ಶ್ರಾವಣ ಮಾಸದ ತಾಳಮದ್ದಳೆ

4-sanmana
Published on

ಬಂಟ್ವಾಳ: ಶ್ರೀ ತಿರುಮಲ ವೆಂಕಟರಮಣ ಸ್ವಾಮಿ ದೇವಸ್ಥಾನದಲ್ಲಿ ಶ್ರಾವಣ ಮಾಸದ ತಾಳ ಮದ್ದಳೆೆ ಸೇವೆ ಒಂದು ತಿಂಗಳ ಪರ್ಯಂತ ನಡೆಯಿತು. ಈ ಪ್ರಯುಕ್ತ ದೇವಳದಲ್ಲಿ ಹಿರಿಯ ಅರ್ಥದಾರಿ ಶ್ಯಾಮಭಟ್ ಪಕಳಕುಂಜ, ಹವ್ಯಾಸಿ ಅರ್ಥಧಾರಿ ರಾಮಣ್ಣ ಅನಂತಾಡಿ ಅವರನ್ನು ಸನ್ಮಾನಿಸಲಾಯಿತು. ದೇವಸ್ಥಾನದ ಆಡಳಿತ ಮೊಕ್ತೇಸರ ಅಶೋಕ್ ಶೆಣೈ ಅಧ್ಯಕ್ಷತೆ ವಹಿಸಿದ್ದರು. ನಾಗೇಂದ್ರ ಪೈ ಸ್ವಾಗತಿಸಿದರು. ಆರ್ಲ ಯೋಗೀಶ್ ಪ್ರಭು ವರದಿ ವಾಚಿಸಿದರು. ವಸಂತ ಪ್ರಭು ವಂದಿಸಿದರು. ಮಲ್ಲಿಕಾ ಶೆಟ್ಟಿ ನಿರೂಪಿಸಿದರು. ಬಳಿಕ ಹಿರಿಯ ಕಲಾವಿದರಿಂದ ಶ್ರೀ ಕೃಷ್ಣ ಕಾರುಣ್ಯ ಯಕ್ಷಗಾನ ತಾಳಮದ್ದಲೆ ನಡೆಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net