ಪ್ರಯಾಣಿಕರ ಆರೋಗ್ಯದತ್ತ ಕಾಳಜಿ ವಹಿಸಲಿ

RON BUS STAND
Published on

ರೋಣ: ಪ್ರಯಾಣಿಕರ ಆರೋಗ್ಯ ರಕ್ಷಣೆಗಾಗಿ ಬಸ್ ನಿಲ್ದಾಣ ಆವರಣದ ಸ್ವಚ್ಛತೆಗೆ ಪ್ರಥಮಾದ್ಯತೆ ವಹಿಸಬೇಕು ಎಂದು ರೋಣ ತಾಲೂಕು ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಅಧ್ಯಕ್ಷ ಮಿಥುನ್ ಪಾಟೀಲ ಹೇಳಿದರು.

ಪಟ್ಟಣದ ಬಸ್ ನಿಲ್ದಾಣಕ್ಕೆ ಗುರುವಾರ ಭೇಟಿ ನೀಡಿ ಅವರು ಮಾತನಾಡಿದರು. ಬಸ್ ನಿಲ್ದಾಣದ ಆವರಣದಲ್ಲಿ ಕುಡಿಯುವ ನೀರಿನ ವ್ಯವಸ್ಥೆ ಮಾಡಿ, ಶೌಚಗೃಹ ಸ್ವಚ್ಛತೆಗೆ ಆದ್ಯತೆ ನೀಡಿ, ಪ್ರಯಾಣಿಕರು ಕುಳಿತುಕೊಳ್ಳಲು ಆಸನದ ವ್ಯವಸ್ಥೆ ಮಾಡಿ ಎಂದು ನಿಲ್ದಾಣಾಧಿಕಾರಿಗೆ ಸೂಚಿಸಿದರು. ಇನ್ನು ಬಸ್​ಗಳು ಪ್ಲಾಟ್ ಫಾರಂ ಬಿಟ್ಟು ಬೇರೆಡೆ ನಿಲ್ಲದಂತೆ ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಿದರು.

ಬಸ್ ಚಾಲಕ ಹಾಗೂ ನಿರ್ವಾಹಕರು ಪ್ರಯಾಣಿಕರೊಂದಿಗೆ ಸೌಜನ್ಯದಿಂದ ವರ್ತಿಸಬೇಕು. ನಿಮ್ಮ ವರ್ತನೆ ಕುರಿತು ದೂರು ಬಂದರೆ ಕ್ರಮ ಕೈಗೊಳ್ಳುತ್ತೇನೆ ಎಂದು ಸೂಚನೆ ನೀಡಿದರು.

ಮಳೆ ಸುರಿಯುತ್ತಿರುವಾಗ ಮಾರ್ಗ ಮಧ್ಯೆ ಪ್ರಯಾಣಿಕರು ಕೈ ಮಾಡಿದರೆ ಬಸ್ ನಿಲ್ಲಿಸಿ ಅವರನ್ನು ಕರೆದುಕೊಂಡು ಬನ್ನಿ. ವಿದ್ಯಾರ್ಥಿಗಳು ಶಾಲೆ- ಕಾಲೇಜ್​ಗೆ ತೆರಳುವ ಸಮಯದಲ್ಲಿ 2 ನಿಮಿಷ ಬಸ್ ನಿಲ್ಲಿಸಿ ಅವರನ್ನೂ ಹತ್ತಿಸಿಕೊಂಡು ಹೋಗಿ ಅವರ ವಿದ್ಯಾಭ್ಯಾಸಕ್ಕೆ ಅನುಕೂಲ ಕಲ್ಪಿಸಿಕೊಡಬೇಕು ಎಂದು ಸೂಚನೆ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net