ಆರೋಗ್ಯ ಶಿಬಿರದ ಸದುಪಯೋಗ ಪಡೆಯಿರಿ

9-SGN-1 camp
Published on

ಶಿಗ್ಗಾಂವಿ: ಗ್ರಾಮೀಣ ಜನರ ಆರೋಗ್ಯ ಜಾಗೃತಿಗೆ ಉಚಿತ ಆರೋಗ್ಯ ಶಿಬಿರಗಳು ಸಹಕಾರಿಯಾಗಿವೆ. ಬಡ ಜನತೆ ತಮ್ಮ ಆರೋಗ್ಯದ ಬಗ್ಗೆ ನಿರ್ಲಕ್ಷ್ಯ ತೋರದೆ ತಜ್ಞ ವೈದ್ಯರು ಲಭ್ಯವಿದ್ದಾಗ ಶಿಬಿರದಲ್ಲಿ ಪಾಲ್ಗೊಂಡು ಸದುಪಯೋಗ ಪಡೆದುಕೊಳ್ಳಬೇಕು ಎಂದು ಜೆಸಿಐ ಶಿಗ್ಗಾಂವಿ ಘಟಕದ ಅಧ್ಯಕ್ಷ ಜೆಸಿ ಅನಿತಾ ಡಿ. ಗೊಬ್ಬರಗುಂಪಿ ಹೇಳಿದರು.

ತಾಲೂಕಿನ ನೀರಲಗಿ ಗ್ರಾಮದ (ಎನ್.ಎಂ. ತಡಸ) ಸರ್ಕಾರಿ ಪ್ರೌಢಶಾಲೆಯಲ್ಲಿ ಶನಿವಾರ ಏರ್ಪಡಿಸಿದ್ದ ಜೆಸಿಐ ಶಿಗ್ಗಾಂವಿ ವತಿಯಿಂದ ಜೈಥ್ರಾ ಜೆಸಿ ಸಪ್ತಾಹ - 2023ರ ಉದ್ಘಾಟನಾ ಸಮಾರಂಭ ಹಾಗೂ ಪ್ರಥಮ ದಿನದ ಕಾರ್ಯಕ್ರಮವಾದ ಉಚಿತ ಆರೋಗ್ಯ ತಪಾಸಣೆ ಶಿಬಿರ ಮತ್ತು ಉಚಿತ ಔಷಧ ವಿತರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಶಿಬಿರದ ನೇತೃತ್ವವನ್ನು ನಮ್ಮ ಶಿಗ್ಗಾಂವಿ ಜೆಸಿಐ ಘಟಕ ಸ್ವಯಂಪ್ರೇರಣೆಯಿಂದ ನಿರ್ವಹಿಸುತ್ತಿದ್ದು, ಗ್ರಾಮೀಣ ಜನತೆಯ ಆರೋಗ್ಯ ಕಾಪಾಡುವ ನಿಟ್ಟಿನಲ್ಲಿ ನಮ್ಮ ಸಂಸ್ಥೆಯು ಮಹತ್ತರ ಹೆಜ್ಜೆ ಇಡುತ್ತಿದೆ. ಆರೋಗ್ಯ ಶಿಬಿರಗಳಿಂದ ಬಡವರಿಗೆ ಸಾಕಷ್ಟು ಅನುಕೂಲವಾಗುತ್ತದೆ. ಆರೋಗ್ಯವಾಗಿದ್ದರೆ, ಸುಖವಾಗಿ ಬಾಳಬಹುದು. ಇಲ್ಲವಾದರೆ ದುಡಿದ ಹಣವನ್ನು ಆಸ್ಪತ್ರೆಗೆ ಖರ್ಚು ಮಾಡಬೇಕಾಗುತ್ತದೆ. ಆದ್ದರಿಂದ ರೋಗದ ಲಕ್ಷಣ ಕಾಣುವ ಮುನ್ನವೇ ಆರೋಗ್ಯ ತಪಾಸಣೆ ಮಾಡಿಸಿಕೊಂಡು ವೈದ್ಯರ ಸಲಹೆ ಪಾಲಿಸಬೇಕು ಎಂದರು.

ಜೆ.ಸಿ. ಸದಸ್ಯರು ಶಿಗ್ಗಾಂವಿ ಪಟ್ಟಣದ ವೈದ್ಯರಾದ ಡಾ.ಲತಾ ಜಿ.ನಿಡಗುಂದಿ, ಡಾ.ಕುಮಾರಗೌಡ ಎಚ್. ಪಾಟೀಲ, ಡಾ. ಚಂದ್ರಿಕಾ ಕೆ. ಪಾಟೀಲ ಆರೋಗ್ಯ ಶಿಬಿರ ನಡೆಸಿಕೊಟ್ಟರು. ಮುಖ್ಯೋಪಾಧ್ಯಾಯ ಜಗದೀಶ ಹುಲ್ಲೂರ, ಜಿ.ಎನ್. ಯಲಿಗಾರ, ಡಾ. ಗೊಬ್ಬರಗುಂಪಿ, ಗುರುರಾಜ ಹುಚ್ಚಣ್ಣನವರ, ಎಸ್.ಐ. ಮಡಿವಾಳರ, ಟಿ.ಆರ್. ಮಹದೇವಯ್ಯ, ಪದ್ಮಶ್ರೀ ಪಾಟೀಲ, ಇತರರಿದ್ದರು. ಜೆಸಿ ರಾಘವೇಂದ್ರ ದೇಶಪಾಂಡೆ ಕಾರ್ಯಕ್ರಮ ನಿರ್ವಹಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net