ಆರೋಗ್ಯದತ್ತ ಹೆಚ್ಚಿನ ಕಾಳಜಿ ವಹಿಸಿ

24 RTL 02 SANMAN
Published on

ರಟ್ಟಿಹಳ್ಳಿ: ನಗರ, ಪಟ್ಟಣ, ಗ್ರಾಮಗಳಲ್ಲಿ ಸಾರ್ವಜನಿಕರ ರಸ್ತೆಗಳು, ಕಾಲುವೆಗಳ ಸ್ವಚ್ಛತೆ ಹಾಗೂ ನೈರ್ಮಲ್ಯಯುಕ್ತ ಪಟ್ಟಣಕ್ಕೆ ಶ್ರಮಿಸುವ ಸ್ವಚ್ಛತಾ ಸೇನಾನಿಗಳ ಕಾರ್ಯ ಶ್ಲಾಘನೀಯ. ಪೌರ ಕಾರ್ವಿುಕರು ತಮ್ಮ ಆರೋಗ್ಯದತ್ತ ಹೆಚ್ಚಿನ ಕಾಳಜಿ ವಹಿಸಬೇಕು ಎಂದು ಪಟ್ಟಣ ಪಂಚಾಯಿತಿ ಆಡಳಿತಾಧಿಕಾರಿ, ತಹಸೀಲ್ದಾರ್ ಕೆ. ಗುರುಬಸವರಾಜ ಹೇಳಿದರು.
ಪೌರ ಕಾರ್ವಿುಕರ ದಿನಾಚರಣೆ ನಿಮಿತ್ತ ಪಟ್ಟಣದಲ್ಲಿ ಸೋಮವಾರ ಆಯೋಜಿಸಿದ್ದ ಪೌರ ಕಾರ್ವಿುಕರ ಸನ್ಮಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಪಪಂ ಮುಖ್ಯಾಧಿಕಾರಿ ಸಂತೋಷ ಚಂದ್ರಿಕೇರ ಮಾತನಾಡಿ, ಕಾರ್ವಿುಕರು ದುಶ್ಚಟಗಳಿಗೆ ಬಲಿಯಾಗಬಾರದು, ಆರೋಗ್ಯದತ್ತ ಕಾಳಜಿ ವಹಿಸಬೇಕು. ಪೌರ ಕಾರ್ವಿುಕರ ಸಮಸ್ಯೆಗಳಿಗೆ ಪಟ್ಟಣ ಪಂಚಾಯಿತಿ ಸದಾ ಸ್ಪಂದಿಸುತ್ತದೆ ಎಂದರು.
ಬಹುಮಾನ ವಿತರಣೆ: ಕಾರ್ವಿುಕರಿಗೆ ಸೋಮವಾರ ಒಂದು ದಿನ ವಿಶ್ರಾಂತಿ ನೀಡಿ, ಕ್ರಿಕೆಟ್, ಕಬಡ್ಡಿ, ಖೋಖೋ, ಓಟ ಆಯೋಜಿಸಿ ವಿಜೇತರಿಗೆ ಬಹುಮಾನ ವಿತರಿಸಲಾಯಿತು.
ಪೌರ ಕಾರ್ವಿುರಾದ ಗುತ್ತ್ಯ್ಪ ಹರಿಜನ, ಅಶೋಕ ಬೆಳಕೇರಿ, ರೇಣುಕಮ್ಮ ಹರಿಜನ, ಪರಶುರಾಮ ಮಾದರ, ಕುಮಾರ ಹರಿಜನ, ಚಂದ್ರಪ್ಪ ಎಲೆಹೊಳೆ, ನಾಗರಾಜ ಮಾದರ, ನರಸಿಂಹ ಹರಿಜನ, ರವಿ ಹರಿಜನ, ಮಂಜುನಾಥ ಎನ್.ಎಂ. ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net