ಸಂಶೋಧನೆ, ನಾವೀನ್ಯತೆಯಲ್ಲಿ ಆಸಕ್ತಿ ವಹಿಸಿ

1 vikram 9
Published on

ವಿಜಯವಾಣಿ ಸುದ್ದಿಜಾಲ ಧಾರವಾಡ

ಭಾರತೀಯ ಫಾರ್ಮಾ ಕಂಪನಿಗಳು ಜಾಗತಿಕ ಮಾರುಕಟ್ಟೆಯಲ್ಲಿ ಮುಂಚೂಣಿಯಲ್ಲಿವೆ. ಭಾರತದಲ್ಲಿ ಆರೋಗ್ಯ ವೃತ್ತಿಪರರು ಮತ್ತು ಸಂಶೋಧಕರಿಗೆ ಸಾಕಷ್ಟು ಅವಕಾಶಗಳಿವೆ. ಯುವ ವಿದ್ಯಾರ್ಥಿಗಳು ಸಂಶೋಧನೆ ಮತ್ತು ನಾವೀನ್ಯತೆಗಳಲ್ಲಿ ಆಸಕ್ತಿ ವಹಿಸಬೇಕು ಎಂದು ಹೈದ್ರಾಬಾದ್​ನ ಡಾ. ಶ್ರೀನಿವಾಸ ಓರಗಂಟಿ ಹೇಳಿದರು.

ನಗರದ ಎಸ್​ಡಿಎಂ ವಿಶ್ವ ವಿದ್ಯಾಲಯ ವತಿಯಿಂದ ಏರ್ಪಡಿಸಿದ್ದ ರಾಷ್ಟ್ರೀಯ ವಿಜ್ಞಾನ ದಿನ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

ಎಸ್​ಡಿಎಂ ವಿಶ್ವವಿದ್ಯಾಲಯ ಮತ್ತು ಎಸ್​ಡಿಎಂ ಇಂಜಿನಿಯರಿಂಗ್​ ಕಾಲೇಜಿನ ಅಧ್ಯಾಪಕರು, ಸಿಬ್ಬಂದಿ ಮತ್ತು ವಿದ್ಯಾರ್ಥಿಗಳಿಗೆ ಏರ್ಪಡಿಸಿದ್ದ ಪೋಸ್ಟರ್​ ಮತ್ತು ಮಾಡಲ್​ ಪ್ರಸ್ತುತಿ ಸ್ಪರ್ಧೆಗೆ ಎಸ್​ಡಿಎಂ ವಿವಿ ಉಪ ಕುಲಪತಿ ಡಾ. ನಿರಂಜನಕುಮಾರ ಚಾಲನೆ ನೀಡಿದರು. 62 ತಂಡದಿಂದ ವೈಜ್ಞಾನಿಕ ಪೋಸ್ಟರ್​ಗಳನ್ನು ಮತ್ತು 32 ಮಾದರಿಗಳನ್ನು ಪ್ರದಶಿರ್ಸಲಾಯಿತು.

ಪೋಸ್ಟರ್​ ವಿಭಾಗದಲ್ಲಿ ಶ್ರುಪ್ತಾ ಪಡಿವಾಳ ಮತ್ತು ತಂಡ ಪ್ರಥಮ, ಮಾಡಲ್​ ವಿಭಾಗದಲ್ಲಿ ಡಾ. ಮಂಜುನಾಥ ಮೇಟಿ ಮತ್ತು ತಂಡ ಪ್ರಥಮ, ಬೋಧಕೇತರ ವಿಭಾಗದಲ್ಲಿ ಪ್ರವಿಣ ಹೋಳೆಮ್ಮನವರ ಮತ್ತು ತಂಡಕ್ಕೆ ಪ್ರಥಮ ಬಹುಮಾನ ಪಡೆದಿವೆ. ವಿಜೇತರಿಗೆ ಡಾ. ಶ್ರೀನಿವಾದ ಓರಗಂಟಿ, ಆಡಳಿತ ನಿರ್ದೇಶಕ ಸಾಕೇತ್​ ಶೆಟ್ಟಿ ಮತ್ತು ಡಾ. ನೈದಿಲ ಶೆಟ್ಟಿ ಪ್ರಶಸ್ತಿ ವಿತರಿಸಿದರು.

ಎಸ್​ಡಿಎಂ ವಿವಿ ಕಾರ್ಯನಿರ್ವಾಹಕ ನಿರ್ದೇಶಕಿ ಪದ್ಮಲತಾ ನಿರಂಜನ್​, ಸಹ ಉಪಕುಲಪತಿ ವಿ. ಜೀವಂಧರ ಕುಮಾರ, ಕುಲಸಚಿವ ಡಾ. ಚಿದೇಂದ್ರ ಶೆಟ್ಟರ, ಉಪ ಕುಲಸಚಿವ ಡಾ. ಅಜಂತಾ ಜಿ.ಎಸ್​., ಹಣಕಾಸು ಅಧಿಕಾರಿ ವಿ. ಜಿ. ಪ್ರಭು, ಸಂಶೋಧನಾ ನಿರ್ದೇಶಕ ಡಾ. ಕೆ. ಸತ್ಯಮೂರ್ತಿ, ಅಂಗ ಸಂಸ್ಥೆಗಳ ಮುಖ್ಯಸ್ಥರು, ಇಂಜಿನಿಯರಿಂಗ್​ ಕಾಲೇಜಿನ ಪ್ರಾಂಶುಪಾಲ ಡಾ. ರಮೇಶ ಚಕ್ರಸಾಲಿ, ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net