ಯಶಸ್ವಿನಿ ಯೋಜನೆ ಸದುಪಯೋಗ ಪಡೆದುಕೊಳ್ಳಿ

21-GPT-3
Published on

ಚಾಮರಾನಗರ: ಪರಿಶಿಷ್ಟ ಜಾತಿ ಮತ್ತು ಪಂಗಡದ ಸದಸ್ಯರು ಯಶಸ್ವಿನಿ ಯೋಜನೆಯ ಸದುಪಯೋಗ ಪಡೆದುಕೊಳ್ಳಬೇಕು ಎಂದು ಗುಂಡ್ಲುಪೇಟೆ ಟೌನ್ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಮಧು ಹೇಳಿದರು.


ಶನಿವಾರ ಪಟ್ಟಣದ ಶ್ರೀ ಬಸವೇಶ್ವರ ಕಮ್ಯೂನಿಟಿ ಹಾಲ್‌ನಲ್ಲಿ ಗುಂಡ್ಲುಪೇಟೆ ಟೌನ್ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ 2023-2024ನೇ ಸಾಲಿನ ಸರ್ವ ಸದಸ್ಯರ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಅವರು ಮಾತನಾಡಿದರು.


ಈ ಬಾರಿ ಸಂಘದ ಸದಸ್ಯರ ಬೇಡಿಕೆಯಂತೆ ಬೆಳೆ ಸಾಲ ನೀಡಲು 3.50 ಕೋಟಿ ರೂ. ಹಣಕ್ಕಾಗಿ ಪ್ರಸ್ತಾವನೆ ಸಲ್ಲಿಸಲಾಗಿದೆ. ಪರಿಶಿಷ್ಟ ಜಾತಿ ಮತ್ತು ಪಂಗಡದ ಸದಸ್ಯರ ಉಚಿತ ನೋಂದಣಿ ವ್ಯವಸ್ಥೆ ಇದ್ದು ಅರ್ಹರು ಇದರ ಸದುಪಯೋಗ ಪಡೆದುಕೊಳ್ಳಬೇಕು. ಪಟ್ಟಣದಲ್ಲಿ ಉತ್ತಮ ರೀತಿಯಲ್ಲಿ ಪಿಗ್ಮಿ ವಸೂಲಿ ಆಗುತ್ತಿರುವ ಹಿನ್ನೆಲೆಯಲ್ಲಿ ಸಂಘದ ವತಿಯಿಂದ ವ್ಯಾಪಾರೋದ್ಯಮಕ್ಕೂ ಹೆಚ್ಚಿನ ಸಾಲ ನೀಡಲಾಗುತ್ತಿದೆ.

ಎಲ್ಲರ ಸಹಕಾರದಿಂದ 2023-24 ನೇ ಸಾಲಿನಲ್ಲಿ 14 ಲಕ್ಷ ರೂ. ಲಾಭ ಗಳಿಸಿದೆ ಎಂದು ತಿಳಿಸಿದರು.ಸಂಘದ ಉಪಾಧ್ಯಕ್ಷೆ ರಾಧಾಮಣಿ, ನಿರ್ದೇಶಕರಾದ ಚಂದ್ರಶೇಖರ್, ವೆಂಕಟೇಶ್, ಎಂ.ಚೇತನ್‌ಕುಮಾರ್, ಆರ್.ಎಂ. ಮಹದೇವೇಗೌಡ, ಮಂಜುನಾಥ್, ಶಿವನಾಗಪ್ಪ, ಶಿವಣ್ಣ, ಎನ್.ಕುಮಾರ್, ಮುಜೀಬ್ ಉನ್ನಿಸಾ, ಬ್ಯಾಂಕ್ ಪ್ರತಿನಿಧಿ ಜಿ.ಕಾರ್ತಿಕ್ ಸಂಘದ ಮುಖ್ಯ ಕಾರ್ಯನಿರ್ವಾಹಕಿ ಪಿ. ವನಿತಾ, ಸೇರಿದಂತೆ ಹಲವರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net