ಶಾಲಾ ಕೊಠಡಿಗಳು ಸೋರದಂತೆ ಕ್ರಮ ವಹಿಸಿ

27 vikram 3
Published on

ವಿಜಯವಾಣಿ ಸುದ್ದಿಜಾಲ ಧಾರವಾಡ
ಜಿಲ್ಲೆಯಲ್ಲಿ ಮಳೆ ಆರಂಭವಾಗಿರುವ ಹಿನ್ನಲೆಯಲ್ಲಿ ಅಂಗನವಾಡಿ, ಶಾಲೆ, ಕಾಲೇಜುಗಳ ಕೋಣೆಗಳು ಸೋರುತ್ತಿರುವ ಬಗ್ಗೆ ಅಧಿಕಾರಿಗಳು ಪರಿಶೀಲಿಸಿ ವಿದ್ಯಾಥಿರ್ಗಳಿಗೆ ತೊಂದರೆ ಆಗದಂತೆ ತುರ್ತು ನಿಗಾ ವಹಿಸುವಂತೆ ಜಿಲ್ಲಾಧಿಕಾರಿ ದಿವ್ಯ ಪ್ರಭು ಸೂಚಿಸಿದ್ದಾರೆ.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸೋಮವಾರ ಏರ್ಪಡಿಸಿದ್ದ ಬರ ಮುಂಗಾರು ಪೂರ್ವ ಸಿದ್ಧತೆ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಶಿಥಿಲಾವಸ್ಥೆಯಲ್ಲಿರುವ ಹಾಗೂ ಸೋರುತ್ತಿರುವ ಅಂಗನವಾಡಿ, ಶಾಲೆ, ಕಾಲೇಜುಗಳ ಕಟ್ಟಡಗಳನ್ನು ಸಂಬಂಧಪಟ್ಟ ಅಧಿಕಾರಿಗಳು ಪರಿಶೀಲಿಸಿ ಜೂ. 30ರೊಳಗೆ ವರದಿ ಸಲ್ಲಿಸಬೇಕು. ತುರ್ತು ದುರಸ್ತಿ ಕಾರ್ಯ ಅಗತ್ಯವಿದ್ದಲ್ಲಿ ಪ್ರಸ್ತಾವ ಸಿದ್ಧಪಡಿಸಿ ಕಾರ್ಯ ಪ್ರವರ್ತತ್ತರಾಗುವಂತೆ ಸೂಚಿಸಿದರು.
ಶಿಥಿಲಾವಸ್ಥೆ ಅಥವಾ ಸೋರುತ್ತಿರುವ ಕಟ್ಟಡಗಳಲ್ಲಿ ವಿದ್ಯಾಥಿರ್ಗಳು ಕೂರುವುದು ಗಮನಕ್ಕೆ ಬಂದಲ್ಲಿ ಅಂತಹ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು. ರಾಷ್ಟ್ರೀಯ ವಿಕೋಪ ನಿರ್ವಹಣಾ ಪ್ರಾಧಿಕಾರದಡಿ ಸಣ್ಣ ಪುಟ್ಟ ತುರ್ತು ದುರಸ್ತಿಗಳಿಗೆ ಅನುದಾನ ಲಭ್ಯವಿದ್ದು, ಆಯಾ ೇತ್ರ ಶಿಣಾಧಿಕಾರಿಗಳು, ಮಹಿಳಾ ಮಕ್ಕಳ ಕಲ್ಯಾಣ ಅಧಿಕಾರಿಗಳು ಹಾಗೂ ಪಂಚಾಯತ ರಾಜ್​ ಇಂಜಿನಿಯರಿಂಗ್​ ಅಧಿಕಾರಿಗಳು ಜಂಟಿಯಾಗಿ ಜೂ. 30ರೊಳಗೆ ಪ್ರಸ್ತಾವ ನೀಡಬೇಕು ಎಂದರು.
