

ದೇವರಹಿಪ್ಪರಗಿ: ರೈತರು ಬೆಂಬಲ ಬೆಲೆಯ ತೊಗರಿ ಖರೀದಿ ಕೇಂದ್ರದ ಸದುಪಯೋಗ ಪಡೆದುಕೊಳ್ಳಬೇಕೆಂದು ಪಿಕೆಪಿಎಸ್ ಅಧ್ಯಕ್ಷ ರಾಜುಗೌಡ ನಾಡಗೌಡ ಹೇಳಿದರು.
ಯಾಳವಾರ ಗ್ರಾಮದ ಪಿಕೆಪಿಎಸ್ ಆವರಣದಲ್ಲಿ ನಿರ್ಮಿಸಿದ ತೊಗರಿ ಖರೀದಿ ಕೇಂದ್ರ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿ, ಈ ಭಾಗದ ರೈತರು, ಸಾರ್ವಜನಿಕರ ಅನುಕೂಲಕ್ಕಾಗಿ ತೊಗರಿ ಖರೀದಿ ಕೇಂದ್ರ ತೆರೆದಿದ್ದು, ಯಾಳವಾರ, ಕಡಕೋಳ, ನಾಗರಾಳ ಡೋಣ ಗ್ರಾಮಗಳ ರೈತರು ಇದರ ಪ್ರಯೋಜನ ಪಡೆದುಕೊಳ್ಳಬೇಕು. ಈಗಾಗಲೇ ನೋಂದಣಿಯಾದ ಎಲ್ಲ ರೈತರ ತೊಗರಿ ಖರೀದಿಸಲಾಗುವುದು ಎಂದರು.
ಕಡಕೋಳದ ಮಹಾಲಿಂಗ ಸ್ವಾಮೀಜಿ ಹಾಗೂ ಯಾಳವಾರ ಪಂಚವಟಿ ಆಶ್ರಮದ ಕಾಶೀನಾಥ ಸ್ವಾಮೀಜಿಗಳು ತೊಗರಿ ಕೇಂದ್ರಕ್ಕೆ ಚಾಲನೆ ನೀಡಿದರು.
ಆನಂದಗೌಡ ಮೂಲಿಮನಿ, ತಮ್ಮಣ್ಣ ನಾಯ್ಕೋಡಿ, ರಾಜುಗೌಡ ನ್ಯಾಮಣ್ಣನವರ, ಕುಪೇಂದ್ರ ಜಯವಾಡಗಿ, ಮುತ್ತುಗೌಡ ಪಾಟೀಲ, ಬಸನಗೌಡ ದೊಡ್ಡಮನಿ, ಅರುಣ ಮಶ್ಯಾಳ, ರವಿಗೌಡ ದೊಡಮನಿ, ಅರವಿಂದ ನಾಗರಾಳ, ಶಿವಾನಂದ ನ್ಯಾಮಣ್ಣವರ, ತುಕಾರಾಮ ಹಂಚಾಟಿ, ದೀಪು ಶಾಬಾದಿ, ಆನಂದ ಗರಡಿಮನಿ, ಮುಖ್ಯಕಾರ್ಯನಿರ್ವಾಹಕ ಅಧಿಕಾರ ಚನಬಸಪ್ಪ ಲಗಳಿ ಇತರರಿದ್ದರು.