ನೀರು ಉಳಿಸಲು ಅಗತ್ಯ ಕ್ರಮ ಕೈಗೊಳ್ಳಿ

Rain Water Harvesting Pond
Published on

ಸಿದ್ದಾಪುರ: ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ.ಟ್ರಸ್ಟ್ ಸಿದ್ದಾಪುರ ಪ್ರಗತಿ ಬಂಧು ಸ್ವಸಹಾಯ ಸಂಘಗಳ ಒಕ್ಕೂಟ ಗೋಳಗೋಡ/ಅಕ್ಕುಂಜಿ ಇವರ ಸಹಕಾರದಲ್ಲಿ ಅಕ್ಕುಂಜಿಯಲ್ಲಿ ಕೃಷಿ ನೀರಾವರಿ ತರಬೇತಿ ಕಾರ್ಯಕ್ರಮ ನಡೆಯಿತು.

ಕೃಷಿ ಇಲಾಖೆಯ ನಿವೃತ್ತ ಕೃಷಿ ಅಧಿಕಾರಿ ಐ.ಕೆ.ನಾಯ್ಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಇತ್ತೀಚಿನ ದಿನದಲ್ಲಿ ವಾತಾವರಣದ ಏರು ಪೇರಿನಿಂದಾಗಿ ವರ್ಷದಿಂದ ವರ್ಷಕ್ಕೆ ಮಳೆಯ ಪ್ರಮಾಣ ಕಡಿಮೆ ಆಗುತ್ತಿದೆ.

ನೀರಿನ ಉಪಯೋಗವನ್ನು ಇಂದಿನಿಂದಲೇ ಹಿತಮಿತವಾಗಿ ಮಾಡಬೇಕು.

ಮಳೆಯ ನೀರನ್ನು ಕೃಷಿ ಹೊಂಡ, ಇಂಗು ಗುಂಡಿ, ಚೆಕ್ ಡ್ಯಾಮ್ ಮೂಲಕ ಶೇಖರಣೆ ಮಾಡಬೇಕಾಗಿದೆ. ಕಡಿಮೆ ನೀರಿನಲ್ಲಿ ಬೆಳೆಯುವಂತಹ ಕೃಷಿಯನ್ನು ಮಾಡಬೇಕು. ನೀರಿನ ಉಳಿತಾಯದ ಬಗ್ಗೆ ಎಲ್ಲರೂ ಜಾಗೃತರಾಗಿರಬೇಕು ಎಂದರು.

ಒಕ್ಕೂಟದ ಅಧ್ಯಕ್ಷ ಅಣ್ಣಪ್ಪ ನಾಯ್ಕ, ದೇವಸ್ಥಾನ ಕಮಿಟಿ ಅಧ್ಯಕ್ಷ ಬಸವರಾಜ್ ನಾಯ್ಕ, ಸೇವಾ ಪ್ರತಿನಿಧಿ ಸುಜಾತಾ, ಸಂಘದ ಸದಸ್ಯರು, ಪ್ರಗತಿ ಪರಕೃಷಿಕರು ಉಪಸ್ಥಿತರಿದ್ದರು.

ಗ್ರಾಮಾಭಿವೃದ್ಧಿ ಯೋಜನೆಯಮೇಲ್ವಿಚಾರಕಿ ಪೂರ್ಣಿಮಾ ಸ್ವಾಗತಿಸಿದರು. ಕೃಷಿ ಮೇಲ್ವಿಚಾರಕ ಮಹಾದೇವ ಬಿ ಕಾರ್ಯಕ್ರಮ ನಿರ್ವಹಿಸಿದರು.

ಸ್ವ-ಉದ್ಯೋಗ ಪ್ರೇರಾಣಾ ಶಿಬಿರ

ಪಟ್ಟಣದ ಶಂಕರಮಠದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ.ಟ್ರಸ್ಟ್ ಸಿದ್ದಾಪುರ ಇದರ ಮಹಿಳಾ ಜ್ಞಾನವಿಕಾಸ ಕೇಂದ್ರದ ಪ್ರಾಯೋಜಕತ್ವದಲ್ಲಿ ಆಸಕ್ತರಿಗೆ ಸ್ವ-ಉದ್ಯೋಗ ಪ್ರೇರಾಣಾ ಶಿಬಿರ ನಡೆಯಿತು.

ಗ್ರಾಮಾಭಿವೃದ್ಧಿ ಯೋಜನೆಯ ತಾಲೂಕು ಯೋಜನಾಧಿಕಾರಿ ಪ್ರಭಾಕರ ನಾಯ್ಕ ಕಾರ್ಯಕ್ರಮ ಉದ್ಘಾಟಿಸಿದರು. ಪಪಂ ಸದಸ್ಯ ಮಾರುತಿ ನಾಯ್ಕ ಅಧ್ಯಕ್ಷತೆವಹಿಸಿದ್ದರು. ತಾಲೂಕು ವಿಚಕ್ಷಣಾಧಿಕಾರಿ ಉದಯ ಉಪಸ್ಥಿತರಿದ್ದರು.

ರುಡ್ ಸಂಸ್ಥೆಯ ಹಿರಿಯ ಉಪನ್ಯಾಸಕ ಕರುಣಾಕರ ಜೈನ್ ಸಂಪನ್ಮೂಲ ವ್ಯಕ್ತಿಯಾಗಿ ಪಾಲ್ಗೊಂಡಿದ್ದರು. ವಲಯ ಮೇಲ್ವಿಚಾರಕಿ ಜ್ಯೋತಿ ಸ್ವಾಗತಿಸಿದರು. ತಾಲೂಕು ಜ್ಞಾನವಿಕಾಸ ಸಮನ್ವಯಾಧಿಕಾರಿ ಪ್ರಭಾವತಿ ಕಾರ್ಯಕ್ರಮ ನಿರ್ವಹಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net