ಮಳೆಗಾಲದಲ್ಲಿ ಮಕ್ಕಳ ಆರೋಗ್ಯದ ಎಚ್ಚರಿಕೆ ವಹಿಸಿ ;ಡಾ.ನಾಗರಾಜ ಪಾಟೀಲ ಸಲಹೆ

20RAVIG6.JPG
Published on

ಬೆಳಗಾವಿ : ಮಳೆಗಾಲದಲ್ಲಿ ಮಕ್ಕಳು ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕು. ಶಾಲೆ-ಮನೆಯಲ್ಲಿ ನೀರನ್ನು ಶುದ್ಧೀಕರಿಸಿ ಸೋಸಿದ ನೀರನ್ನೇ ಸೇವಿಸುವುದರ ಜತೆಗೆ ಸದೃಢ ಆರೋಗ್ಯ ಕಾಪಾಡಿಕೊಂಡು ವಿದ್ಯಾಭ್ಯಾಸದಲ್ಲಿ ತೊಡಗಬೇಕು ಎಂದು ಜೆಎನ್‌ಎಂಸಿ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಡಾ. ನಾಗರಾಜ ಪಾಟೀಲ ಹೇಳಿದರು.
 

ತಾಲೂಕಿನ ಕಾಕತಿ ಗ್ರಾಮದ ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲಾ ಮಕ್ಕಳಿಗೆ ಕೆ ಎಲ್. ಇ ಸಂಸ್ಥೆಯ ವೇಣುಧ್ವನಿ ಬಾನುಲಿ ಕೇಂದ್ರ ಸಹಯೋಗದಲ್ಲಿ ಬುಧವಾರ ಆಯೋಜಿಸಲಾಗಿದ್ದ ‘ಮಳೆಗಾಲದಲ್ಲಿ ಹರಡುವ ಸಾಂಕ್ರಾಮಿಕ ರೋಗಗಳನ್ನು ತಡೆಗಟ್ಟುವ ಕ್ರಮ’ ಕುರಿತಾದ ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಶಾಲೆಯಲ್ಲಿ ಆಹಾರ ಸೇವಿಸುವಾಗಲು ಸಹ ಸ್ವಚ್ಛವಾಗಿ ಕೈ ತೊಳೆಯುವ ವಿಧಾನವನ್ನು ಅನುಸರಿಸುವುದರ ಮೂಲಕ ಕೈ ತೊಳೆದು ಮಾಡಬೇಕು. ತೆರೆದಿಟ್ಟ ತಿಂಡಿಗಳನ್ನು ತಿನ್ನಬಾರದು ಎಂದರು.

 ಹವಾಮಾನದ ಏರುಪೇರಿನಿಂದ ಅನೇಕ ಸಾಂಕ್ರಾಮಿಕ ರೋಗಗಳು ಹರಡುತ್ತವೆ. ಮಳೆಗಾಲದಲ್ಲಿ ಅಲ್ಲಲ್ಲಿ ನೀರು ನಿಲ್ಲುವುದರಿಂದ ಚರಂಡಿ ನೀರು, ತ್ಯಾಜ್ಯ ವಸ್ತುಗಳ ಸಂಗ್ರಹದಿಂದ ಸೊಳ್ಳೆಗಳು ಉತ್ಪತ್ತಿಯಾಗಿ ಅವುಗಳಿಂದ ಡೆಂಗ್ಯೂ ಮಲೇರಿಯಾದಂತಹ ಸಾಂಕ್ರಾಮಿಕ ರೋಗಗಳು ಹರಡುವ ಸಾಧ್ಯತೆ ಇರುತ್ತದೆ. ಅದೇ ರೀತಿ ಮಳೆಗಾಲದಲ್ಲಿ ಬರುವ ಹೊಸ ನೀರಿನಿಂದ ವಿಶೇಷವಾಗಿ ಕುಡಿಯುವ ನೀರಿನಲ್ಲಿ ಇನ್ನಿತರ ತ್ಯಾಜ್ಯಗಳು ಸೇರಿ ಕಾಲರಾ ವಾಂತಿಭೇದಿ ಕಾಮಾಲೆಯಂತಹ ರೋಗಗಳು ಹರಡುವ ಸಾಧ್ಯತೆ ಇದ್ದು, ಶಿಕ್ಷಕರು ಹಾಗೂ ಪಾಲಕರು ಮಕ್ಕಳ ಆರೋಗ್ಯ ರಕ್ಷಣೆಗೆ ಆದ್ಯತೆ ನೀಡಬೇಕು ಎಂದು ಹೇಳಿದರು.

