

ಶಿರೋಳ: ಸರ್ಕಾರ ಕ್ವಿಂಟಾಲ್ ಹೆಸರಿಗೆ 8,682 ದರ ನೀಡಿದೆ. ರೈತರು ಈ ನೆರವಿನ ಸದುಪಯೋಗ ಪಡೆಯಬೇಕು ಎಂದು ಖಾನಾಪುರದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಮಲ್ಲನಗೌಡ ತಿಮ್ಮನಗೌಡ್ರ ಹೇಳಿದರು.
ಸಮೀಪದ ಖಾನಾಪುರ ಗ್ರಾಮದಲ್ಲಿ ಬೆಂಬಲ ಬೆಲೆಯ ಹೆಸರು ಖರೀದಿ ಕೇಂದ್ರ ಉದ್ಘಾಟಿಸಿ ಮಾತನಾಡಿದರು. ನಿರ್ದೇಶಕ ಶಂಕರಗೌಡ ಕಗದಾಳ ಮಾತನಾಡಿ, ಬೆಂಬಲ ಬೆಲೆಯಲ್ಲಿ ಯಾವದೇ ಬೆಳೆಗೆ ಖರೀದಿ ಕೇಂದ್ರಗಳನ್ನು ಫಸಲು ರೈತರ ಕೈಸೇರುವ ಮುನ್ನವೇ ಪ್ರಾರಂಭ ಮಾಡಬೇಕು ಎಂದರು.
13 ಶಿರೋಳ ಪೊಟೋ 1 :- ಶಿರೋಳ ಸಮೀಪದ ಖಾನಾಪುರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಮಲ್ಲನಗೌಡ ತಿಮ್ಮನಗೌಡ್ರ ಹೆಸರು ಖರೀದಿ ಕೇಂದ್ರ ಉದ್ಘಾಟಿಸಿದರು. ವೆಂಕನಗೌಡ ಕರಿಗೌಡ್ರ, ಹನಮಂತ ಮದುಗುಣಕಿ, ಫಕೀರಗೌಡ ಕಗದಾಳ, ಶಿವಪುತ್ರಪ್ಪ ವಾಲಿಕಾರ ಇದ್ದರು.