

ಶಿಗ್ಗಾಂವಿ: ಸ್ಥಳೀಯ ರೈತರು ಉತ್ಪನ್ನಗಳಿಗೆ ಗ್ರಾಮೀಣ ಮಟ್ಟದ ಮಾರುಕಟ್ಟೆಯೊಂದಿಗೆ ಉತ್ತಮ ಲಾಭ ಪಡೆದುಕೊಂಡು ಆರ್ಥಿಕವಾಗಿ ಸಬಲರಾಗಬೇಕು ಎಂದು ಪಿಡಿಒ ಜಿ.ವೈ. ಅಣ್ಣಿಗೇರಿ ಹೇಳಿದರು.
ತಾಲೂಕಿನ ಹಿರೇಮಲ್ಲೂರ ಗ್ರಾಮ ಪಂಚಾಯಿತಿ ಆವರಣದಲ್ಲಿ ಸೋಮವಾರ ಹೊಸದಾಗಿ ಆರಂಭಗೊಂಡ ಹಳ್ಳಿ ಸಂತೆ ಉದ್ಘಾಟನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಗ್ರಾಮೀಣ ಪ್ರದೇಶದ ರೈತರು ಉತ್ಪನ್ನಗಳನ್ನು ತಮ್ಮಲ್ಲಿಯೇ ಮಾರಾಟ ಮಾಡುವ ಸದುದ್ದೇಶದಿಂದ ಹೋಬಳಿ ಮತ್ತು ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಸರ್ಕಾರ ಹಳ್ಳಿ ಸಂತೆ ಪ್ರಾರಂಭಿಸಿದೆ. ಸಾರ್ವಜನಿಕರು ಮತ್ತು ರೈತರು ಹಳ್ಳಿ ಸಂತೆಯ ಲಾಭ ಪಡೆದುಕೊಳ್ಳಬೇಕು ಎಂದರು.
ಗ್ರಾಪಂ ಅಧ್ಯಕ್ಷೆ ಜಯವ್ವ ಸಾವಕ್ಕನವರ, ಸದಸ್ಯರಾದ ರೂಪಾ ಹುತ್ತನಗೌಡ್ರ, ಕಮಲಮ್ಮ ಮಾರನಬಿಡ, ಗಂಗವ್ವ ಪಾಟೀಲ, ಶಂಕ್ರಣ್ಣ ಮಾರನಬಿಡ, ಸಂತೋಷ ದೊಡ್ಮನಿ, ಮೌಲಾಸಾಬ್ ಕಳಸ, ಗಂಗಣ್ಣ ವಾಲ್ಮೀಕಿ, ಬಸಣ್ಣ ದಾಸರ ಇತರರಿದ್ದರು.