ಕಾಕತಿ ಗ್ರಾಮದ ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲೆಯಲ್ಲಿನ ಕಾರ್ಯಕ್ರಮದಲ್ಲಿ ಜೆಎನ್‌ಎಂಸಿ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಡಾ. ನಾಗರಾಜ ಪಾಟೀಲ ಮಾತನಾಡಿದರು. ಮಂಜುನಾಥ ಬಳ್ಳಾರಿ, ಸುಮಿತ್ರಾ ಕರವಿನಕೊಪ್ಪ, ಡಾ.ಸುನಿಲ್ ಜಲಾಲಪೂರೆ, ಶಿವಾನಂದ ತಲ್ಲೂರ, ಶಶಿಕಲಾ ಹೊಸೂರ, ಬಿ.ಎನ್.ಮಡಿವಾಳರ, ಲಲಿತಾ ಮಹಾಜನಶೆಟ್ಟಿ, ಗೀತಾ ಖಾನಟ್ಟಿ ಇದ್ದರು. 
ಕಾಕತಿ ಗ್ರಾಮದ ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲೆಯಲ್ಲಿನ ಕಾರ್ಯಕ್ರಮದಲ್ಲಿ ಜೆಎನ್‌ಎಂಸಿ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಡಾ. ನಾಗರಾಜ ಪಾಟೀಲ ಮಾತನಾಡಿದರು. ಮಂಜುನಾಥ ಬಳ್ಳಾರಿ, ಸುಮಿತ್ರಾ ಕರವಿನಕೊಪ್ಪ, ಡಾ.ಸುನಿಲ್ ಜಲಾಲಪೂರೆ, ಶಿವಾನಂದ ತಲ್ಲೂರ, ಶಶಿಕಲಾ ಹೊಸೂರ, ಬಿ.ಎನ್.ಮಡಿವಾಳರ, ಲಲಿತಾ ಮಹಾಜನಶೆಟ್ಟಿ, ಗೀತಾ ಖಾನಟ್ಟಿ ಇದ್ದರು. 

 ವೇಣು ಧ್ವನಿ ಬಾನುಲಿ ಕೇಂದ್ರದ ಕಾರ್ಯಕ್ರಮಗಳ ಸಮನ್ವಯಾಧಿಕಾರಿ ಮಂಜುನಾಥ ಬಳ್ಳಾರಿ ಮಾತನಾಡಿ, ವೇಣುಧ್ವನಿ ಕೇಂದ್ರದಿಂದ ಅನೇಕ ವಿನೂತನ ಕಾರ್ಯಕ್ರಮಗಳು ಮಕ್ಕಳಲ್ಲಿ ಅಡಗಿರುವ ಸೂಪ್ತ ಪ್ರತಿಭೆಗಳಾದ ಕಲೆ, ಕ್ರೀಡಾ ಸಾಧನೆ, ಸಾಹಿತ್ಯದ ಅಭಿರುಚಿ ಹೊರಗಿನ ಜಗತ್ತಿಗೆ ಪ್ರಸ್ತುತಪಡಿಸಲು ವೇದಿಕೆ ಒದಗಿಸುತ್ತಿದೆ ಅದರ ಪ್ರಯೋಜನ ಶಾಲಾ ಮಕ್ಕಳು ಪಡೆಯಬೇಕು ಎಂದರು.

ಸರ್ಕಾರಿ ಪ್ರೌಢಶಾಲಾ ಮುಖ್ಯಾಧ್ಯಾಪಕಿ ಸುಮಿತ್ರಾ ಕರವಿನಕೊಪ್ಪ ಅಧ್ಯಕ್ಷತೆ ವಹಿಸಿದ್ದರು. ಶಿವಾನಂದ ತಲ್ಲೂರ ಪ್ರಾಸ್ತಾವಿಕ ಮಾತನಾಡಿದರು. ವೇಣುಧ್ವನಿ ಸಮುದಾಯ ಬಾನುಲಿ ಕೇಂದ್ರದ ನಿರ್ದೇಶಕ ಡಾ. ಸುನಿಲ್ ಜಲಾಲಪೂರೆ, ಶಿಕ್ಷಕಿ ಶಶಿಕಲಾ ಹೊಸೂರ,  ಮುಖ್ಯಶಿಕ್ಷಕ ಬಿ.ಎನ್.ಮಡಿವಾಳರ, ಲಲಿತಾ ಮಹಾಜನಶೆಟ್ಟಿ, ಗೀತಾ ಖಾನಟ್ಟಿ, ಎಸ್.ಎನ್.ದಿಬ್ಬಿ, ಸಮೀಮಾ ಹುಬ್ಬಳ್ಳಿ, ಎಸ್.ಬಿ.ಕರಾಳೆ ಸೇರಿದಂತೆ ವಿದ್ಯಾಥ್ಘಿಲು ಇದ್ದರು. ಮಹೇಶ ಅಕ್ಕಿ  ಸ್ವಾಗತಿಸಿದರು. ಎಸ್.ವೈ.ಮರಕುಂಬಿ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net