ಮಕ್ಕಳ ದಂತ ರಕ್ಷಣೆ ಬಗ್ಗೆ ಕಾಳಜಿ ವಹಿಸಿ

web
ರಾಯಚೂರಿನ ಎಎಂಇ ದಂತ ಕಾಲೇಜಿನಲ್ಲಿ ಗುರುವಾರ ಹಮ್ಮಿಕೊಂಡಿದ್ದ ಮಕ್ಕಳ ದಿನಾಚರಣೆ ಸಪ್ತಾಹ ಸಮಾರೋಪ ಸಮಾರಂಭದಲ್ಲಿ ಮಾಣಿಕ ಪ್ರಭು ಅಂಧ ಮಕ್ಕಳ ಶಾಲೆ ವಿದ್ಯಾರ್ಥಿಗಳಿಗೆ ಬೆಡ್‌ಶಿಟ್ ವಿತರಿಸಲಾಯಿತು. ಕಾಲೇಜು ಪ್ರಾಚಾರ್ಯ ಡಾ.ಶಿವಾನಂದ ಆಸ್ಪಲ್ಲಿ, ಉಪ ಪ್ರಾಚಾರ್ಯ ಡಾ.ರಾಘವೇಂದ್ರ ಹವಳೆ, ಪ್ರಾಧ್ಯಾಪಕರಾದ ಡಾ.ಪ್ರಹ್ಲಾದ ಹುಣಸಗಿ, ಡಾ.ಎಸ್.ಪಿ.ಶೃತಿ, ಡಾ.ಪ್ರವೀಣಕುಮಾರ, ಡಾ.ಶೈನಿರಾಜ್, ಡಾ.ನಾಫಿಯಾ ಇದ್ದರು.
Published on

ರಾಯಚೂರು: ಮಕ್ಕಳು ದಂತ ರಕ್ಷಣೆ ಬಗ್ಗೆ ನಿರ್ಲಕ್ಷ ವಹಿಸುವುದರಿಂದ ಅನೇಕ ಸಮಸ್ಯೆಗಳು ಎದುರಾಗುತ್ತಿದ್ದು, ಪಾಲಕರು ಮಕ್ಕಳಿಗೆ ದಂತ ರಕ್ಷಣೆ ಬಗ್ಗೆ ತಿಳುವಳಿಕೆ ನೀಡುವುದರ ಜತೆಗೆ ಅವರ ದಂತ ರಕ್ಷಣೆಗೆ ಅಗತ್ಯ ಕ್ರಮಕೈಗೊಳ್ಳಬೇಕು ಎಂದು ಎಎಂಇ ದಂತ ಕಾಲೇಜಿನ ಮಕ್ಕಳ ದಂತ ವಿಭಾಗದ ಮುಖ್ಯಸ್ಥ ಡಾ.ರಾಘವೇಂದ್ರ ಹವಳೆ ಹೇಳಿದರು.
ಸ್ಥಳೀಯ ಎಎಂಇ ದಂತ ಕಾಲೇಜಿನಲ್ಲಿ ಮಕ್ಕಳ ದಿನಾಚರಣೆ ಸಪ್ತಾಹ ಸಮಾರೋಪ ಸಮಾರಂಭದಲ್ಲಿ ಗುರುವಾರ ಮಾತನಾಡಿ, ಮಕ್ಕಳು ದಂತಕ್ಕೆ ಹಾನಿಯಾಗುವಂತಹ ತಿನಿಸುಗಳನ್ನು ಹೆಚ್ಚಾಗಿ ತಿನ್ನುತ್ತಿದ್ದು, ನಿಯಮಿತವಾಗಿ ಬ್ರಷ್ ಮಾಡದಿರುವುದು ಇಂದು ಹೆಚ್ಚಿನ ಮಕ್ಕಳಲ್ಲಿ ದಂತ ಸಮಸ್ಯೆ ಕಂಡು ಬರುತ್ತಿದೆ. ದಂತ ಸಮಸ್ಯೆಗಳ ಬಗ್ಗೆ ನಿರ್ಲಕ್ಷ ತೋರದೆ ವೈದ್ಯರಲ್ಲಿ ತಪಾಸಣೆ ಮಾಡಿಸಿಕೊಳ್ಳಬೇಕು ಎಂದರು.
ಸಪ್ತಾಹ ಅಂಗವಾಗಿ ಕಾಲೇಜಿನಿಂದ ನಗರದ ಐದು ಕಾಲೇಜುಗಳಲ್ಲಿ ಮಕ್ಕಳಿಗೆ ಉಚಿತವಾಗಿ ದಂತ ತಪಾಸಣೆ ನಡೆಸುವುದರ ಜತೆಗೆ ಹಲವಾರು ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು. ಮಾಣಿಕಪ್ರಭು ಅಂಧ ಮಕ್ಕಳ ಶಾಲೆಗೆ ಹಾಸಿಗೆ, ಬೆಡ್‌ಶಿಟ್ ವಿತರಣೆ ಮಾಡಲಾಗಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ವಿವಿಧ ಸ್ಪರ್ಧೆಗಳಲ್ಲಿ ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ಕಾರ್ಯಕ್ರಮದಲ್ಲಿ ಕಾಲೇಜು ಪ್ರಾಚಾರ್ಯ ಡಾ.ಶಿವಾನಂದ ಆಸ್ಪಲ್ಲಿ, ಪ್ರಾಧ್ಯಾಪಕರಾದ ಡಾ.ಪ್ರಹ್ಲಾದ ಹುಣಸಗಿ, ಡಾ.ಎಸ್.ಪಿ.ಶೃತಿ, ಡಾ.ಪ್ರವೀಣಕುಮಾರ, ಡಾ.ಶೈನಿರಾಜ್, ಡಾ.ನಾಫಿಯಾ, ಮಾಣಿಕಪ್ರಭು ಅಂಧ ಮಕ್ಕಳ ಶಾಲೆ ಪ್ರಾಚಾರ್ಯ ಆರ್.ಎಂ.ಯತ್ನಾಳ, ಮೊರಾರ್ಜಿ ವಸತಿ ಶಾಲೆ ಪ್ರಾಚಾರ್ಯ ಯಲ್ಲಪ್ಪ ಕೊಂಗಟಿ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net