ತಳಕು-ಬೆಳಗೆರೆ ಕೊಡುಗೆ ಅಪಾರ

CLK TALUKU 01
Published on

ಚಳ್ಳಕೆರೆ: ತಳಕು ಮತ್ತು ಬೆಳಗೆರೆ ಮನೆತನಗಳ ಸಾಧಕರು ರಾಜ್ಯದ ಸಾಹಿತ್ಯ ಕ್ಷೇತ್ರಕ್ಕೆ ಅಪಾರ ಕೊಡುಗೆ ನೀಡುವ ಮೂಲಕ ಜಿಲ್ಲೆಗೆ ಕೀರ್ತಿ ತಂದಿದ್ದಾರೆ ಎಂದು ಗ್ರಾಪಂ ಅಭಿವೃದ್ಧಿ ಅಧಿಕಾರಿ ಬಿ.ಸಿ.ಶಶಿರಾಜ್ ಹೇಳಿದರು.

ತಾಲೂಕಿನ ತಳಕು ಗ್ರಾಮದ ಗ್ರಂಥಾಲಯದಲ್ಲಿ ಭಾನುವಾರ ಆಯೋಜಿಸಿದ್ದ ಕನ್ನಡದ ಕವಿ ಟಿ.ಎಸ್.ವೆಂಕಣ್ಣಯ್ಯ ಅವರ 138ನೇ ವರ್ಷದ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು.

ವೆಂಕಣ್ಣಯ್ಯ ಅವರು ಕನ್ನಡದ ಪ್ರಾಧ್ಯಾಪಕರಾಗಿ ಸಾಹಿತ್ಯ ವಲಯದಲ್ಲಿ ಗುರುತಿಸಿಕೊಂಡವರು. ರಾಷ್ಟ್ರಕವಿ ಕುವೆಂಪು ಅವರಿಗೆ ವಿದ್ಯಾಗುರುಗಳಾಗಿದ್ದ ಅವರಿಗೆ ಕುವೆಂಪು ಅವರು ತಮ್ಮ ರಾಮಾಯಣ ದರ್ಶನಂ ಮಹಾಕೃತಿಯನ್ನು ಅರ್ಪಣೆ ಮಾಡುವ ಮೂಲಕ ಗೌರವ ಸಲ್ಲಿಸಿದ್ದಾರೆ ಎಂದರು.

ತಳುಕಿನ ಟಿ.ಎಸ್. ವೆಂಕಣ್ಣಯ್ಯ, ತರಾಸು, ಬೆಳಗೆರೆ ಮನೆತನದ ಜಾನಕಮ್ಮ, ಬೆಳಗೆರೆ ಕೃಷ್ಣಶಾಸ್ತ್ರಿಗಳು ಸಾಹಿತ್ಯ ವಲಯದ ಅಶ್ವಿನಿ ದೇವತೆಗಳಂತೆ ಸಮಾಜದಲ್ಲಿ ಉಳಿದುಕೊಂಡಿದ್ದಾರೆ ಎಂದು ಹೇಳಿದರು.

ತಳುಕಿನ ಮನೆತನದ ಪಿ.ಎಚ್.ಮಧುರನಾಥನ್, ಉಮಾ, ಗ್ರಾಪಂ ಅಧ್ಯಕ್ಷೆ ದಾಕ್ಷಾಯಣಿ, ಸದಸ್ಯರಾದ ಟಿ.ಕೃಷ್ಣಮೂರ್ತಿ, ನೀಲಮ್ಮ, ನಾಗರಾಜ, ವೀರೇಶ್, ಶಿಕ್ಷಕ ಮಹಾಂತೇಶ್, ಗ್ರಾಮಸ್ಥರಾದ ಮಲ್ಲೇಶ್‌ಕುಮಾರ್, ಎಸ್.ಡಿ.ಮಂಜುನಾಥ, ನಿಜಾಮುದ್ದೀನ್, ಶಿವಕುಮಾರ್ ಮತ್ತಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net