

ಮುಳಬಾಗಿಲು: ತಾಲೂಕು ಪ್ರಾಥಮಿಕ ಸಹಕಾರ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್ನಿಂದ ಸಾಲ ಪಡೆದಿರುವ ಎಲ್ಲ ಬಾಕಿ ಕಂತುಗಳನ್ನು ಸೆ.30ರ ಸಂಜೆ 5.30 ರ ಒಳಗೆ ಪಾವತಿ ಮಾಡಿ ಬಡ್ಡಿಮನ್ನಾ ಯೋಜನೆ ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಬ್ಯಾಂಕಿನ ಅಧ್ಯಕ್ಷ ಕೊತ್ತೂರು ಗಂಗಿರೆಡ್ಡಿ ತಿಳಿಸಿದರು.
ಬ್ಯಾಂಕಿನ ಸಭಾಂಗಣದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಸಹಕಾರಿ ಕ್ಷೇತ್ರ ಈಗ ಗಣಿಕೀಕರಣಗೊಂಡಿರುವುದರಿಂದ ಈ ಹಿಂದೆ ಇದ್ದಂತೆ ಹಿಂದಿನ ದಿನಾಂಕಗಳು ಹಾಕಿ ಹಣ ಕಟ್ಟಿಸಿಕೊಳ್ಳಲು ಸಾಧ್ಯವಾಗುವುದಿಲ್ಲ. ಆದುದರಿಂದ ಸಾಲ ಪಡೆದಿರುವ ರೈತರು ಸಮಯಕ್ಕೆ ಸರಿಯಾಗಿ ಕಂತು ಮುರಪಾವತಿಸಿ ಬಡ್ಡಿ ಸೌಲಭ್ಯ ಪಡೆಯುವುದರ ಜತೆಗೆ ದಂಡದಿಂದ ತಪ್ಪಿಸಿಕೊಳ್ಳಬೇಕೆಂದು ಸಲಹೆ ನೀಡಿದರು.
ನಿರ್ದೇಶಕ ಆರ್. ಆರ್.ರಾಜೇಂದ್ರಗೌಡ ಮಾತನಾಡಿ, ಸಾಲ ಪಡೆದಿುರವ ರೈತರು ಸಕಾಲಕ್ಕೆ ಮರುಪಾವತಿ ಮಾಡಿದರೆ ಮಾತ್ರ ಬ್ಯಾಂಕಿಗೆ ಹೊಸ ಸಾಲ ಸರ್ಕಾರ ನೀಡುತ್ತದೆ. ಇಲ್ಲದಿದ್ದಲ್ಲಿ ತಡೆ ಒಡ್ಡುತ್ತದೆ ಇದರಿಂದ ಹೊಸ ಸಾಲ ನೀಡಲು ಸಾಧ್ಯವಾಗುವುದಿಲ್ಲ. ಬಾಕಿ ಉಳಿಸಿಕೊಂಡ ರೈತರಿಗೂ ಬಡ್ಡಿ ಚಕ್ರಬಡ್ಡಿ ಹೊರೆ ಉಂಟಾಗಿ ಸುಸ್ತಿದಾರಾರಗುವುದರಿಂದ ಒಂದೆಡೆ ಬ್ಯಾಂಕಿಗೂ ಕಷ್ಟ. ಇನ್ನೊಂದೆಡೆ ನಿಮಗೂ ಸಂಕಷ್ಟ ಉಂಟಾಗುತ್ತದೆ. ಆದುದರಿಂದ ಏನೇ ಸಮಸ್ಯೆಗಳಿದ್ದರೂ ಸೆ.21ರಂದು ಬ್ಯಾಂಕಿನ ಮುಂಭಾಗ ಏರ್ಪಡಿಸಿರುವ ಸಭೆಯಲ್ಲಿ ಸಮಸ್ಯೆಗಳಿಗೆ ಪರಿಹಾರ ಕೊಂಡುಕೊಳ್ಳಬೇಕು ಎಂದು ತಿಳಿಸಿದರು.
ಪಿಎಲ್ ಡಿ ಬ್ಯಾಂಕ್ ನಿರ್ದೇಶಕ ಗೊಲ್ಲಹಳ್ಳಿ ಕೆ.ಸತೀಶ್, ಉತ್ತನೂರು ವಿಎಸ್ಎಸ್ಎಲ್ ಅಧ್ಯಕ್ಷ ಗುಜ್ಜನಹಳ್ಳಿ ಮಂಜುನಾಥ್, ಮುಖಂಡಾರದ ಎಮ್ಮೆನತ್ತ ಕೆ.ನಾಗಾರಜರೆಡ್ಡಿ, ಗೋಪಾಲಪುರ ಶ್ರೀನಿವಾಸ, ಕೃಷ್ಣಗಿರಿ ಚಂದ್ರಪ್ಪ, ಎಂ.ಅಗ್ರಹಾರ ಎಂ. ನಾಗಾರಜ್ ಮತ್ತಿತರರು ಇದ್ದರು.