

ರಾಯಚೂರು: ಒತ್ತಡದ ಪ್ರಸ್ತುತ ದಿನಮಾನದಲ್ಲಿ ಪ್ರತಿಯೊಬ್ಬರು ತಮ್ಮ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕಾದ ಅಗತ್ಯವಿದ್ದು, ಜನರು ಉತ್ತಮ ಆರೋಗ್ಯ ಕಾಪಾಡಿಕೊಂಡಾಗ ಮಾತ್ರ ಸ್ವಾಸ್ಥ ಸಮಾಜ ನಿರ್ಮಾಣ ಸಾಧ್ಯ ಎಂದು ಡಿಎಚ್‌ಒ ಡಾ.ಸುರೇಂದ್ರಬಾಬು ಹೇಳಿದರು.
ಸ್ಥಳೀಯ ಜಿಲ್ಲಾ ಕ್ರೀಡಾಂಗಣದ ಆವರಣದಲ್ಲಿ ಜಿಲ್ಲಾಡಳಿತದಿಂದ ಯುವಜನೋತ್ಸವ ಅಂಗವಾಗಿ ಗುರುವಾರ ಹಮ್ಮಿಕೊಂಡಿದ್ದ ಮ್ಯಾರಾಥಾನ್ ಓಟಕ್ಕೆ ಚಾಲನೆ ನೀಡಿ ಮಾತನಾಡಿ, ನಿಯಮಿತ ವ್ಯಾಯಾಮ, ಗುಣಮಟ್ಟದ ಆಹಾರ ಸೇವನೆ ಮಾಡುವುದರಿಂದ ದೈಹಿಕ ಹಾಗೂ ಮಾನಸಿಕವಾಗಿ ಸದೃಢರಾಗಬೇಕು ಎಂದರು.
ಜಿಲ್ಲಾ ಕ್ರೀಡಾಂಗಣದಿಂದ ಮಂತ್ರಾಲಯ ರಸ್ತೆಯಲ್ಲಿರುವ ಪ್ರವಾಸಿ ಮಂದಿರದವರೆಗೆ ಮ್ಯಾರಾಥಾನ್ ಓಟ ಜರುಗಿತು. ಸ್ಪರ್ಧೆಯಲ್ಲಿ ವಿವಿಧ ಕಾಲೇಜುಗಳ 120ಕ್ಕೂ ಹೆಚ್ಚು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ಪುರುಷರ ವಿಭಾಗದಲ್ಲಿ ಇನ್‌ೆಂಟ್ ಜೀಸಸ್ ಕಾಲೇಜಿನ ಗೋವಿಂದ ಪ್ರಥಮ, ಎಸ್‌ಎಸ್‌ಎಂ ಕಾಲೇಜಿನ ಹುಲಿಗೆಪ್ಪ ದ್ವಿತೀಯ ಹಾಗೂ ಮೇಘನಾಥ ತೃತೀಯ ಸ್ಥಾನ ಪಡೆದರು.
ಮಹಿಳೆಯರ ವಿಭಾಗದಲ್ಲಿ ಎಚ್‌ಸಿಎಂಎಸ್‌ಕೆ ಬಿಎಡ್ ಕಾಲೇಜಿನ ಪುಷ್ಪಲತಾ ಪ್ರಥಮ, ಎಸ್‌ಕೆಇ ಪ್ಯಾರಾ ಮೆಡಿಕಲ್ ಕಾಲೇಜಿನ ಐಶ್ವರ್ಯ್ಯ ದ್ವಿತೀಯ, ಎಸ್‌ಆರ್‌ಕೆ ಬಿಎಡ್ ಕಾಲೇಜಿನ ಚೆನ್ನಬಸಮ್ಮ ತೃತೀಯ ಸ್ಥಾನ ಪಡೆದುಕೊಂಡರು.
ಈ ಸಂದರ್ಭದಲ್ಲಿ ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ವೀರೇಶ ನಾಯಕ, ತಾಲೂಕು ವೈದ್ಯಾಕಾರಿ ಡಾ.ಮಹ್ಮದ್ ಶಾಕೀರ್, ರೆಡ್‌ಕ್ರಾಸ್ ಜಿಲ್ಲಾ ಸಂಚಾಲಕ ದಂಡಪ್ಪ ಬಿರಾದರ ಉಪಸ್ಥಿತರಿದ್ದರು.