ಶಾಲೆಯಲ್ಲಿ ನಾಯಕತ್ವ ಹೊಣೆ ನಿಭಾಯಿಸಿ

20 DML
ಡಂಬಳ ತೋಂಟದಾರ್ಯ ವಿದ್ಯಾಲಯ ಬಾಲಕರ ಪ್ರೌಢಶಾಲೆಯಲ್ಲಿ ಹಮ್ಮಿಕೊಂಡಿದ್ದ ಶಾಲಾ ಸಂಸತ್ ಉದ್ಘಾಟನೆ ಸಮಾರಂಭದಲ್ಲಿ ಯುವ ಮುಖಂಡ ಗೋಣಿಬಸಪ್ಪ ಕೊರ್ಲಹಳ್ಳಿ, ಮುಖ್ಯೋಪಾಧ್ಯಾಯ ಕೆ.ಬಿ.ನಿಂಬನಗೌಡರ ಇತರರಿದ್ದರು.
Published on

ಡಂಬಳ: ನಾಯಕನು ಶಾಲೆಯ ನಾಲ್ಕು ಗೊಡೆಗಳ ಮಧ್ಯೆ ಜನಿಸಿ ಸಮಾಜವನ್ನು ಬೆಳಗುತ್ತಾನೆ. ಶಾಲೆಯಲ್ಲಿ ನಾಯಕತ್ವ ಜವಾಬ್ದಾರಿ ನಿಭಾಯಿಸುವ ವಿದ್ಯಾರ್ಥಿಯ ಗುರಿ ಭವಿಷ್ಯದಲ್ಲಿ ಸ್ಪಷ್ಟವಾಗಿರುತ್ತದೆ ಎಂದು ಯುವ ಮುಖಂಡ ಗೋಣಿಬಸಪ್ಪ ಕೊರ್ಲಹಳ್ಳಿ ಹೇಳಿದರು. ಗ್ರಾಮದ ತೋಂಟದಾರ್ಯ ಬಾಲಕರ ಪ್ರೌಢಶಾಲೆಯಲ್ಲಿ ಬುಧವಾರ ಹಮ್ಮಿಕೊಂಡಿದ್ದ ಶಾಲಾ ಸಂಸತ್ ಉದ್ಘಾಟನೆ ಹಾಗೂ ಪಾಲಕರ ಸಭೆಯಲ್ಲಿ ಅವರು ಮಾತನಾಡಿದರು. ಮುಖ್ಯೋಪಾಧ್ಯಾಯ ಕೆ.ಬಿ. ನಿಂಬನಗೌಡರ ಮಾತನಾಡಿದರು. ಶಿಕ್ಷಕ ಎಸ್.ಎನ್. ಕಲ್ಲಿಗನೂರ, ಎಸ್.ಎಂ. ಹಿರೇಮಠ, ಎಸ್.ಎಂ. ರಾಮಣ್ಣನವರ, ರವಿ ಶಿಂಟಾಲಕೇರಿ, ಮಲ್ಲಣ್ಣ ಸಿದ್ದಣ್ಣನವರ, ಜಗದೀಶ.ಕೆ, ಡಿ.ಎಂ. ರಾಠೋಡ, ವಿ.ಎಸ್. ಹಿರೇಮಠ, ಎನ್.ಎಚ್. ಹಿರೇಮಠ, ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net