ಎಲ್ಲರಿಗೂ ಆರೋಗ್ಯ ಕಾಳಜಿ ಇರಲಿ

15_09_2025_BNG_RURAL_PAGE_3
ದೊಡ್ಡಬಳ್ಳಾಪುರದ ಕಂಚಿಗನಾಳ ಗ್ರಾಮದಲ್ಲಿ ರೋಟರಿ ಕ್ಲಬ್​ ಆಫ್​ ಬೆಂಗಳೂರು ನಾರ್ಥ್​ವೆಸ್ಟ್​ ಟ್ರಸ್ಟ್​ ಸಂಸ್ಥೆ ಹಾಗೂ ಮಣಿಪಾಲ್​ ಆಸ್ಪತ್ರೆಯಿಂದ ಆಯೋಜಿಸಿದ್ದ ಆರೋಗ್ಯ ತಪಾಸಣಾ ಶಿಬಿರದಲ್ಲಿ ಜನರು ಆರೋಗ್ಯ ತಪಾಸಣೆ ಮಾಡಿಸಿಕೊಂಡರು.
Published on

ದೊಡ್ಡಬಳ್ಳಾಪುರ : ಇತ್ತೀಚೆಗೆ ಆಧುನಿಕ ಜೀವನ ಶೈಲಿ, ಆಹಾರ ಪದ್ಧತಿಯಿಂದ ಸಾಕಷ್ಟು ರೋಗ ಕಾಣಿಸಿಕೊಳ್ಳುತ್ತಿದೆ. ಹಾಗಾಗಿ ಪ್ರತಿಯೊಬ್ಬರು ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕು ಎಂದು ರೋಟರಿ ಕ್ಲಬ್​ನ ಸಮುದಾಯ ಸೇವಾ ನಿರ್ದೇಶಕಿ ರಮ್ಯಾ ಕುಂಬ್ಳೆ ತಿಳಿಸಿದರು.

ತಾಲೂಕಿನ ಕಂಚಿಗನಾಳ ಗ್ರಾಮದಲ್ಲಿ ಭಾನುವಾರ ರೋಟರಿ ಕ್ಲಬ್​ ಆಫ್​ ಬೆಂಗಳೂರು ನಾರ್ಥ್​ವೆಸ್ಟ್​ ಟ್ರಸ್ಟ್​ ಸಂಸ್ಥೆ ಹಾಗೂ ಮಣಿಪಾಲ್​ ಆಸ್ಪತ್ರೆಯಿಂದ ಹಮ್ಮಿಕೊಂಡಿದ್ದ ಆರೋಗ್ಯ ತಪಾಸಣಾ ಶಿಬಿರದಲ್ಲಿ ಮಾತನಾಡಿದರು.ನಗರ ಪ್ರದೇಶಕ್ಕೆ ಹೋಲಿಸಿದರೆ ಗ್ರಾಮೀಣ ಪ್ರದೇಶಗಳಲ್ಲಿ ಜನರು ಆಸ್ಪತ್ರೆಗೆ ಹೋಗಿ ತಪಾಸಣೆ ಅಥವಾ ಚಿಕಿತ್ಸೆ ಪಡೆಯಲು ಸಾಕಷ್ಟು ಶ್ರಮವಹಿಸಬೇಕಾಗಿದೆ. ಹಾಗಾಗಿ ನಮ್ಮ ಸಂಸ್ಥೆಯಿಂದ ಗ್ರಾಮಗಳಲ್ಲಿ ಉಚಿತವಾಗಿ ಅರೋಗ್ಯ ತಪಾಸಣಾ ಶಿಬಿರ ಆಯೋಜಿಸಲಾಗಿದೆ. ಹಲವು ವೈದ್ಯಕಿಯ ಸೌಲಭ್ಯ ಜನರ ಮನೆಬಾಗಿಲಿಗೆ ತಲುಪಿಸುತ್ತಿದ್ದೇವೆ. ಶಿಬಿರದಲ್ಲಿ ಗ್ರಾಮಸ್ಥರು ಆಗಮಿಸಿ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳುವ ಮೂಲಕ ಸಕರಾತ್ಮಕ ಸ್ಪಂದನೆ ನೀಡಿರುವುದು ಸಂತಸ ತಂದಿದೆ ಎಂದರು.

ಯಾವುದೇ ರೋಗವಾದರೂ ಚಿಕಿತ್ಸೆಗಿಂತ ಮುನ್ನೆಚ್ಚರಿಕೆ ಅವಶ್ಯ. ಆರೋಗ್ಯಕರ ಆಹಾರ ಸೇವಿಸಬೇಕು. ನಿತ್ಯ ವ್ಯಾಯಾಮ ಮಾಡುವುದರಿಂದ ದೇಹದ ಆರೋಗ್ಯಕ್ಕೆ ಒತ್ತು ನೀಡಬೇಕು. ಮಕ್ಕಳು, ಹಿರಿಯರ ಆರೋಗ್ಯದ ಬಗ್ಗೆ ಹೆಚ್ಚಿನ ಗಮನ ಹರಿಸಬೇಕು. ನಮ್ಮಲ್ಲಿ ಲಭ್ಯವಿರುವ ವೈದ್ಯಕಿಯ ಸೌಲಭ್ಯಗಳನ್ನು ಶಿಬಿರದಲ್ಲಿ ಗ್ರಾಮಸ್ಥರಿಗೆ ಒದಗಿಸಲಾಗುತ್ತಿದೆ. ಹೆಚ್ಚಿನ ಸೌಲಭ್ಯ ಹಾಗೂ ಅಗತ್ಯವಿದ್ದಲ್ಲಿ ಅದರ ಬಗ್ಗೆ ಸಮೀಪದ ಆಸ್ಪತ್ರೆಗಳಿಗೆ ಭೇಟಿ ಮಾಡಲು ಸಲಹೆ ನೀಡಲಾಗಿದೆ ಎಂದರು.ಶಿಬಿರದಲ್ಲಿ ಗ್ರಾಮಸ್ಥರು ರಕ್ತದೊತ್ತಡ, ಮಧುಮೇಹ, ಕಣ್ಣಿನ ತಪಾಸಣೆ, ವೈದ್ಯರ ಸಲಹೆ ಮೇರೆಗೆ ಇಸಿಜಿ, ವೈದ್ಯರ ಸಮಾಲೋಚನೆ ಸೇರಿ ವಿವಿಧ ವೈದ್ಯಕಿಯ ಸೌಲಭ್ಯ ಪಡೆದುಕೊಂಡರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net