

ಬೋರಗಾಂವ: ಪಟ್ಟಣದ ಶ್ರೀ ಅರಿಹಂತ ಕೋ-ಆಪ್ ಕ್ರೆಡಿಟ್ ಸೊಸೈಟಿ ಸದಸ್ಯರ ಮಕ್ಕಳ ಶಿಕ್ಷಣಕ್ಕೆ ಅಣಿಯಾಗುವ ಉದ್ದೇಶದಿಂದ ಎಂಟು ವರ್ಷಗಳಿಂದ ಅರಿಹಂತ ವಿದ್ಯಾರ್ಥಿವೇತನ ಯೋಜನೆ ಪ್ರಾರಂಭಿಸಿದ್ದು, ಪ್ರತಿ ವರ್ಷ ನೂರಕ್ಕೂ ಹೆಚ್ಚು ವಿದ್ಯಾರ್ಥಿಗಳು ಇದರ ಲಾಭ ಪಡೆದುಕೊಳ್ಳುತ್ತಿದ್ದಾರೆ ಎಂದು ಸಂಸ್ಥೆಯ ಸಿಇಒ ಅಶೋಕ ಬಂಕಾಪುರೆ ತಿಳಿಸಿದರು.
ಪಟ್ಟಣದಲ್ಲಿ ಶನಿವಾರ ಹಮ್ಮಿಕೊಂಡಿದ್ದ ವಿದ್ಯಾರ್ಥಿವೇತನ ವಿತರಣೆ ಕಾರ್ಯಕ್ರಮದಲ್ಲಿ ಮಾತನಾಡಿ, ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ದಿ.ರಾವಸಾಹೇಬ ಪಾಟೀಲ ಮಾರ್ಗದರ್ಶನದಂತೆ ಪ್ರತಿ ವರ್ಷ ವಿತರಿಸಲಾಗುತ್ತಿದೆ. 10 ಮತ್ತು 12ನೇ ತರಗತಿಯಲ್ಲಿ ಶೇ.75ಕ್ಕಿಂತ ಹೆಚ್ಚು ಅಂಕ ಪಡೆದ 113 ವಿದ್ಯಾರ್ಥಿಗಳಿಗೆ ₹4,38,000 ವಿತರಿಸಲಾಗಿದೆ. ಸಂಸ್ಥೆಯ ಯೋಜನೆ ಲಾಭ ಪಡೆದುಕೊಳ್ಳಬೇಕು ಎಂದರು.
ಸುಭಾಷ ಶೆಟ್ಟಿ, ಜಯಪಾಲ ನಾಗಾವೆ, ಪೀರಗೌಡ ಪಾಟೀಲ, ಭುಜಗೋಡ ಪಾಟೀಲ, ರಾಜು ಮಗದುಮ್, ಜಂಬು ಮಳವಾಡೆ, ಸಂದೀಪ ಪಾಟೀಲ, ಶ್ರೀಕಾಂತ ವಸವಾಡೆ, ರಾಜೇಂದ್ರ ಐದಮಾಳೆ, ಅಭಿನಂದನ ಬೆನಾಡೆ, ಅಭಯಕುಮಾರ ಖೋತ, ಭರತ ಗುಂಡೆ ಇದ್ದರು.