ವಿಜ್ಞಾನ ವಿಷಯದಲ್ಲಿ ಆಸಕ್ತಿ ವಹಿಸಿ

28 vikram 7
Published on

ವಿಜಯವಾಣಿ ಸುದ್ದಿಜಾಲ ಧಾರವಾಡ

ಮಕ್ಕಳು ಶಾಲಾ ಹಂತದಲ್ಲೇ ವಿಜ್ಞಾನ ವಿಷಯ ಕಲಿಕೆಯಲ್ಲಿ ಆಸಕ್ತಿ ವಹಿಸಬೇಕು. ಹೊಸ ಹೊಸ ಆವಿಷ್ಕಾರಗಳ ಮೂಲಕ ಉತ್ತಮ ವಿಜ್ಞಾನಿಗಳಾಗುವತ್ತ ಗಮನಹರಿಸಬೇಕು ಎಂದು ಕೆಎಲ್​ಇ ಟೆಕ್ನೊ ಯುನಿವರ್ಸಿಟಿ ಡೀನ್​ ಪ್ರೊ. ನರಸಿಂಹ ಆಯಚಿತ್​ ಹೇಳಿದರು.

ನಗರದ ಸತ್ತೂರಿನ ರಾಷ್ಟ್ರೊತ್ಥಾನ ವಿದ್ಯಾ ಕೇಂದ್ರದಲ್ಲಿ ಏರ್ಪಡಿಸಿದ್ದ ರಾಷ್ಟ್ರೀಯ ವಿಜ್ಞಾನ ದಿನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಮಕ್ಕಳಿಗೆ ವಿಜ್ಞಾನ ವೃದ್ಧಿ, ಹೊಸ ಆವಿಷ್ಕಾರಗಳು ಹಾಗೂ ವಿಜ್ಞಾನಿಗಳ ಬಗ್ಗೆ ಅರಿವು ಮೂಡಿಸಿದರು.

ಮಕ್ಕಳು ವಿಜ್ಞಾನದಿಂದ ಆದ ಬದಲಾವಣೆಗಳನ್ನು, ವಿಜ್ಞಾನದ ಪ್ರಾಮುಖ್ಯತೆಗಳನನ್ನು ನಾಟಕ, ನೃತ್ಯ, ಹಾಡು ಮತ್ತು ಸಂಭಾಷಣೆಗಳ ಮೂಲಕ ಪ್ರದರ್ಶಿಸಿದರು. ಮಕ್ಕಳ ವಿಜ್ಞಾನ ವಸ್ತು ಪ್ರದರ್ಶನದ ಮೂಲಕ ಉತ್ತಮ ವೈಜ್ಞಾನಿಕ ಮಾದರಿಗಳನ್ನು ನಿರ್ಮಿಸಿದ್ದರು.

ಸತ್ತೂರಿನ ಕರೆಸ್ಪಾಂಡೆಂಟ್​ ಗುರುರಾಜ್​ ಅಗಡಿ, ಪ್ರಧಾನ ಆಚಾರ್ಯ ಡಾ. ಅನಿತಾ ರೈ, ಶಿಕ್ಷಕರು, ಮಕ್ಕಳು, ಪಾಲಕರು, ಇತರರು ಇದ್ದರು. ಕೃತಿಕ ಗೌಡ ನಿರೂಪಿಸಿದರು. ಮಂಥನ್​ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net