ಚಿತ್ರಮಂದಿರದಲ್ಲಿ ಮೇ 16ಕ್ಕೆ ಟಕಿಲಾ

IMG_20250508_163258_42.jpg
Published on

ಹುಬ್ಬಳ್ಳಿ: ಶ್ರೀ ಸಿದ್ಧಿವಿನಾಯಕ ಫಿಲಂಸ್ ಲಾಂಛನದಡಿ ಮರಡಿಹಳ್ಳಿ ನಾಗಚಂದ್ರ ಅವರು ನಿರ್ಮಿಸಿದ "ಟಕಿಲಾ' ಚಲನಚಿತ್ರ ರಾಜ್ಯಾದ್ಯಂತ ನೂರಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಮೇ 16ರಂದು ಬಿಡುಗಡೆ ಆಗಲಿದೆ ಎಂದು ನಾಯಕ ನಟ ಧರ್ಮ ಕೀರ್ತಿರಾಜ್ ತಿಳಿಸಿದರು.

ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಾನೊಬ್ಬ ಬಿಜಿನೆಸ್ ಮೆನ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದೇನೆ. ಆತ ಯಾವುದೋ ಒಂದು ಚಟಕ್ಕೆ ಬಿದ್ದ ನಂತರ ಏನೆಲ್ಲ ಆಗಬಹುದು ಎಂಬುದನ್ನು ಚಿತ್ರದಲ್ಲಿ ತೋರಿಸಲಾಗಿದೆ ಎಂದರು.

ನಿರ್ಮಾಪಕ ನಾಗಚಂದ್ರ ಮಾತನಾಡಿ, ಜೀವನದಲ್ಲಿ ಒಂದು ಅವಕಾಶ ಸಿಗುತ್ತದೆ. ಅದನ್ನು ಸರಿಯಾಗಿ ಉಪಯೋಗಿಸಿಕೊಳ್ಳದೇ ಹೋದರೆ ಎರಡನೇ ಅವಕಾಶ ಸಿಗದೇ ಇರಬಹುದು. ಹಾಗಾಗಿ ಸಿಕ್ಕ ಅವಕಾಶವನ್ನು ಸರಿಯಾಗಿ ಬಳಸಿಕೊಳ್ಳಬೇಕು ಎನ್ನುವುದೇ ಚಿತ್ರದ ಕಾನ್ಸೆಪ್ಟ್. ಚಟಗಳು ಅತಿಯಾದಾಗ ಏನು ಬೇಕಾದರೂ ಆಗಬಹುದು. ಡ್ರಗ್ಸ್ ಎನ್ನುವುದು ಒಂದು ಸುಳಿ ಇದ್ದಂತೆ ಅದನ್ನು ಕುತೂಹಲದಿಂದ ಮುಟ್ಟಿ ನೋಡುವ ಪ್ರಯತ್ನ ಮಾಡಬಾರದು ಎಂಬ ಸಂದೇಶವನ್ನು ಚಿತ್ರದ ಮೂಲಕ ನೀಡಲಾಗಿದೆ ಎಂದರು.

ರೇಣುಕುಮಾರ್ ಸಂಗೀತ ಸಂಯೋಜನೆಯಲ್ಲಿ ಎರಡು ಹಾಡುಗಳು ಮೂಡಿಬಂದಿವೆ. 45 ದಿನಗಳವರೆಗೆ ಶೂಟಿಂಗ್ ಮಾಡಲಾಗಿದೆ. ಇದೊಂದು ಕೌಟುಂಬಿಕ ಚಿತ್ರವಾಗಿದೆ. ಎಲ್ಲಿಯೂ ಅಭಾಸ ಆಗದ ರೀತಿ ಹಲವು ವಿಷಯಗಳನ್ನು ತೋರಿಸಲಾಗಿದೆ ಎಂದರು.

ನಾಯಕಿ ನಿಖಿತಾಸ್ವಾಮಿ ಮಾತನಾಡಿ, ಚಿತ್ರದ ಕಥೆ ಕೇಳಿ ನನ್ನ ಪಾತ್ರ ತುಂಬಾ ಚಾಲೆಂಜಿಂಗ್ ಎನಿಸಿತು. ಇದರಲ್ಲಿ ಹಲವಾರು ಶೇಡ್ ಗಳಿವೆ. ಎಲ್ಲವನ್ನೂ ಸಮರ್ಪಕವಾಗಿ ನಿಭಾಯಿಸುವ ಯತ್ನ ಮಾಡಿದ್ದೇನೆ ಎಂದರು.
ಪಿ.ಕೆ.ಎಚ್. ದಾಸ್, ಸುನೀಲ ಶಶಿಧರ ಗೋಷ್ಠಿಯಲ್ಲಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net