ಆರೋಗ್ಯ ಯೋಜನೆ ಸದುಪಯೋಗ ಪಡೆದುಕೊಳ್ಳಿ

AYUSHMANBHAV PROGRAMME
Published on

ಗುತ್ತಲ: ರಾಜ್ಯ ಸರ್ಕಾರ ಜನರ ಆರೋಗ್ಯದ ಬಗ್ಗೆ ಅತ್ಯಂತ ಕಾಳಜಿಯುಳ್ಳ ಯೋಜನೆಗಳನ್ನು ಜಾರಿಗೆ ತಂದಿದ್ದು, ಇವುಗಳನ್ನು ಜನರು ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಜಿಪಂ ಮಾಜಿ ಸದಸ್ಯ ಸಿ.ಬಿ. ಕುರುವತ್ತಿಗೌಡ್ರ ಹೇಳಿದರು.

ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಆಯುಷ್ಮಾನ್​ಭವ ಆರೋಗ್ಯ ಮಂಥನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಪಪಂ ಸದಸ್ಯ ಪ್ರದೀಪ ಸಾಲಗೇರಿ ಮಾತನಾಡಿ, ಸಮುದಾಯ ಆಸ್ಪತ್ರೆಯಲ್ಲಿ ಹಲವು ಸಮಸ್ಯೆಗಳ ಬಗ್ಗೆ ವೈದ್ಯಾಧಿಕಾರಿಗಳು ಮನವಿ ಮಾಡಿದ್ದಾರೆ. ಎಲ್ಲ ಸಮಸ್ಯೆಗಳನ್ನು ಶಾಸಕರು, ಪಪಂ ಅಧಿಕಾರಿಗಳೊಂದಿಗೆ ರ್ಚಚಿಸಿ ಶೀಘ್ರದಲ್ಲಿ ಬಗೆಹರಿಸಲಾಗುವುದು ಎಂದರು.

ತಾಲೂಕು ಆರೋಗ್ಯ ಅಧಿಕಾರಿ ಡಾ. ಪ್ರಭಾಕರ ಕುಂದೂರ, ಕಾಂಗ್ರೆಸ್ ಜಿಲ್ಲಾ ಉಪಾಧ್ಯಕ್ಷ ಈರಪ್ಪ ಲಮಾಣಿ ಮಾತನಾಡಿದರು.

ಶಿಬಿರದಲ್ಲಿ ಸುಮಾರು 20 ಜನ ರಕ್ತದಾನ ಮಾಡಿದರು. ಆರೋಗ್ಯ ಮೇಳದಲ್ಲಿ 1260 ಜನ ವಿವಿಧ ಕಾಯಿಲೆಗಳಿಗೆ ಚಿಕಿತ್ಸೆ ಪಡೆಯಲು ಸಲಹೆ ಪಡೆದುಕೊಂಡರು.

ಆಡಳಿತ ವೈದ್ಯಾಧಿಕಾರಿ ಡಾ.ಅಭಿನಂದನ ಸಾಹುಕಾರ, ಉಪತಹಸೀಲ್ದಾರ್ ಎಂ.ಡಿ. ಕಿಚಡೇರ, ಕಂದಾಯ ನಿರೀಕ್ಷಕ ಆರ್.ಎನ್. ಮಲ್ಲಾಡದ, ಮಾಜಿ ಉಪಾಧ್ಯಕ್ಷ ನಾಗರಾಜ ಏರಿಮನಿ, ಪಪಂ ಸದಸ್ಯರಾದ ಮಹ್ಮದಹನೀಫ್ ರಿತ್ತಿ, ಭರಮಪ್ಪ ಹಾದಿಮನಿ, ಅಜಯ ಬಂಡಿವಡ್ಡರ, ದೀಪಾ ಭರಡಿ, ಶಕುಂತಲಾ ಗುತ್ತಲ, ಸಾವಿತ್ರವ್ವ ಗಂಟಿ, ಪಪಂ ಮುಖ್ಯಾಧಿಕಾರಿ ಡಾ.ದೇವಾನಂದ ದೊಡ್ಮನಿ, ಮಂಜುರಡ್ಡಿ ಮಾಗಡಿ, ಡಾ.ಶ್ರೀವಿದ್ಯಾ ಅನಂತರೆಡ್ಡಿ, ಡಾ.ದೀಪ್ತಿ ಮಮದಾಪುರ, ಡಾ.ಬೀರೇಶ, ಡಾ.ಯೋಗೇಂದ್ರ, ಪಪಂ ಸದಸ್ಯರು, ಆರೋಗ್ಯ ಇಲಾಖೆಯ ಸಿಬ್ಬಂದಿ, ಆಶಾ ಕಾರ್ಯಕತೆಯರು ಇತರರು ಇದ್ದರು.

ಆರೋಗ್ಯ ಸಹಾಯಕ ಮಾಲತೇಶ ಪುಟ್ಟನಗೌಡ್ರ ನಿರೂಪಿಸಿದರು. ಆಪ್ತ ಸಮಾಲೋಚಕ ನಾಗರಾಜ ಈಳಗೇರ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net