ಕಾರಡ್ಕ ವಿದ್ಯಾರ್ಥಿಗಳಿಂದ ತಾಳಮದ್ದಳೆ

10-talamaddale
Published on

ಕಾಸರಗೋಡು: ಮುಳ್ಳೇರಿಯದ ಶ್ರೀ ಸಾರ್ವಜನಿಕ ಗಣೇಶೋತ್ಸವದ ಸಂದರ್ಭ ಕಾರಡ್ಕ ಸರ್ಕಾರಿ ವೊಕೇಶನಲ್ ಹೈಯರ್ ಸೆಕೆಂಡರಿ ಶಾಲೆ(ಜಿವಿಎಚ್‌ಎಸ್‌ಎಸ್) ವಿದ್ಯಾರ್ಥಿಗಳಿಂದ ತಾಳಮದ್ದಳೆ ನಡೆಯಿತು.

ದಿ.ರಾಮಚಂದ್ರ ಕಾಸರಗೋಡು ಸ್ಮರಣಾರ್ಥ ನಡೆದ ತಾಳಮದ್ದಳೆಯಲ್ಲಿ ಡಾ.ಚಂದ್ರಶೇಖರ ದಾಮ್ಲೆ ವಿರಚಿತ ಏಕಲವ್ಯ ಪ್ರಸಂಗವನ್ನು ಡಾ.ಶ್ರೀಶ ಕುಮಾರ ಪಂಜಿತ್ತಡ್ಕ ನಿರ್ದೇಶನದಲ್ಲಿ ಪ್ರೌಢಶಾಲಾ ವಿದ್ಯಾರ್ಥಿಗಳು ನಡೆಸಿಕೊಟ್ಟರು.

ಹಿಮ್ಮೇಳದಲ್ಲಿ ಭಾಗವತರಾಗಿ ಅನರ್ಘ್ಯ ತೆಕ್ಕೇಕೆರೆ ಸುಶ್ರಾವ್ಯ ಕಂಠಸಿರಿ ಮೆರೆದರು. ವೇಣುಗೋಪಾಲ ಬರೆಕೆರೆ ಚೆಂಡೆ ಹಾಗೂ ವಂದನಾ ಮಾಯಿಲೆಂಕಿ ಮದ್ದಳೆಯಲ್ಲಿ ಸಹಕರಿಸಿದರು. ಅರ್ಥಧಾರಿಗಳಾಗಿ ದ್ರೋಣ-ಭೂಮಿಕಾ, ದ್ರುಪದ ಹಾಗೂ ಎರಡನೇ ದ್ರೋಣ-ಧನ್ಯಶ್ರೀ, ಶಬರ-ಸಚಿನ್, ಏಕಲವ್ಯ-ದೇವಿಕಾ, ಶಬರಿ ಹಾಗೂ ಧರ್ಮರಾಯ-ಗ್ರೀಷ್ಮ, ಅಶ್ವತ್ಥಾಮ-ವೀಕ್ಷಿತ, ಕೌರವ-ಸಹನ, ಭೀಮ-ಯುಕ್ತಿ, ಅರ್ಜುನ-ಮೋನಿಷ, ಬೇಡ ಹಾಗೂ ದೂತ-ಕೀರ್ತೇಶ್ ಮಿಂಚಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net