ಶಿಕಾರಿಪುರದಲ್ಲೂ ಲೀಡ್ ಪಡೆಯುವೆ: ಈಶ್ವರಪ್ಪ

Eshwarappa K.S.
ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ
Published on

ಶಿವಮೊಗ್ಗ: ಶಿವಮೊಗ್ಗ ನಗರ, ಶಿವಮೊಗ್ಗ ಗ್ರಾಮಾಂತರ, ಶಿಕಾರಿಪುರದಲ್ಲಿ ಹೆಚ್ಚು ಲೀಡ್ ಪಡೆಯುತ್ತೇನೆ ಎಂದು ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ ವಿಶ್ವಾಸ ವ್ಯಕ್ತಪಡಿಸಿದರು.

ನಗರದಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಉಳಿದ ಕ್ಷೇತ್ರಗಳಲ್ಲೂ ಲೀಡ್ ಪಡೆಯಲು ಶ್ರಮಿಸುತ್ತೇನೆ ಎಂದರು. ಪಕ್ಷ ಶುದ್ದೀಕರಣ ಮಾಡಬೇಕೆಂಬ ಸಂಸದ ಡಿ.ವಿ.ಸದಾನಂದಗೌಡ ಅವರ ಹೇಳಿಕೆಗೆ ನನ್ನ ಸಹಮತ ಇದೆ. ಪಕ್ಷವನ್ನು ಅಪ್ಪ ಮಕ್ಕಳ ಹಿಡಿತದಿಂದ ತಪ್ಪಿಸಬೇಕಿದೆ. ಯಡಿಯೂರಪ್ಪ ಕೇಂದ್ರ ಸಂಸದೀಯ ಮಂಡಳಿ ಸದಸ್ಯರು, ಮಗ ಬಿ.ವೈ.ವಿಜಯೇಂದ್ರ ಶಾಸಕರು ಹಾಗೂ ರಾಜ್ಯಾಧ್ಯಕ್ಷರು, ಬಿ.ವೈ.ರಾಘವೇಂದ್ರ ಸಂಸದರಾಗಿದ್ದಾರೆ. ರಾಜ್ಯದಲ್ಲಿ ಇವರ ಹಿಡಿತದಿಂದ ಪಕ್ಷವನ್ನು ತಪ್ಪಿಸಬೇಕಿದೆ ಎಂದರು.
ಯುವ ಮೋರ್ಚಾ ಅಧ್ಯಕ್ಷನಾಗಿದ್ದಾಗ ಒನ್ ಬೂತ್ 10 ವೋಟ್ಸ್ ಎಂಬ ಅಭಿಯಾನ ನಡೆಸಿದ್ದೆ. ಈ ಬಾರಿ ಒನ್ ಬೂತ್ ಫೈವ್ ವೋಟ್ಸ್ ಎಂದು ಅಭಿಯಾನ ನಡೆಸೋಣ ಎಂದು ಈಶ್ವರಪ್ಪ ಕಾರ್ಯಕರ್ತರಿಗೆ ಕರೆ ನೀಡಿದರು. ಶಿವಮೊಗ್ಗ ನಗರ, ಗ್ರಾಮಾಂತರ ಭಾಗದಲ್ಲಿ ಲೀಡ್ ಪಡೆಯುವ ವಿಶ್ವಾಸವಿದೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net