ಪೊಳಲಿ ಶ್ರೀ ರಾಜರಾಜೇಶ್ವರಿ ದೇವಸ್ಥಾನದಲ್ಲಿ ವಾರದ ತಾಳಮದ್ದಲೆ

mng-31aug-polali
Published on



ಮಂಗಳೂರು : ಪೊಳಲಿ ಶ್ರೀ ರಾಜರಾಜೇಶ್ವರಿ ದೇವಸ್ಥಾನದ ಸನ್ನಿಧಾನದಲ್ಲಿ ಪ್ರತೀ ಭಾನುವಾರ ಸಾಯಂಕಾಲ 6ರಿಂದ 8.30ರವರೆಗೆ ನಡೆಯುವ ತಾಳಮದ್ದಲೆ ಕಾರ್ಯಕ್ರಮಕ್ಕೆ ದೇವಸ್ಥಾನದ ಪವಿತ್ರಪಾಣಿ ಮಾಧವ ಭಟ್, ಆಡಳಿತ ಮೊಕ್ತೇಸರ ಡಾ. ಮಂಜಯ್ಯ ಶೆಟ್ಟಿ, ಅರ್ಚಕ ನಾರಾಯಣ ಭಟ್ ಇವರು ದೀಪ ಪ್ರಜ್ವಲನಗೊಳಿಸಿ ಚಾಲನೆ ನೀಡಿದರು.
1968ರಲ್ಲಿ ಪೊಳಲಿ ಯಕ್ಷಗಾನ ಕಲಾ ಮಂಡಳಿಯು ಪ್ರಾರಂಭವಾಗಿ ದೇವಸ್ಥಾನದ ಅಂದಿನ ಆಡಳಿತ ಮೊಕ್ತೇಸರರಾಗಿದ್ದ
ದಿ. ರಮಾನಾಥ ಮಾರ್ಲ ಅವರಿಂದ ಉದ್ಘಾಟನೆಗೊಂಡಿತ್ತು, ಅಂದಿನಿಂದ 2020ರವರೆಗೆ ನಿರಂತರವಾಗಿ ಪ್ರತೀ ಭಾನುವಾರ
ಸಾಯಂಕಾಲ ದೇವಸ್ಥಾನದ ಗೋಪುರದಲ್ಲಿ ತಾಳಮದ್ದಲೆ ನಡೆಯುತ್ತಿತ್ತು. 2020ರಿಂದ ಕೋವಿಡ್ ಹಾಗೂ ಕಾರಣಾಂತರಗಳಿಂದ ಸ್ಥಗಿತಗೊಂಡಿದ್ದ ವಾರದ ತಾಳಮದ್ದಲೆಗೆ ಈಗ ಮರು ಚಾಲನೆ ನೀಡಲಾಗಿದೆ ಎಂದು ಅವರು ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net