ಅಸ್ತಮಾ ರೋಗದ ಮುಂಜಾಗ್ರತೆ ವಹಿಸಿ

16 astma
ಹುನಗುಂದ ಗೌರಮ್ಮ ನರ್ಸಿಂಗ್ ಮಹಾವಿದ್ಯಾಲಯದಲ್ಲಿ ವಿಶ್ವ ಅಸ್ತಮಾ ದಿನಾಚರಣೆ ಕಾಯಕ್ರಮದಲ್ಲಿ ಪ್ರಾಚಾರ್ಯ ಸಂಗಮೇಶ ಪಟ್ಟಣಶೆಟ್ಟಿ ಮಾತನಾಡಿದರು. ಉಪನ್ಯಾಸಕ ನಾಗಾರ್ಜುನ್ ಎಂ. ಇತರರಿದ್ದರು.
Published on

ಹುನಗುಂದ: ಅನುವಂಶಿಕವಾಗಿ, ಕಾಟನ್ ್ಯಾಕ್ಟರಿ ಮತ್ತು ಕಲುಷಿತ ವಾತಾವರಣದ ಜತೆಗೆ ಧೂಮಪಾನ ಮಾಡುವುದರಿಂದ ರೋಗ ನಿರೋಧಕ ಶಕ್ತಿ ಕಡಿಮೆಯಾಗಿ ಬರುವ ಅಪಾಯಕಾರಿ ಅಸ್ತಮಾ ರೋಗವನ್ನು ಮುಂಜಾಗ್ರತಾ ಕ್ರಮವಾಗಿ ಇನ್ಶುಲೇಶಷನ್ ಚಿಕಿತ್ಸೆ ಪಡೆದು ಸಂಪೂರ್ಣ ನಿಯಂತ್ರಿಸಬಹುದೆಂದು ಪ್ರಾಚಾರ್ಯ ಸಂಗಮೇಶ ಪಟ್ಟಣಶೆಟ್ಟಿ ಹೇಳಿದರು.

ಇಲ್ಲಿನ ಗೌರಮ್ಮ ಚರಂತಿಮಠ ನರ್ಸಿಂಗ್ ವಿಜ್ಞಾನ ಮತ್ತು ಔಷಧ ಮಹಾವಿದ್ಯಾಲಯದಲ್ಲಿ ಗುರುವಾರ ಹಮ್ಮಿಕೊಂಡಿದ್ದ ವಿಶ್ವ ಅಸ್ತಮಾ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಇತ್ತೀಚೆಗೆ ಅಸ್ತಮಾ ಸಾಮಾನ್ಯ ಕಾಯಿಲೆಯಾಗಿದ್ದರೂ ಸಹಿತ ನಿಷ್ಕಾಳಜಿ ಮಾಡದೇ ತಕ್ಷಣ ಚಿಕಿತ್ಸೆ ಪಡೆದುಕೊಳ್ಳಬೇಕು ಎಂದರು.

ಉಪನ್ಯಾಸಕ ನಾಗಾರ್ಜುನ್ ಎಂ. ಮಾತನಾಡಿ, ಕಾಯಿಲೆ ಬಂದರೆ ಅಪಾಯ ತಪ್ಪಿದ್ದಲ್ಲ. ಆಧುನಿಕ ತಂತ್ರಜ್ಞಾನ ಯುಗದಲ್ಲಿ ಯಾವುದೇ ಮರಣಾಂತಿಕ ಕಾಯಿಲೆ ಬರುವ ಮುನ್ನ ಲಭ್ಯವಿರುವ ಸಾಕಷ್ಟು ಮುನ್ನೆಚ್ಚರಿಕೆ ಕ್ರಮಗಳನ್ನು ವಹಿಸಿ ಅಪಾಯದಿಂದ ಪಾರಾಗಬಹುದು ಎಂದರು.

ವೀಣಾ ಕಿರಗಿ, ಸುನೀಲ್ ಕೆ., ಜಯಶ್ರೀ ಎನ್., ಶರಣಮ್ಮ ನಾಡಗೌಡ, ಮಹಾಂತೇಶ ಭಾವಿಕಟ್ಟಿ, ಹನುಮಂತ ಕರೆಕೋಟಿ ಉಪಸ್ಥಿತರಿದ್ದರು.
ನರ್ಸಿಂಗ್ ವಿದ್ಯಾರ್ಥಿಗಳು ಭಾಗವಹಿಸಿದ್ದರು.

ಲಕ್ಷ್ಮೀ ಸ್ವಾಗತಿಸಿದರು. ಚಂದ್ರಕಲಾ ನಿರೂಪಿಸಿದರು. ಕುಮಾರ ರಾಹುಲ್ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net