುಗಡೆಗೊಳಿಸಿದರು.
ನಂತರ ಮಾತನಾಡಿದ ಸಚಿವರು, ನಾಟಕ ತುಂಬಾ ವಿಭಿನ್ನವಾದ ಕಥಾವಸ್ತು ಹೊಂದಿದೆ. ತಲಾಷ್ ನಾಟಕದಲ್ಲಿ ಮಾಧ್ಯಮದ ಸ್ನೇಹಿತರು ಸೇರಿ ಸಿನಿಮಾ, ಕಿರುತೆರೆ ಕಲಾವಿದರು ಅಭಿನಯಸಿದ್ದಾರೆ. ಫೆಬ್ರುವರಿ 15ರಂದು ಕಲಘಟಗಿ ತಾಲೂಕಿನ ಬೆಲವಂತರ ಗ್ರಾಮದಲ್ಲಿ ರಾತ್ರಿ 10.30ಕ್ಕೆ ನಾಟಕವನ್ನು ಪದರ್ಶಿಸಲಿದ್ದು ನಾನೂ ನಾಟಕ ವೀಕ್ಷಿಸಲು ಆಗಮಿಸುತ್ತಿದ್ದೇನೆ. ಆದಕಾರಣ ಎಲ್ಲರೂ ನಾಟಕ ನೋಡುವಂತೆ ವಿನಂತಿಸಿದರು.
ಸೋಮು ರೆಡ್ಡಿ ರಚಿಸಿರುವ ಗದಿಗೆಯ್ಯ ಹಿರೇಮಠ ನಿರ್ದೇಶಿಸಿರುವ ಜೀವ ಕಲಾ ಬಳಗ ಪ್ರಸ್ತುತಪಡಿಸುತ್ತಿರುವ ತಲಾಷ್ ನಾಟಕ ಮನುಷ್ಯನ ಲಾಲಸೆ, ಮೋಹ, ಮತ್ಸರಗಳ ಸುತ್ತ ಹೆಣೆದ ಮೂಢನಂಬಿಕೆಗಳನ್ನ ವಿರೋಧಿಸುವ ಜ್ಯಾತಿವ್ಯವಸ್ಥೆಯನ್ನು ಧಿಕ್ಕರಿಸುವ ವಿಭಿನ್ನ ಕಥಾವಸ್ತು ಹೊಂದಿದೆ. ಆಧುನಿಕ ಮತ್ತು ಸಾಂಪ್ರದಾಯಿಕ ರಂಗ ಪರಿಕಲ್ಪನೆಯಲ್ಲಿ ರೂಪಿಸಲಾಗಿದೆ. ಗ್ರಾಮೀಣ ಭಾಗಕ್ಕೆ ಇದೊಂದು ವಿಭಿನ್ನ, ನವ್ಯ ಅನುಭವ ನೀಡಲಿದೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net