ಚರಂಡಿ ಸ್ವಚ್ಛತೆಗೆ ಅಗತ್ಯ ಕ್ರಮಕೈಗೊಳ್ಳಿ

15-03-Shiva-1
ರಾಯಚೂರು ವಾರ್ಡ್ ಸಂಖ್ಯೆ 29ರಲ್ಲಿನ ಜನರಿಗೆ ಸಮರ್ಪಕ ಕುಡಿಯುವ ನೀರು ಒದಗಿಸಬೇಕು ಎಂದು ಒತ್ತಾಯಿಸಿ ಜಿಲ್ಲಾಕಾರಿ ಕಚೇರಿ ಕೇಂದ್ರ ಸ್ಥಾನಿಕ ಅಕಾರಿ ಪ್ರಶಾಂತಕುಮಾರಗೆ ಸಮಾಜ ಪರಿವರ್ತನಾ ಸಮಿತಿಯಿಂದ ಶುಕ್ರವಾರ ಮನವಿ ಸಲ್ಲಿಸಲಾಯಿತು. ಸಮಿತಿ ಅಧ್ಯಕ್ಷ ಶ್ರೀನಿವಾಸ ಕೊಪ್ಪರ, ಪದಾಕಾರಿಗಳಾದ ಶಂಶಾವಲಿ, ಮಲ್ಲಿಕಾರ್ಜುನ, ರಂಗನಾಥ, ನಿವಾಸಿಗಳಾದ ಮೈಲಾರಿ, ಗಿರಿಜಮ್ಮ, ಲಕ್ಷ್ಮಿ, ಮಾಲಾ, ಡಿ.ಕೆ.ರಾಜು ಇದ್ದರು.
Published on

ರಾಯಚೂರು: ನಗರದ ವಾರ್ಡ್ ಸಂಖ್ಯೆ 29ರಲ್ಲಿ ಜನರಿಗೆ ಸಮರ್ಪಕ ಕುಡಿಯುವ ನೀರು ಒದಗಿಸಬೇಕು. ಚರಂಡಿಗಳನ್ನು ಸ್ವಚ್ಛಗೊಳಿಸಲು ಅಗತ್ಯ ಕ್ರಮಕೈಗೊಳ್ಳುವಂತೆ ಸ್ಥಳೀಯ ಟಿಪ್ಪು ಸುಲ್ತಾನ್ ಉದ್ಯಾನವನದಲ್ಲಿ ರಾಷ್ಟ್ರೀಯ ಸಮಾಜ ಪರಿವರ್ತನಾ ಸಮಿತಿ ನೇತೃತ್ವದಲ್ಲಿ ನಿವಾಸಿಗಳು ಶುಕ್ರವಾರ ಪ್ರತಿಭಟನೆ ನಡೆಸಿದರು.
ನಂತರ ಜಿಲ್ಲಾಕಾರಿ ಕಚೇರಿ ಕೇಂದ್ರ ಸ್ಥಾನಿಕ ಅಕಾರಿ ಪ್ರಶಾಂತಕುಮಾರಗೆ ಮನವಿ ಸಲ್ಲಿಸಿ, ವಾರ್ಡ್‌ನಲ್ಲಿ ಕುಡಿಯುವ ನೀರಿಗೆ ಜನರು ಪರದಾಡುವಂತಾಗಿದ್ದು, ಚರಂಡಿಗಳನ್ನು ಸ್ವಚ್ಛಗೊಳಿಸದ ಕಾರಣ ದುರ್ವಾಸನೆಯಿಂದ ಜನರು ಸಮಸ್ಯೆ ಎದುರಿಸುವಂತಾಗಿದೆ ಎಂದು ದೂರಿದರು.
ಕೃಷ್ಣಾ ನದಿಯಿಂದ ಮುಖ್ಯ ಪೈಪ್ ಮೂಲಕ ಕೈಗಾರಿಕೆಗಳಿಗೆ ಅಕ್ರಮವಾಗಿ ನೀರು ಸರಬರಾಜು ಮಾಡುತ್ತಿರುವುದರಿಂದ ಜನರಿಗೆ ಸಮರ್ಪಕ ನೀರು ಸರಬರಾಜಾಗುತ್ತಿಲ್ಲ. ಕೂಡಲೇ ವಾರ್ಡ್‌ನಲ್ಲಿರುವ ಕೊಳವೆಬಾವಿ ದುರಸ್ತಿಗೊಳಿಸಬೇಕು. ದುಸ್ಥಿತಿಯಲ್ಲಿರುವ ಪೈಪ್‌ಗಳನ್ನು ಬದಲಾಯಿಸಿ ಸಮರ್ಪಕ ನೀರು ಒದಗಿಸಲು ಕ್ರಮಕೈಗೊಳ್ಳಬೇಕು.
ವಾರ್ಡ್‌ನಲ್ಲಿನ ಚರಂಡಿಗಳನ್ನು ಹಲವು ತಿಂಗಳಿಂದ ಸ್ವಚ್ಛಗೊಳಿಸಲಾಗಿಲ್ಲ. ಇದರಿಂದ ಸೊಳ್ಳೆಗಳ ಕಾಟ ಹೆಚ್ಚಾಗಿದ್ದು, ಜನರು ರೋಗಕ್ಕೆ ತುತ್ತಾಗುವಂತಾಗಿದೆ. ಚರಂಡಿಯಲ್ಲಿ ಹೂಳೆತ್ತಿ ಸರಾಗವಾಗಿ ನೀರು ಹರಿಯುವಂತೆ ಮಾಡಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.
ಪ್ರತಿಭಟನೆಯಲ್ಲಿ ಸಮಿತಿ ಅಧ್ಯಕ್ಷ ಶ್ರೀನಿವಾಸ ಕೊಪ್ಪರ, ಪದಾಕಾರಿಗಳಾದ ಶಂಶಾವಲಿ, ಮಲ್ಲಿಕಾರ್ಜುನ, ರಂಗನಾಥ, ನಿವಾಸಿಗಳಾದ ಮೈಲಾರಿ, ಗಿರಿಜಮ್ಮ, ಲಕ್ಷ್ಮಿ, ಮಾಲಾ, ಡಿ.ಕೆ.ರಾಜು ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net