ತಳಕಲ್ ನಿಲ್ದಾಣ ಒಳಗೆ ಬಸ್ ಬರುವಂತೆ ರಸ್ತೆ ನಿರ್ಮಿಸಿ; ಪಿಡಬ್ಲುೃಡಿ ಇಂಜಿನಿಯರ್‌ಗೆ ಮಾಜಿ ಸಚಿವ ರಾಯರಡ್ಡಿ ಸೂಚನೆ

030922 Talakal Ex minister Basavaraja Rayardy visited bus stand
ಕುಕನೂರು ತಾಲೂಕಿನ ತಳಕಲ್ ಗ್ರಾಮದ ಬಸ್ ನಿಲ್ದಾಣಕ್ಕೆ ಪಿಡಬ್ಲುೃಡಿ ಇಂಜಿನಿಯರ್ ಶರಣಬಸವರಾಜ ಜತೆ ಮಾಜಿ ಸಚಿವ ಬಸವರಾಜ ರಾಯರಡ್ಡಿ ಶನಿವಾರ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿದರು.
Published on

ಕುಕನೂರು: ನಿಲ್ದಾಣದ ಒಳಗೆ ಬಸ್ ಬರುವಂತೆ ರಸ್ತೆ ನಿರ್ಮಿಸಬೇಕು ಎಂದು ಮಾಜಿ ಸಚಿವ ಬಸವರಾಜ ರಾಯರಡ್ಡಿ ಹೇಳಿದರು.

ತಳಕಲ್ ಗ್ರಾಮದ ಬಸ್ ನಿಲ್ದಾಣಕ್ಕೆ ಶನಿವಾರ ಪಿಡಬ್ಲುೃಡಿ ಇಂಜಿನಿಯರ್ ಜತೆ ಭೇಟಿ ನೀಡಿ ಸ್ಥಳ ಪರಿಶೀಲಿಸಿ ಮಾತನಾಡಿದರು. ನಿಲ್ದಾಣ ರಾಷ್ಟ್ರೀಯ ಹೆದ್ದಾರಿ 63ರ ಪಕ್ಕದಲ್ಲಿದ್ದು, ಒಳಗೆ ಬಸ್‌ಗಳು ಬರುತ್ತಿಲ್ಲ. ಇದರಿಂದ ಜನರು ಹೆದ್ದಾರಿಯಲ್ಲಿ ನಿಂತು ಬಸ್ ಹತ್ತಿ ಹೋಗುವಂತಾಗಿದೆ. ಬಸ್ ನಿಲ್ದಾಣಕ್ಕೆ ಸೂಕ್ತ ರಸ್ತೆ ನಿರ್ಮಿಸಲು ಯೋಜನೆ ರೂಪಿಸಿದ್ದು, 75 ಲಕ್ಷ ರೂ. ಟೆಂಡರ್ ಪ್ರಕ್ರಿಯೆಯಲ್ಲಿದೆ. ನಿಲ್ದಾಣದ ಒಳಗೆ ಬಸ್‌ಗಳು ಬರುವಂತೆ ರಸ್ತೆ ನಿರ್ಮಾಣ ಮಾಡಲು ಇಂಜಿನಿಯರ್‌ಗೆ ತಿಳಿಸಲಾಗಿದೆ. ಬನ್ನಿಕೊಪ್ಪ ಗ್ರಾಮದ ಬಸ್ ನಿಲ್ದಾಣ ಪರಿಸ್ಥಿತಿ ಕೂಡ ಹೀಗೇ ಇದ್ದು, ತಕ್ಷಣ ಸರಿಪಡಿಸಬೇಕು ಎಂದು ತಿಳಿಸಿದರು.

ಪಿಡಬ್ಲುೃಡಿ ಇಂಜಿನಿಯರ್ ಶರಣಬಸವರಾಜ, ಜಿಪಂ ಮಾಜಿ ಉಪಾಧ್ಯಕ್ಷ ಯಂಕಣ್ಣ ಯರಾಶಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹನುಮಂತಗೌಡ ಪಾಟೀಲ್ ಚಂಡೂರು, ಮುಖಂಡರಾದ ಯಲ್ಲಪ್ಪ ಮೇಟಿ, ತಿಮ್ಮಣ್ಣ ಚವಡಿ, ಜಾಕೀರ್ ಹುಸೇನ್ ಕೊಪ್ಪಳ, ತಿಮ್ಮಣ್ಣ ಹಳ್ಳಿಕೇರಿ, ಬಾಳರಡ್ಡಿ ಸೋಮರಡ್ಡಿ, ಗಂಗಾಧರ ಸೋಮರಡ್ಡಿ, ವೀರೇಶ್ ಬಿಸನಹಳ್ಳಿ, ಸಂತೋಷ ಬೆಣಕಲ್, ಡಾ.ದಾನರಡ್ಡಿ, ಶರಣಪ್ಪ ಗಾಂಜಿ ಇತರರಿದ್ದರು.

ಕೋಮಲಾಪುರಕ್ಕೆ ಭೇಟಿ: ಕೋಮಲಾಪುರ ಗ್ರಾಮದಲ್ಲಿ ಇತ್ತೀಚೆಗೆ ನಡೆದ ಬೆಂಕಿ ಅವಘಡದಲ್ಲಿ ಮೃತಪಟ್ಟ ಇಬ್ಬರು ಬಾಲಕರ ಮನೆಗೆ ಮಾಜಿ ಸಚಿವ ಬಸವರಾಜ ರಾಯರಡ್ಡಿ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net