ಮಳೆಗಾಲದಲ್ಲಿ ಗ್ರಾಮೀಣ ಪ್ರದೇಶದಲ್ಲಿ ರ್ದುಬಲ ಸೇತುವೆಗಳು, ರ್ದುಬಲ ಕೆರೆ ಬಂಡ್​ಗಳನ್ನು ಗುರುತಿಸಿ ಅಪಾಯವಿದ್ದಲ್ಲಿ ತಣ ವರದಿ ನೀಡಲು ಲೋಕೋಪಯೋಗಿ, ಸಣ್ಣ ನೀರಾವರಿ, ಪಂಚಾಯತ್​ ರಾಜ್​ ಇಲಾಖಾ ಅಧಿಕಾರಿಗಳಿಗೆ ತಿಳಿಸಿದರು. ಮಳೆಗಾಲದಲ್ಲಿ ಪ್ರವಾಹದಿಂದ ಜನರಿಗೆ ಸಂಪರ್ಕದ ತೊಂದರೆಯಾಗದಂತೆ ಕ್ರಮ ವಹಿಸಬೇಕು. ಅಳ್ನಾವರ ಹುಲಿಕೆರೆ ದುರಸ್ತಿಯಾಗಿದ್ದು, ನಿಗದಿ ಕೆರೆ ದುರಸ್ತಿಗೆ ಟೆಂಡರ್​ ಕರೆಯಲಾಗಿದೆ ಎಂದು ಸಣ್ಣ ನೀರಾವರಿ ಇಲಾಖೆ ಅಧಿಕಾರಿ ಸಭೆಗೆ ತಿಳಿಸಿದರು.
ತಹಸೀಲ್ದಾರರು ಹಾಗೂ ತಾಪಂ ಇಒಗಳು ತಮ್ಮ ವ್ಯಾಪ್ತಿಯಲ್ಲಿನ ಅಪಾಯಕಾರಿ ಹಳ್ಳ, ಕೊಳ್ಳ, ಕೆರೆಗಳ ಬಗ್ಗೆ ಗಮನಹರಿಸಬೇಕು. ಮಕ್ಕಳು ಕೆರೆಯಲ್ಲಿ ಈಜಲು ಹೋಗದಂತೆ ಆಯಾ ಸ್ಥಳಗಳಲ್ಲಿ ಅಪಾಯದ ಮುನ್ನೆಚ್ಚರಿಕೆ ಲಕ ಅಳವಡಿಸಿ ಡಂಗೂರ ಹೊಡಿಸಬೇಕು. ಮಳೆಗಾಲದಲ್ಲಿ ಯಾವುದೇ ಜೀವಹಾನಿ ಆಗದಂತೆ ಮುನ್ನೆಚ್ಚರಿಕೆ ಕ್ರಮ ವಹಿಸಬೇಕು ಎಂದರು.
ಗ್ರಾಮೀಣ ಹಾಗೂ ನಗರ ಪ್ರದೇಶಗಳಲ್ಲಿ ಮಳೆಗಾಲದಲ್ಲಿ ಕಲುಷಿತ ನೀರು ಕುಡಿಯುವ ನೀರಿಗೆ ಸೇರಿ ಸಾಂಕ್ರಾಮಿಕ ರೋಗ ಹರಡದಂತೆ ಸಂಬಂಧಿಸಿದ ಅಧಿಕಾರಿಗಳು ಪ್ರತಿದಿನ ಜಲಮೂಲಗಳ ಗುಣಮಟ್ಟ ಪರೀಸಬೇಕು. ನೀರಿನ ಟ್ಯಾಂಕ್​ಗಳನ್ನು ಕಡ್ಡಾಯವಾಗಿ ಸ್ವಚ್ಛಗೊಳಿಸತಕ್ಕದ್ದು. ನೀರಿನ ಕೆಮಿಕಲ್​ ಹಾಗೂ ಜೈವಿಕ ಪರೀೆ ನಡೆಸಬೇಕು. ಆರೋಗ್ಯ ಇನ್ಸಪೆಕ್ಟರ್​ಗಳು, ವಾಟರ್​ಮ್ಯಾನ್​ಗಳು ಕಡ್ಡಾಯವಾಗಿ ಈ ಬಗ್ಗೆ ಎಚ್ಚರ ವಹಿಸಬೇಕು ಎಂದರು.
ಸಭೆಯಲ್ಲಿ ಉಪವಿಭಾಗಾಧಿಕಾರಿ ಶಾಲಂ ಹುಸೇನ, ಜಿಲ್ಲಾ ಮಟ್ಟದ ಅಧಿಕಾರಿಗಳು, ತಹಸೀಲ್ದಾರರು, ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net