ಪರಿಸರ ಸಂರಕ್ಷಣೆಯ ಪಣ ತೊಡಿ

naregal
Published on

ನರೇಗಲ್ಲ: ಪರಿಸರದಲ್ಲಿ ಹಸಿರು ಹೊದಿಕೆಯ ಕ್ರಾಂತಿಗಾಗಿ ಪ್ರತಿಯೊಬ್ಬರು ಪರಿಸರ ಉಳಿಸಿ, ಬೆಳೆಸಿ ಸಂರಕ್ಷಿಸಲು ಸಂಕಲ್ಪ ಮಾಡಬೇಕು ಎಂದು ಹಾಲಕೆರೆ ಅನ್ನದಾನೇಶ್ವರ ಸಂಸ್ಥಾನ ಮಠದ ಮುಪ್ಪಿನ ಬಸವಲಿಂಗ ಸ್ವಾಮೀಜಿ ಹೇಳಿದರು.

ಪಟ್ಟಣದ ಅನ್ನದಾನ ವಿಜಯ ಪ್ರೌಢಶಾಲೆಯ 1972-73ನೇ ಸಾಲಿನ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳ ಹಾಗೂ ಅರಣ್ಯ ಇಲಾಖೆಯ ಆಶ್ರಯದಲ್ಲಿ ಶಾಲಾ ಆವರಣದಲ್ಲಿ ಸೋಮವಾರ ಆಯೋಜಿಸಿದ್ದ ವನಮಹೋತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಆರೋಗ್ಯಪೂರ್ಣ ಬದುಕಿಗೆ ಒಳ್ಳೆಯ ಪರಿಸರವೇ ಆಧಾರ. ನಮಗೆ ಮತ್ತು ಪ್ರಾಣಿಪಕ್ಷಿಗಳಿಗೆ ಗಾಳಿ, ನೀರು, ನೆರಳು, ಹಣ್ಣು- ನೀಡುವ ವೃಕ್ಷಗಳನ್ನು ಬೆಳೆಸಿ ಸಂರಕ್ಷಿಸುವ ಹೊಣೆ ನಮ್ಮೆಲ್ಲರದ್ದಾಗಿದೆ ಎಂದರು.

ವಲಯ ಅರಣ್ಯಾಧಿಕಾರಿ ಮಂಜುನಾಥ ಮೇಗಲಮನಿ ಮಾತನಾಡಿ, ರಾಜ್ಯದಲ್ಲಿ ಹಸಿರು ಪ್ರದೇಶವನ್ನು ವೃದ್ಧಿಸಲು ಹಮ್ಮಿಕೊಂಡಿರುವ ಸಸಿ ನೆಡುವ ಅಭಿಯಾನದಡಿ ಜಿಲ್ಲಾದ್ಯಂತ ಪ್ರಸಕ್ತ ಸಾಲಿನಲ್ಲಿ ಅನೇಕ ಗಿಡಗಳನ್ನು ನೆಟ್ಟು ಬೆಳೆಸುವ ಸಂಕಲ್ಪ ಮಾಡಲಾಗಿದೆ ಎಂದರು.

ಎಸ್ಸೆಸ್ಸೆಲ್ಸಿಯಲ್ಲಿ ಪ್ರಥಮ ಸ್ಥಾನ ಪಡೆಯುವ ಅನ್ನದಾನ ವಿಜಯ ವಿದ್ಯಾ ಪ್ರಸಾರಕ ಸಮಿತಿಯ ಮೂರು ಪ್ರೌಢ ಶಾಲೆಯ ವಿದ್ಯಾರ್ಥಿಗಳಿಗೆ ತಲಾ 10 ಸಾವಿರ ಬಹುಮಾನ ಕೊಡುವುದಾಗಿ ಹಿರಿಯ ವಿದ್ಯಾರ್ಥಿಗಳಾದ ಮಂಜುನಾಥ ಜೋಳದ, ರುದ್ರಸ್ವಾಮಿ ಹಿರೇವಡೆಯರ, ಅಶೋಕ ಕುಲಕರ್ಣಿ ಘೋಷಿಸಿದರು. ಶಾಲೆಯಲ್ಲಿ ನಡೆಸುವ ಚರ್ಚಾ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆಯುವ ವಿದ್ಯಾರ್ಥಿಗೆ ಹುಬ್ಬಳ್ಳಿಯಿಂದ ಬೆಂಗಳೂರಿಗೆ ಒಂದು ದಿನದ ಉಚಿತ ವಿಮಾನ ಪ್ರಯಾಣವನ್ನು ಡಾ. ಬಸವರಾಜ ದಿಂಡೂರ ಘೋಷಣೆ ಮಾಡಿದರು. 1972-73ನೇ ಸಾಲಿನ ವಿದ್ಯಾರ್ಥಿಗಳಿಗೆ ಬೋಧನೆ ಮಾಡಿದ ಗುರುಗಳಿಗಾಗಿ ಆ. 14ರಂದು ಗುರುವಂದನ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದರು.

ಅರಣ್ಯಾಧಿಕಾರಿ ಅನ್ವರ ಕೋಲ್ಹಾರ ಪರಿಸರ ರಕ್ಷಣೆ ಕುರಿತು ಪ್ರತಿಜ್ಞಾ ವಿಧಿ ಬೋಧಿಸಿದರು. ಅಶೋಕ ಕುಲರ್ಕರ್ಣಿ, ಆರ್. ಎಲ್. ಪೊಲೀಸ್ ಪಾಟೀಲ, ಅನ್ನದಾನ ವಿಜಯ ವಿದ್ಯಾ ಪ್ರಸಾರಕ ಸಮಿತಿಯ ಆಡಳಿತಾಧಿಕಾರಿ ಎನ್.ಆರ್. ಗೌಡರ, ವೀರಣ್ಣ ಹಳ್ಳಿ, ಬಸವರಾಜ ದಿಂಡೂರ, ಎಲ್.ಎಲ್. ಪೊಲೀಸ್ ಪಾಟೀಲ, ಚಂದ್ರಾಮ ಗ್ರಾಮಪುರೋಹಿತ, ಸೋಮನಾಥ ಸಂಗನಾಳಮಠ, ಬಸವರಾಜ ಬಸವರಡ್ಡೇರ, ಎಂ.ಎಸ್. ಧಡೇಸೂರಮಠ, ಕೆ.ಸಿ. ಜೋಗಿ, ಮುಖ್ಯ ಶಿಕ್ಷಕ ಎಂ.ವಿ. ವೀರಾಪೂರ, ಎಸ್.ಎನ್. ಹೂಲಗೇರಿ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net