

ನಂಜನಗೂಡು: ಕಂದಾಯ ಇಲಾಖೆ ವತಿಯಿಂದ ಪೌತಿ ಖಾತೆ ಆಂದೋಲನ ಕಾರ್ಯಕ್ರಮವನ್ನು ಸಾರ್ವಜನಿಕರು ಮತ್ತು ರೈತರು ಸದುಪಯೋಗಪಡಿಸಿಕೊಳ್ಳಬೇಕೆಂದು ತಾಲೂಕು ದಂಡಾಧಿಕಾರಿ ಶಿವಕುಮಾರ್ ಕಾಸನೂರು ಮನವಿ ಮಾಡಿದರು.
ತಾಲೂಕಿನದಿಂದ ಸುಮಾರು 40 ಸಾವಿರಕ್ಕೂ ಹೆಚ್ಚು ಪೌತಿ ಖಾತೆಗಳು ಬಾಕಿ ಉಳಿದಿವೆ. ಸುಮಾರು ಮೂರು ತಲೆಮಾರಿನ ಪೌತಿ ಖಾತೆಗಳು ಹಾಗೆ ಉಳಿದಿದ್ದು, ಈ ಬಗ್ಗೆ ಸಂಬಂಧಪಟ್ಟ ಖಾತೆದಾರರು ತಮ್ಮ ಜಮೀನಿಗೆ ಸಂಬಂಧಿಸಿದಂತೆ ಪೌತಿ ಖಾತೆಗಳನ್ನು ಮಾಡಿಸಿಕೊಳ್ಳಬೇಕಾಗಿದೆ. ಈ ಬಗ್ಗೆ ತಾಲೂಕಿನ ಹೋಬಳಿ ಕೇಂದ್ರಗಳಲ್ಲಿ ಪೌತಿ ಖಾತೆ ಆಂದೋಲನ ಹಮ್ಮಿಕೊಳ್ಳಲಾಗಿದೆ.
ನ.18 ಮತ್ತು ನ.25 ರಂದು ಬಿಳಿಗೆರೆ ಹೋಬಳಿ, ನ.25 ಮತ್ತು ನ.30 ರಂದು ಹುಲ್ಲಹಳ್ಳಿ ಹೋಬಳಿ ಕೇಂದ್ರದಲ್ಲಿ, ಚಿಕ್ಕಯ್ಯನಛತ್ರ ಹೋಬಳಿ ಡಿ.2 ಮತ್ತು ಡಿ.4, ಡಿ.4 ಮತ್ತು ಡಿ.9 ಕಸಬಾ ಹೋಬಳಿ, ಡಿ.11ರಂದು ದೊಡ್ಡ ಕವಲಂದೆ ಹೋಬಳಿ ವ್ಯಾಪ್ತಿಯ ಪೌತಿ ಖಾತೆ ಆಂದೋಲನ ನಡೆಯಲಿದೆ ಎಂದು ತಿಳಿಸಿದ್ದಾರೆ.