

ಹಾನಗಲ್ಲ: ಜ್ಞಾನ ಹೆಚ್ಚಿಸಿಕೊಳ್ಳುವ ನಿಟ್ಟಿನಲ್ಲಿ ಗ್ರಾಮೀಣ ಪ್ರದೇಶಗಳಲ್ಲಿ ಅರಿವು ಕೇಂದ್ರ ತೆರೆಯಲಾಗಿದೆ. ವಿದ್ಯಾರ್ಥಿಗಳು ಮತ್ತು ಗ್ರಾಮಸ್ಥರು ಕೇಂದ್ರಗಳ ಸದುಪಯೋಗ ಪಡೆಯಲಿ ಎಂದು ಶಾಸಕ ಶ್ರೀನಿವಾಸ ಮಾನೆ ಹೇಳಿದರು.
ತಾಲೂಕಿನ ಹರವಿ ಗ್ರಾಮದಲ್ಲಿ ಅರಿವು ಕೇಂದ್ರ ಉದ್ಘಾಟಿಸಿ ಮಾತನಾಡಿದ ಅವರು, ವಿದ್ಯಾರ್ಥಿಗಳು ಮತ್ತು ಗ್ರಾಮಸ್ಥರ ಹಿತದೃಷ್ಟಿಯಿಂದ ರಾಜ್ಯ ಸರ್ಕಾರ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಿಂದ ಅರಿವು ಯೋಜನೆ ಜಾರಿಗೊಳಿಸಿದೆ. ಈ ಕೇಂದ್ರಗಳಲ್ಲಿ ದಿನಪತ್ರಿಕೆ, ಕಥೆ, ಸಾಹಿತ್ಯದ ಪುಸ್ತಕಗಳಿವೆ. ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಂಬಂಧಿಸಿದ ಪುಸ್ತಕಗಳನ್ನು ಒದಗಿಸಲಾಗಿದೆ. ಕೇಂದ್ರದಲ್ಲಿ ಹತ್ತು, ಹಲವು ವಿಷಯ, ಸಂಗತಿ ತಿಳಿದುಕೊಳ್ಳಬಹುದಾಗಿದೆ ಎಂದರು.
ಗ್ರಾಪಂ ಸದಸ್ಯ ಬಸವರಾಜಪ್ಪ ಭದ್ರಣ್ಣನವರ, ತಾಲೂಕು ಶಿಕ್ಷಣ ಸುಧಾರಣಾ ಸಮಿತಿ ಸದಸ್ಯ ಗನಿಪಟೇಲ ಪಾಟೀಲ, ಬಗರ್ಹುಕುಂ ಸಮಿತಿ ಅಧ್ಯಕ್ಷ ಪುಟ್ಟಪ್ಪ ನರೇಗಲ್, ಬಿಇಒ ವಿ.ವಿ. ಸಾಲಿಮಠ, ಮುಖಂಡರಾದ ನಾಗರಾಜ ಎರೇಶೀಮಿ, ಸುರೇಶ ಎರೇಶೀಮಿ, ಶಂಭುಲಿಂಗಪ್ಪ ಭದ್ರಣ್ಣನವರ, ಶಿವಾನಂದ ಭದ್ರಣ್ಣನವರ, ಚನ್ನಪ್ಪ ಬಾಣದ, ಸಂಗಪ್ಪ ಮಳೆಪ್ಪನವರ, ರವಿ ಭದ್ರಣ್ಣನವರ, ಪುಟ್ಟಪ್ಪ ಹರಿಜನ, ಶೇಕಪ್ಪ ಹರಿಜನ, ಸಂಗಪ್ಪ ಬಾಣದ, ಪ್ರಕಾಶ ಅಂಗಡಿ, ಇಸ್ಮಾಯಿಲ್ಸಾಬ ಹರಪನಹಳ್ಳಿ, ಸಂಗಪ್ಪ ತಳವಾರ ಇದ್ದರು.