

ಎನ್.ಆರ್.ಪುರ: ಜೀವನದ ಸಾಧನೆಯಲ್ಲಿ ತೊಂದರೆಯಾಗದಂತೆ ವಿದ್ಯಾರ್ಥಿಗಳು ನೋಡಿಕೊಳ್ಳಬೇಕು. ಪ್ರೌಢಶಾಲೆ ವಿದ್ಯಾರ್ಥಿಗಳಿಗೆ ಆರೋಗ್ಯ ಶಿಕ್ಷಣ ಅತ್ಯಂತ ಮುಖ್ಯ ಎಂದು ಮುತ್ತಿನಕೊಪ್ಪ ಪ್ರಾಥಮಿಕ ಆರೋಗ್ಯ ಕೇಂದ್ರದ ಆಡಳಿತ ವೈದ್ಯಾಧಿಕಾರಿ ಡಾ.ಸುರೇಶ್ ಹೇಳಿದರು.
ಶುಕ್ರವಾರ ತಾಲೂಕಿನ ಮುತ್ತಿನಕೊಪ್ಪ ಸರ್ಕಾರಿ ಶಾಲೆಯಲ್ಲಿ ಆಯೋಜಿಸಿದ್ದ ಹದಿಹರೆದ ಮಕ್ಕಳಿಗೆ ಆರೋಗ್ಯ ಶಿಕ್ಷಣ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, 10 ರಿಂದ 19ವರ್ಷ ವಯಸ್ಸಿನ ಮಕ್ಕಳಿಗೆ ಮಾನಸಿಕ ದೈಹಿಕ ಬದಲಾವಣೆಗಳಾಗುತ್ತವೆ. ನಾನಾ ರೀತಿಯ ಆಕ ರ್ಣೆಗಳಿಗೆ ವ್ಯಸನಗಳಿಗೆ, ಕಾಯಿಲೆಗಳಿಗೆ ತುತ್ತಾಗುವ ಸಾಧ್ಯತೆ ಇರುತ್ತದೆ ಎಂದರು.
ಸಾರ್ವಜನಿಕ ಆಸ್ಪತ್ರೆ ಶುಶ್ರೂಶಕಿ ಅಧಿಕಾರಿ ಸೂನಮ್ಯಾಥ್ಯೂ ಮಾಹಿತಿ ನೀಡಿ, ವಿಶೇಷವಾಗಿ ಹೆಣ್ಣು ಮಕ್ಕಳಿಗೆ ಜೀವನದಲ್ಲಿ ಏನಾದರೂ ಸಾಧಿಸಬೇಕಾದರೆ ಮೊದಲು ನಮ್ಮನ್ನು ನಾವು ರಕ್ಷಿಸಿಕೊಳ್ಳುವುದನ್ನ ಕಲಿಯಬೇಕು. ಯುವಶಕ್ತಿ ಬೆಳೆದು ಸದೃಢವಾಗಿ ನಿಂತಾಗ ಭಾರತ ಅತ್ಯಂತ ಯಶಸ್ವಿ ದೇಶವಾಗಿ ಮುನ್ನಡೆಯಲು ಸಾಧ್ಯ. ಯುವಕರು ದಾರಿಯನ್ನು ತಪ್ಪದೇ ಸನ್ಮಾರ್ಗದಲ್ಲಿ ನಡೆಯಬೇಕು ಎಂದರು.
ಆರ್‌ಕೆಎಸ್‌ಕೆ ಆಪ್ತ ಸಮಾಲೋಚಕ ಸುಹಾಸ್, ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಮಹಮ್ಮದ್ ಇಲಿಯಾಸ್, ದರ್ಶನ್, ನಾಗೇಂದ್ರಪ್ಪ, ಜೇಸಿ ಸಂಸ್ಥೆ ಕಾರ್ಯದರ್ಶಿ ವಿನುತ್, ಶಿಕ್ಷಕ ಚಂದ್ರ ಪ್ರಸಾದ್, ಎಂ.ಓ.ಜಾಯ್ ಉಪಸ್ಥಿತರಿದ್ದರು.