ಅವಕಾಶ ಉಪಯೋಗಿಸಿ ಉನ್ನತ ಸ್ಥಾನಕ್ಕೇರಿ

gan (11)
Published on

ಕುಂದಾಪುರ: ನಮಗೆ ಹಿಂದೆ ಕಲಿಕೆಗೆ ಬಹಳ ಕಷ್ಟ ಇತ್ತು. ಈಗ ಹಾಗಲ್ಲ ಕಲಿಕೆಗೆ ಪೂರಕವಾದ ವಾತಾವರಣ ಅವಕಾಶ ತುಂಬಾ ಇದೆ. ಸರ್ಕಾರ, ಸಂಸಂಸ್ಥೆಗಳು, ದಾನಿಗಳು, ಮಕ್ಕಳ ವಿದ್ಯಾಭ್ಯಾಸಕ್ಕೆ ತುಂಬಾ ಉತ್ತೇಜನ, ಸಹಕಾರ ನೀಡುತ್ತಿದ್ದಾರೆ. ಇದನ್ನು ಉಪಯೋಗಿಸಿಕೊಂಡು ಉತ್ತಮ ಭವಿಷ್ಯ ರೂಪಿಸಿಕೊಳ್ಳಿ ಎಂದು ಉದ್ಯಮಿ ಹೊಸೂರು ದೇವಲ್ಕುಂದಮನೆ ಶಿವರಾಮ ಶೆಟ್ಟಿ ಹೇಳಿದರು.

ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಳದ ಹೊಸೂರು ಪ್ರೌಢಶಾಲೆ ಮಕ್ಕಳಿಗೆ ಕೊಡುಗೆಯಾಗಿ ನೀಡಿದ ಟ್ರ್ಯಾಕ್ ಸೂಟ್‌ಗಳನ್ನು ವಿತರಿಸಿ ಮಾತನಾಡಿದರು.

ಮುಖ್ಯ ಶಿಕ್ಷಕ ಎ. ಶಿವರಾಮ ಅಧ್ಯಕ್ಷತೆ ವಹಿಸಿದ್ದರು. ಟ್ರ್ಯಾಕ್‌ಸೂಟ್ ಕೊಡುಗೆ ನೀಡಿದ ಶಿವರಾಮ ಶೆಟ್ಟಿ ಅವರನ್ನು ಗೌರವಿಸಲಾಯಿತು.

ಇಡೂರು ಗ್ರಾಮ ಪಂಚಾಯಿತಿ ಸದಸ್ಯ ಅಶೋಕ್ ಕುವಾರ್ ಶೆಟ್ಟಿ ಮಾತನಾಡಿದರು. ಇಡೂರು ಗ್ರಾಮ ಪಂಚಾಯಿತಿ ಸದಸ್ಯ ರಾವೇಂದ್ರ ಹೊಸೂರು, ನಿವೃತ್ತ ಮುಖ್ಯ ಶಿಕ್ಷಕ ಚಂದ್ರ ಶೆಟ್ಟಿ, ಹಳೇ ವಿದ್ಯಾರ್ಥಿ ಸಂ ಕಾರ್ಯದರ್ಶಿ ಪ್ರವೀಣ್ ಕುವಾರ್ ಶೆಟ್ಟಿ ಉಪಸ್ಥಿತರಿದ್ದರು. ಸಹಶಿಕ್ಷಕ ಉದಯ ನಾಯ್ಕ ವಂದಿಸಿದರು. ದೈಹಿಕ ಶಿಕ್ಷಣ ಶಿಕ್ಷಕ ಸಂತೋಷ್ ಶೆಟ್ಟಿ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net