ರಾಮಗಿರಿ ಮಹಾರಾಜ್ ವಿರುದ್ಧ ಕಠಿಣ ಕ್ರಮ ಕೈಗೊಳ್ಳಿ

JKD 30-1
ಪ್ರವಾದಿ ಮೊಹಮ್ಮದ್ ಮತ್ತು ಇಸ್ಲಾಂ ಧರ್ಮದ ವಿರುದ್ಧ ಮಹಾರಾಷ್ಟ್ರದ ಧಾರ್ಮಿಕ ಮುಖಂಡ ರಾಮಗಿರಿ ಮಹಾರಾಜ್ ಅವಹೇಳನಾಕಾರಿ ಹೇಳಿಕೆ ಖಂಡಿಸಿ ಜಮಖಂಡಿಯಲ್ಲಿ ವಿವಿಧ ಮುಸ್ಲಿಂ ಪರ ಸಂಘಟನೆಗಳು ಪ್ರತಿಭಟನೆ ನಡೆಸಿ ಗ್ರೇಡ್-2 ತಹಸೀಲ್ದಾರ್ ಕೆ.ವೈ. ಬಿದರಿ ಅವರಿಗೆ ಮನವಿ ಸಲ್ಲಿಸಿದವು.
Published on

ಜಮಖಂಡಿ: ಪ್ರವಾದಿ ಮೊಹಮ್ಮದ್ ಮತ್ತು ಇಸ್ಲಾಂ ಧರ್ಮದ ವಿರುದ್ಧ ಅವಹೇಳನಾಕಾರಿ ಹೇಳಿಕೆ ನೀಡಿರುವ ಮಹಾರಾಷ್ಟ್ರದ ಧಾರ್ಮಿಕ ಮುಖಂಡ ರಾಮಗಿರಿ ಮಹಾರಾಜ್ ವಿರುದ್ಧ ಕಠಿಣ ಕ್ರಮ ಜರುಗಿಸಬೇಕೆಂದು ಒತ್ತಾಯಿಸಿ ವಿವಿಧ ಮುಸ್ಲಿಂ ಪರ ಸಂಘಟನೆಗಳು ಶುಕ್ರವಾರ ಪ್ರತಿಭಟನೆ ನಡೆಸಿ ತಹಸೀಲ್ದಾರ್‌ಗೆ ಮನವಿ ಸಲ್ಲಿಸಿದವು.
ಸಂಘಟನೆಗಳ ಪದಾಧಿಕಾರಿಗಳು ದೇಸಾಯಿ ವೃತ್ತದಲ್ಲಿ ಜಮಾಯಿಸಿದ ಮಾನವ ಸರಪಳಿ ರಚಿಸಿ ಕೆಲ ಹೊತ್ತು ತಡೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.

ಮೌಲಾನಾ ಅಲ್ತಾಖಾನ್ ಮದನಿ ಮಾತನಾಡಿ, ಪ್ರವಾದಿ ಹಜರತ್ ಮೊಹಮ್ಮದ್ ಪೈಗಂಬರ ಅವರ ಕುರಿತು ಮಹಾಂತ ರಾಮಗಿರಿ ಮಹಾರಾಜರು ನೀಡಿರುವ ಅವಹೇಳನಕಾರಿ ಹೇಳಿಕೆಗಳನ್ನು ನಾವು ತೀವ್ರ ಖಂಡಿಸುತ್ತೇವೆ. ಅವರ ಕುರಿತಾಗಿ ರಾಮಗಿರಿ ಮಹಾರಾಜ ಅವಹೇಳನಕಾರಿ ಭಾಷಣ ಮಾಡಿದ್ದು, ಈ ಸ್ವಾಮೀಜಿ ಮೇಲೆ ಕಾನೂನು ರೀತಿ ಕಠಿಣ ಕ್ರಮ ಜರುಗಿಸಬೇಕೆಂದು ಆಗ್ರಹಿಸಿದರು.

ಭಾರತದ ಸಂವಿಧಾನವು ಎಲ್ಲ ಧರ್ಮದ ಸಮಾಜ ಬಂಧುಗಳಿಗೆ ಸಮಾನ ಜೀವನ ನಡೆಸಲು ಅನುವು ಮಾಡಿಕೊಟ್ಟಿದ್ದರೂ ಮಹಾಂತ ರಾಮಗಿರಿ ಮಹಾರಾಜ ಪ್ರವಾದಿ ಹಜರತ್ ಮೊಹಮ್ಮದ್ ಪೈಗಂಬರರ ಕುರಿತಾಗಿ ಅವಹೇಳನಕಾರಿಯಾಗಿ ಮಾತನಾಡಿರುವುದು ಇಸ್ಲಾಂ ಸಮಾಜದವರಿಗೆ ತೀವ್ರ ನೋವನ್ನುಂಟು ಮಾಡಿದೆ. ಕೂಡಲೇ ಅವರಿಗೆ ಕಠಿಣ ಶಿಕ್ಷೆ ವಿಧಿಸಬೇಕೆಂದು ಆಗ್ರಹಿಸಿದರು.

ಬಳಿಕ ಗ್ರೇಡ್-2 ತಹಸೀಲ್ದಾರ್ ಕೆ.ವೈ. ಬಿದರಿ ಅವರಿಗೆ ಮನವಿ ಸಲ್ಲಿಸಿದರು.

ಮೌಲಾನಾ ಇಸಾ ಇನಾಮದಾರ, ಮೌಲಾನಾ ಅನೀಸ್ ಡಾಂಗೆ, ಮೌಲಾನಾ ಮುಫ್ತಿ ಹಾರೂನ್, ಮೌಲಾನಾ ಾರೂಕ್, ಮೌಲಾನಾ ಮುಜಮ್ಮೀಲ ಶೇಖ, ಮೌಲಾನಾ ಅಲ್ತಾಖಾನ್ ಮದನಿ, ಮೌಲಾನಾ ಸರ್ರಾಜ, ರಾಜೇಸಾಬ ತಾಳಿಕೋಟಿ, ಖೀಜರ ಪೆಂಡಾರಿ, ಖಾಜಾಆಮೀನ್ ಕಂಕಣಪೀರ, ರಫೀಕ್ ಕಲಾದಗಿ, ಝಾಕೀರಹುಸೇನ್ ನದಾಫ್, ಅಬ್ದುಲ ಜಮಾದಾರ, ಸಮೀರ ಕಂಗನೋಳ್ಳಿ, ಅನ್ವರ ಮೋಮಿನ, ಮುಭಾರಕ ಅಪರಾದ, ನಸರೋದ್ದಿನ್ ಜಮಾದಾರ, ಉಸ್ಮಾನಸಾಬ ದಿಲಾವರ, ಮಕ್ಬೂಲ್ ಅಥಣಿಕರ, ಗುಡುಸಾಬ ಹೊನವಾಡ, ರಾಜು ಮಸಳಿ, ಮುಸ್ತಾಕ್ ಝೆಂಡೆ, ಅಯ್ಯುಬ್ ಗದಗ, ಅಸ್ಗರಅಲಿ ಝೆಂಡೆ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net