ಶ್ರೀ ಭಗಂಡೇಶ್ವರ ದೇವರು- ಕಾವೇರಿ ಮಾತೆ ಭಾಚಿತ್ರ ಲೋಕಾರ್ಪಣೆ

17mdkn1 - Copy
Published on

ವಿಜಯವಾಣಿ ಸುದ್ದಿಜಾಲ ಮಡಿಕೇರಿ
ಶ್ರೀ ಭಗಂಡೇಶ್ವರ- ತಲಕಾವೇರಿ ದೇವಸ್ಥಾನ ಸಮಿತಿಯಿಂದ ರಚಿಸಿರುವ ಶ್ರೀ ಭಗಂಡೇಶ್ವರ ದೇವರು ಮತ್ತು ಕಾವೇರಿ ಮಾತೆ ಭಾವಚಿತ್ರ ಗಳನ್ನು ಬುಧವಾರ ಲೋಕಾರ್ಪಣೆಗೊಳಿಸಲಾಯಿತು.

ಭಗಂಡೇಶ್ವರ ದೇವಾಲಯ ಆವರಣದಲ್ಲಿ ಪ್ರಧಾನ ಅರ್ಚಕ ಹರೀಶ್ ಭಟ್ ನೇತೃತ್ವದಲ್ಲಿ ರುದ್ರ ಪಾರಾಯಣ ಪಠಿಸುವ ಮೂಲಕ ವಿಶೇಷ ಪೂಜೆ ಸಲ್ಲಿಸಿ ಭಾವಚಿತ್ರ ಭಕ್ತಾಧಿಗಳಿಗೆ ನೀಡಲಾಯಿತು.

ಪ್ರಧಾನ ಅರ್ಚಕ ಹರೀಶ್ ಭಟ್ ಮಾತನಾಡಿ, ಭಾವಚಿತ್ರಗಳು ದೇವಾಲಯದ ಕಚೇರಿಯಲ್ಲಿ ಲಭ್ಯವಿದೆ. ಭಕ್ತಾಧಿಗಳು ಸೂಕ್ತ ನಗದು ಪಾವತಿಸಿ ರಶೀದಿ ಪಡೆಯುವುದರೊಂದಿಗೆ ಪ್ರತಿ ಮನೆ- ಮನೆಗಳಲ್ಲಿ ಪೂಜೆ ಸಲ್ಲಿಸುವಂತಾಗಬೇಕೆಂದರು. ಅರ್ಚಕರಾದ ರವಿ ಭಟ್, ವಿಕ್ರಮ್ ಭಟ್, ರಾಮಚಂದ್ರ ಭಟ್ ಮತ್ತಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net