ಪಕ್ಷ ಸಂಘಟನೆಗೆ ಹೆಚ್ಚು ಆಸಕ್ತಿ ವಹಿಸಿ

Take more interest in the party organization.
ಬೀಳಗಿ ಮತಕ್ಷೇತ್ರದ ಬಿಜೆಪಿ ನೂತನ ಮಂಡಳ ಅಧ್ಯಕ್ಷರ ಆಯ್ಕೆ, ಬಿಜೆಪಿ ಜಿಲ್ಲಾ ಎಸ್‌ಟಿ ಮೋರ್ಚಾ ಅಧ್ಯಕ್ಷ ಹಾಗೂ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮದಲ್ಲಿ ಬೀಳಗಿ ಮಂಡಳ ಅಧ್ಯಕ್ಷರಾಗಿ ಆಯ್ಕೆಯಾದ ಹೊಳಬಸು ಬಾಳಶಟ್ಟಿಗೆ ಬಿಜೆಪಿ ಧ್ವಜ ನೀಡಿಲಾಯಿತು. ಮಾಜಿ ಸಚಿವ ಡಾ.ಎಂ.ಆರ್. ನಿರಾಣಿ, ಬಂಗಾರು ಹಣಮಂತ, ಎಚ್.ಆರ್.ನಿರಾಣಿ, ಹೂವಪ್ಪ ರಾಠೋಡ, ಬಸವರಾಜ ಖೋತ ಮತ್ತಿತರರಿದ್ದಾರೆ.
Published on

ಬೀಳಗಿ: ಸೋಲು ನಮ್ಮ ತಪ್ಪಿನಿಂದಾಗಿದೆ, ವಿನಹ ಕಾಂಗ್ರೆಸ್‌ನಿಂದ ಅಲ್ಲ. ಕಾರ್ಯಕರ್ತರು ಎಂದೆಗುಂದದೆ ಪಕ್ಷ ಸಂಘಟನೆಗೆ ಹೆಚ್ಚು ಆಸಕ್ತಿ ವಹಿಸಿ ಮುಂದಿನ ತಾಪಂ ಹಾಗೂ ಜಿಪಂ ಚುನಾವಣೆಯಲ್ಲಿ ಪಕ್ಷ ಬಹುಮತಗಳಿಸುವ ನಿಟ್ಟಿನಲ್ಲಿ ಕಾರ್ಯ ನಿರ್ವಹಿಸಬೇಕು ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷ, ಮಾಜಿ ಸಚಿವ ಡಾ. ಮುರುಗೇಶ ಆರ್. ನಿರಾಣಿ ಹೇಳಿದರು.

ಪಟ್ಟಣದಲ್ಲಿ ಭಾನುವಾರ ಆಯೋಜಿಸಿದ್ದ ಬಿಜೆಪಿ ಮಂಡಳ ಅಧ್ಯಕ್ಷರ ಆಯ್ಕೆ, ಬಿಜೆಪಿ ಜಿಲ್ಲಾ ಎಸ್‌ಟಿ ಮೋರ್ಚಾ ಅಧ್ಯಕ್ಷ ಹಾಗೂ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ನನ್ನ ಅಧಿಕಾರದ ಅವಧಿಯಲ್ಲಿ ಮತಕ್ಷೇತ್ರದ ದೇವಸ್ಥಾನದ ಅಭಿವೃದ್ಧಿಗೆ ಎಲ್ಲ ದೇವಸ್ಥಾನಗಳಿಗೆ ಅಂದಾಜು 10ಲಕ್ಷ ರೂ.ಗಳಂತೆ ಮುಂಜೂರು ಮಾಡಲಾಗಿದೆ. ಆದರೆ ಕೆಲವು ದೇವಸ್ಥಾನಗಳಿಗೆ ನೀಡಿದ ಅನುದಾನವನ್ನು ಬೇರೆ ದೇವಸ್ಥಾನಗಳಿಗೆ ವರ್ಗಾಹಿಸಲಾಗಿದೆ. ಈ ರೀತಿ ಮಾಡುವುದು ಸರಿಯಲ್ಲ ಎಂದರು.

ರಾಜ್ಯ ಎಸ್‌ಟಿ ಮೋರ್ಚಾ ಅಧ್ಯಕ್ಷ ಬಂಗಾರು ಹನುಮಂತ ಮಾತನಾಡಿ, ಅಹಿಂದ ನಾಯಕರು ಎಂದು ಹೇಳಿಕೊಳ್ಳುವ ಸಿದ್ದರಾಮಯ್ಯನವರು ವಾಲ್ಮೀಕಿ ನಿಗಮದಲ್ಲಿ 189 ಕೋಟಿ ರೂ ಹಗರಣ ಮಾಡಿ, ಆಂದ್ರ ಪ್ರದೇಶ ಚುನಾವಣೆಯಲ್ಲಿ ಬಳಕೆ ಮಾಡಿಕೊಂಡಿದ್ದಾರೆ. ಇಂತಹ ಭ್ರಷ್ಟ ಸರ್ಕಾರವನ್ನು ರಾಜ್ಯದಿಂದ ದೂರವಿಡಬೇಕಾಗಿದೆ ಎಂದರು.

ಕ್ಷೇತ್ರಕ್ಕೆ ನಿರಾಣಿಯವರ ಕೊಡುಗೆ ಅಪಾರವಾಗಿದೆ. ಬಿಜೆಪಿ ಸರ್ಕಾರದ ಕೊಡುಗೆಗಳನ್ನು ವಾಲ್ಮೀಕಿ ಸಮಾಜ ಅರ್ಥ ಮಾಡಿಕೊಂಡು, ಚುನಾವಣೆಯಲ್ಲಿ ಅವರ ಬೆನ್ನಿಗೆ ನಿಲ್ಲಬೇಕಿದೆ ಎಂದರು.

ವಿಧಾನ ಪರಿಷತ್ ಶಾಸಕ ಹಣಮಂತ ಆರ್. ನಿರಾಣಿ, ಜಿಪಂ ಮಾಜಿ ಅಧ್ಯಕ್ಷ ಹೂವಪ್ಪ ರಾಠೋಡ ಮಾತನಾಡಿದರು. ಈರಣ್ಣ ಗಿಡ್ಡಪ್ಪಗೋಳ, ಮಲ್ಲಪ್ಪ ಶಂಬೋಜಿ, ಮಲ್ಲಿಕಾರ್ಜುನ ಅಂಗಡಿ, ಬಸವರಾಜ ಖೋತ, ವಿ.ಜಿ.ರೇವಡಿಗರ, ಕೃಷ್ಣಗೌಡ ಪಾಟೀಲ, ಮೋಹನ ಜಾಧವ, ರಾಮಣ್ಣ ಕಾಳಪ್ಪಗೋಳ, ಜಿಲ್ಲಾ ಪ್ರಧಾನಿ ಕಾರ್ಯದರ್ಶಿ ಮಲ್ಲಯ್ಯ ಮುಗನೂರಮಠ, ಜಿಲ್ಲಾ ಮಹಿಳಾ ಮೋರ್ಚಾ ಪ್ರಧಾನಿ ಕಾರ್ಯದರ್ಶಿ ಕಾವೇರಿ ರಾಠೋಡ, ಮಹಾಂತೇಶ ಕೋಲಕಾರ, ಹೊಳಬಸು ಬಾಳಶಟ್ಟಿ, ವೀರಣ್ಣ ಹಳೆಗೌಡರ, ಬೂಸರಡ್ಡಿ, ಹನಮಂತಗೌಡ ಪಾಟೀಲ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net