ಆರೋಗ್ಯ ಶಿಬಿರ ಸದುಪಯೋಗ ಪಡಿಸಿಕೊಳ್ಳಿ

JOYIDA AROGYA SHIBHIRA
Published on

ಜೊಯಿಡಾ: ಸಂಜೀವಿನಿ ಸೇವಾ ಸಂಸ್ಥೆಯು ಕಳೆದ 25 ವರ್ಷಗಳಿಂದ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡು ಸ್ಥಳೀಯರಿಗೆ ಉಚಿತವಾಗಿ ಸೇವೆ ಸಲ್ಲಿಸುತ್ತಿದೆ. ಜನರು ಉಚಿತ ನೇತ್ರ ಹಾಗೂ ಆರೋಗ್ಯ ಚಿಕಿತ್ಸೆ ಶಿಬಿರದ ಲಾಭ ಪಡೆದುಕೊಳ್ಳಬೇಕು ಎಂದು ರಾಜ್ಯ ಕಾಂಗ್ರೆಸ್ ಕಿಸಾನ್ ಮೋರ್ಚಾ ಪ್ರಧಾನ ಕಾರ್ಯದರ್ಶಿ ರವಿ ರೇಡ್ಕರ ಹೇಳಿದರು.

ಸಂಜೀವಿನಿ ಸೇವಾ ಟ್ರಸ್ಟ್, ಏಕಲ ಅಭಿಯಾನ ಬೆಳಗಾವಿ ಹಾಗೂ ಕಾರವಾರದ ಕ್ರುಗರ್ ಫೌಂಡೇಷನ್ ಆಶ್ರಯದಲ್ಲಿ ಶುಕ್ರವಾರ ತಾಲೂಕಿನ ಬಾಮಣಗಿಯಲ್ಲಿ ಶುಕ್ರವಾರ ಆಯೋಜಿಸಿದ್ದ ಉಚಿತ ನೇತ್ರ ಹಾಗೂ ಆರೋಗ್ಯ ಚಿಕಿತ್ಸೆ ಶಿಬಿರದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಡಾ. ವೈಶಾಲಿ ಕಿತ್ತೂರ, ನೇತ್ರ ತಜ್ಞ ಡಾ. ಸಂತೋಷ ನಂದಗಡಕರ, ವಸಂತ ಬಾಳಿಗಾ, ಗಣೇಶ ವಿರಕ್ತಿಮಠ ರೋಗಿಗಳ ತಪಾಸಣೆ ನಡೆಸಿದರು. ಸಂಜೀವಿನಿ ಸೇವಾ ಟ್ರಸ್ಟ್ ಅಧ್ಯಕ್ಷ ಸುನೀಲ ದೇಸಾಯಿ, ಸಮಿತಿ ಸದಸ್ಯರಾದ ನಾರಾಯಣ ಹೆಬ್ಬಾರ, ದಾಮು ಮಿರಾಶಿ, ಸುಭಾಷ ಗಾವಕರ, ಎಸ್​ಡಿಎಂಸಿ ಅಧ್ಯಕ್ಷ ಶಿವಾಜಿ ಪಾಟೀಲ, ಆಕಾಶ ನಾಯ್ಕ, ಚಂದ್ರಕಾಂತ ರಿತ್ತಿ, ಆರಿಷ್ ಖಾದರ್, ತುಷಾರ ಸುಂಗಟಣಕರ, ತೋಪು ಗಾವಡಾ, ಲಕ್ಷ್ಮಣ ಮಿರಾಶಿ, ವನಿತಾ ನಾಯ್ಕ, ಈಶ್ವರಿ ದೇಸಾಯಿ, ಈಶ್ವರ ವಡ್ಡರ, ಇತರರು ಉಪಸ್ಥಿತರಿದ್ದರು.

ಸಂಜೀವಿನಿ ಸಂಯೋಜಕ ಜಯಂತ ಗಾವಡಾ, ಮುಖ್ಯಾಧ್ಯಾಪಕ ಡಿ.ಎಂ. ಜೆರಟಗಿ ಕಾರ್ಯಕ್ರಮ ನಿರ್ವಹಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net